ಅಯೋಧ್ಯೆಯಲ್ಲಿ ರಾಮಮಂದಿರ 2025ಕ್ಕೆ  ನಿರ್ಮಾಣವಾಗಬಹುದು: ಆರ್‍ಎಸ್‍ಎಸ್
ಮೈಸೂರು

ಅಯೋಧ್ಯೆಯಲ್ಲಿ ರಾಮಮಂದಿರ 2025ಕ್ಕೆ ನಿರ್ಮಾಣವಾಗಬಹುದು: ಆರ್‍ಎಸ್‍ಎಸ್

January 19, 2019

ಪ್ರಯಾಗ್ ರಾಜ್ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್‍ಎಸ್), ರಾಮಮಂದಿರವನ್ನು 2025ಕ್ಕೆ ನಿರ್ಮಿಸಲಾಗುವುದು ಎಂದು ವ್ಯಂಗ್ಯವಾಗಿ ಹೇಳಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ರಾಜಕೀಯ ವಿವಾದಗಳು ನಡೆಯುತ್ತಿರುವಾಗಲೇ ಈ ಹೇಳಿಕೆ ನೀಡಿರುವ ಆರ್‍ಎಸ್‍ಎಸ್ ಪ್ರಧಾನ ಕಾರ್ಯದರ್ಶಿ ಬೈಯಾಜಿ ಜೋಷಿ, 2025ರಲ್ಲಿ ರಾಮ ಮಂದಿರ ನಿರ್ಮಾಣ ಆರಂಭ ವಾದಾಗ ದೇಶ ಕೂಡ ವೇಗವಾಗಿ ಅಭಿವೃದ್ಧಿ ಹೊಂದುತ್ತದೆ. 1952ರಲ್ಲಿ ಸೋಮನಾಥ ದೇವಾಲಯ ಕಟ್ಟಿದ ನಂತರ ದೇಶ ಕಂಡ ಪ್ರಗತಿ ರೀತಿಯಲ್ಲಿಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ನಂತರ ದೇಶ ಪ್ರಗತಿ ಕಾಣಲಿದೆ ಎಂದು ಜೋಷಿ ಹೇಳಿ ದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಗೆದ್ದರೂ ಕೂಡ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಮೋದಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವುದಿಲ್ಲ ಎಂದು ಆರ್‍ಎಸ್‍ಎಸ್ ಆರೋಪಿಸಿದೆ. ಅಯೋಧ್ಯೆಯಲ್ಲಿ ರಾಮಜನ್ಮಭೂಮಿ-ಬಾಬ್ರಿ ಮಸೀದಿ ನಿರ್ಮಾಣ ವಿವಾದ ಕಳೆದ 8 ವರ್ಷಗಳಿಂದ ಸುಪ್ರೀಂ ಕೋರ್ಟ್ ಮುಂದಿದ್ದು ವಿಚಾರಣೆಯನ್ನು ಶೀಘ್ರ ಮುಗಿಸುವಂತೆ ಪಕ್ಷಗಳು ಮತ್ತು ಹಲವು ಬಲ ಪಂಥೀಯ ಸಂಘಟನೆಗಳು ಕೋರುತ್ತಿವೆ.

Translate »