ಯಕ್ಷಗಾನ ತರಬೇತಿ: ಅರ್ಜಿ ಆಹ್ವಾನ
ಮೈಸೂರು

ಯಕ್ಷಗಾನ ತರಬೇತಿ: ಅರ್ಜಿ ಆಹ್ವಾನ

January 19, 2019

ಮೈಸೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯು ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ವರ್ಗದ ಪ್ರತಿಭಾವಂತ ಯುವಕ-ಯುವತಿಯರಿಗೆ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಪ್ರತಿಭಾವಂತ ಯುವಕ-ಯುವತಿ ಯರಿಗೆ 2018-19ನೇ ಸಾಲಿನ 5 ತಿಂಗಳ ಯಕ್ಷಗಾನ ತರಬೇತಿಯನ್ನು ನಡೆಸಲು ಹಾಗೂ ಪರಿಕರಗಳೊಂದಿಗೆ ಪ್ರದರ್ಶನ ನೀಡಲು ಉದ್ದೇಶಿಸಿದೆ. ಯಕ್ಷಗಾನ ಪ್ರಕಾರಗಳಲ್ಲಿ ತೆಂಕುತಿಟ್ಟು ಯಕ್ಷಗಾನ, ಬಡಾಬಡಗುತಿಟ್ಟು, ಮೂಡಲಪಾಯ, ಕೇಳಿಕೆ, ಘಟ್ಟದಕೋರೆ, ಗೊಂಬೆಯಾಟ, ತಾಳಮದ್ದಲೆ ತರಬೇತಿ ನೀಡುವವರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ನಮೂನೆ ಪ್ರತಿಯನ್ನು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಚಾಲುಕ್ಯ ವಿಭಾಗ ಜಿ.ಸಿ ರಸ್ತೆ, ಬೆಂಗಳೂರು 560002 ವಿಳಾಸಕ್ಕೆ ಕಳುಹಿಸಕೊಡಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜ.31. ಹೆಚ್ಚಿನ ಮಾಹಿತಿಗೆ ದೂ. ಸಂ. 080-22113146 ಸಂಪರ್ಕಿಸಬಹುದು ಎಂದು ಕನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »