ಮತದಾರರ ನೋಂದಣಿಗೆ ನ.23ರಿಂದ 25ರವರೆಗೆ ವಿಶೇಷ ಆಂದೋಲನ: ಅಭಿರಾಮ್ ಜಿ.ಶಂಕರ್ ಮೈಸೂರು: ದೇಶಾದ್ಯಂತ ನಡೆಯುವ ಮತದಾರರ ವಿಶೇಷ ನೋಂದಣಿ ಆಂದೋಲನ ಮೈಸೂರು ಜಿಲ್ಲೆಯಲ್ಲೂ ಸಹ ನವೆಂಬರ್ 23, 24 ಹಾಗೂ 25 ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. 2019ರ ಜನವರಿ 1ನೇ ತಾರೀಖಿಗೆ 18 ವರ್ಷ ತುಂಬುವ ಎಲ್ಲಾ ಯುವಕ-ಯುವತಿಯರಿಗೆ ಇದೊಂದು ಉತ್ತಮ ಅವಕಾಶ. ಈ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಕೆಲವು ಕಾರಣಗಳಿಗೆ ಮತದಾರರ ಪಟ್ಟಿಯಿಂದ ಹೆಸರು…
ಜಮೀನು, ಭೂ ಒತ್ತುವರಿ, ಅಕ್ರಮ ಕಟ್ಟಡ ತೆರವಿಗೆ ಮನವಿ
November 23, 2018ಮೈಸೂರು: ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರು ವಾರ ನಡೆದ ಸಾರ್ವಜನಿಕ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭೂ ಒತ್ತುವರಿ, ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಖಾಲಿ ನಿವೇ ಶನಗಳಲ್ಲಿ ಕಸ, ಕಡ್ಡಿ, ಗಲೀಜು ಇತ್ಯಾದಿ ಸೇರಿದಂತೆ 15 ದೂರುಗಳು ಕೇಳಿ ಬಂದಿತು. ಜಟ್ಟಿಹುಂಡಿ ಗ್ರಾಮದ ಅರುಣ್‍ಕುಮಾರ್, ಬೆಟ್ಟದಪುರ ಗ್ರಾಮದ ನಟರಾಜು ದೂರ ವಾಣಿ ಮೂಲಕ ತಮ್ಮ ಗ್ರಾಮಗಳಲ್ಲಿ ಜಮೀನು ಮತ್ತು ಭೂ ಒತ್ತುವರಿ ಆಗಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಬೆಟ್ಟದ ಪುರದ ನಟರಾಜು, ಸರ್ವೆ…
ಮೈಸೂರಿನ ಓಶೋ ಗ್ಲಿಂಪ್ಸೆಯಲ್ಲಿ ಡಾ. ಅರಣ್ಯಕುಮಾರ್ ಅವರಿಂದ ಹಿಂದೂಸ್ಥಾನಿ ಸಂಗೀತ
November 23, 2018ಮೈಸೂರು: ಮೈಸೂರಿನ ಗೋಕುಲಂ 2ನೇ ಹಂತ, 6ನೇ ಮೇನ್, 16ನೇ ಕ್ರಾಸ್‍ನಲ್ಲಿರುವ ನಂ. 349 ಇಲ್ಲಿ ಓಶೋ ಗ್ಲಿಂಪ್ಸೆ ಯಲ್ಲಿ ನ.24ರಂದು ಸಂಜೆ 5.30ರಿಂದ 6.30 ರವರೆಗೆ ವಿಶ್ವ ವಿಖ್ಯಾತ ಸಂಗೀತ ಕಲಾವಿದ ಡಾ. ಅರಣ್ಯಕುಮಾರ್ ಅವರಿಂದ ಹಿಂದೂಸ್ಥಾನಿ ಸಂಗೀತ ವಾದ್ಯ ದಿಲ್‍ರುಬಾ ಮತ್ತು ಈಸ್‍ರಾಜ್ ಸಂಗೀತ ಕಛೇರಿಯನ್ನು ಆಯೋಜಿಸಲಾ ಗಿದೆ. ಪ್ರವೇಶ ಉಚಿತವಾಗಿದ್ದು, ಸಂಗೀತಾಸಕ್ತರು 10 ನಿಮಿಷ ಮುಂಚಿತವಾಗಿ ಹಾಜರಿರಬೇಕು. ಕಲಾವಿದರ ಪರಿಚಯಡಾ. ಅರಣ್ಯಕುಮಾರ್ ಅವರು `ಟ್ರೀಟ್ ಮೆಂಟ್ ಆಫ್ ಕಂಪೋಸಿಷನ್ ಇನ್ ಡಿಫ ರೆಂಟ್…
ಅನ್ಯ ಭಾಷಿಕರಿಗೂ ಕನ್ನಡ ಕಲಿಸಿ ರಾವಂದೂರಲ್ಲಿ ಶಾಸಕ ಕೆ.ಮಹದೇವ್ ಸಲಹೆ
November 23, 2018ಪಿರಿಯಾಪಟ್ಟಣ: ಕನ್ನಡ ನಾಡು-ನುಡಿ, ಭಾಷೆಯ ವಿಚಾರದಲ್ಲಿ ನನ್ನ ಸಂಪೂರ್ಣ ಸಹಕಾರವಿದ್ದು, ಪ್ರತಿ ಯೊಬ್ಬರೂ ಭಾಷಾಭಿಮಾನ ಹೆಚ್ಚಿಸಿ ಕೊಂಡು ಅನ್ಯಭಾಷಿಕರಿಗೆ ಕನ್ನಡ ಕಲಿ ಸುವ ಕೆಲಸ ಮಾಡಬೇಕು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು. ತಾಲೂಕಿನ ರಾವಂದೂರು ಗ್ರಾಮಸ್ಥ ರಿಂದ ಪವಿತ್ರ ಗ್ರಂಥಗಳು, ಕಾದಂಬರಿಗಳು ಹಾಗೂ ಸಾಹಿತ್ಯ ಕ್ಷೇತ್ರದ ದಿಗ್ಗಜರುಗಳ ಪುಸ್ತಕಗಳೊಂದಿಗೆ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಗ್ರಾಮದ ಕುಂದು ಕೊರತೆಗಳ ಸಭೆಗೆ ಆಗಮಿಸಿದ ನನಗೆ ಕನ್ನಡ ರಾಜ್ಯೋತ್ಸವದ ನಿಮಿತ್ತ ಗ್ರಾಮದ ಮುಖಂಡರು, ಕನ್ನಡ ಪುಸ್ತಕಗಳನ್ನು ನೀಡಿ ಕನ್ನಡ ಭಾಷಾಭಿ…
ಮೈಸೂರು-ಸರಗೂರು ತಡೆರಹಿತ ಬಸ್ ಸೇವೆ ಸಂಸದ, ಶಾಸಕ, ಜಿಪಂ ಅಧ್ಯಕ್ಷರಿಂದ ಚಾಲನೆ
November 23, 2018ಸರಗೂರು: ಪ್ರಯಾಣಿಕರ ಅನುಕೂಲಕ್ಕಾಗಿ ಸರಗೂರು-ಮೈಸೂರು ನಡುವೆ ಪ್ರತಿ ಒಂದು ಗಂಟೆಗೆ ತಡೆರಹಿತ ಬಸ್ ಓಡಿಸಲಾಗುತ್ತದೆ. ಪ್ರಯಾಣಿಕರು ಈ ಸೇವೆ ಸದುಪಯೋಗ ಪಡಿಸಿಕೊಳ್ಳುವಂತೆ ಸಂಸದ ಆರ್.ಧ್ರುವ ನಾರಾಯಣ್ ತಿಳಿಸಿದರು. ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ತಡೆ ರಹಿತ ಬಸ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸರಗೂರು ಹಾಗೂ ಗ್ರಾಮೀಣ ಭಾಗದ ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ತಡೆರಹಿತ ಬಸ್‍ನಿಂದ ಅನುಕೂಲವಾಗಲಿದೆ ಎಂದರು. ಶಾಸಕ ಅನಿಲ್ ಚಿಕ್ಕಮಾದು, ಮಾತನಾಡಿ, ವರ್ತಕರ ಹಾಗೂ ವಿವಿಧ ಸಂಘ ಸಂಸ್ಥೆಗಳ ಮನವಿ ಮೇರೆಗೆ ಪ್ರತಿದಿನ…
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ: ಜಿಟಿಡಿ
November 23, 2018ಹನಗೋಡು: ರಾಜ್ಯದೆಲ್ಲೆಡೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಕೇವಲ ಹಣಕಾಸು ವ್ಯವಹಾರಕ್ಕೆ ಮಾತ್ರ್ರ ಸೀಮಿತವಾಗಿರದೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿಯುತ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು. ಹನಗೋಡಿನಲ್ಲಿ ಧರ್ಮಸ್ಥಳ ಗ್ರಾಮೀಣಾ ಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ -ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಜಾಗೃತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ, ಧರ್ಮ ಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯು ಪೂಜ್ಯ ಡಿ.ವೀರೇಂದ್ರಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯದ ಎಲ್ಲಾ ಭಾಗ ಗಳಲ್ಲೂ…
ಮಾವುತರ ಬಿಸಾಡಿ ಪರಾರಿಯಾದ ಸಾಕಾನೆಗಳು: 15 ಕಿಮೀ ದೂರದಲ್ಲಿ ಪತ್ತೆ
November 23, 2018ಎಚ್.ಡಿ.ಕೋಟೆ: ಹುಲಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಆನೆಗಳು ದಿಗಿಲುಗೊಂಡು ಮಾವುತರನ್ನು ಕೆಳಕ್ಕೆ ಬೀಳಿಸಿ ಕಾಡಿನತ್ತ ಓಡಿದ ಪ್ರಸಂಗ ಗುರುವಾರ ನಡೆಯಿತು. ತಾಲೂಕಿನ ಅಂತರಸಂತೆ ಅರಣ್ಯ ವ್ಯಾಪ್ತಿಯ ಪೆಂಜಳ್ಳಿ ಗ್ರಾಮದ ಹೊರ ವಲಯದಲ್ಲಿ ಕಾರ್ಯಾ ಚರಣೆ ನಡೆಸುತ್ತಿದ್ದ ಸಮಯದಲ್ಲಿ ಜನರ ಕಿರುಚಾಟ ಮತ್ತು ಪಟಾಕಿಯ ಸಿಡಿತದಿಂದ ರೊಚ್ಚಿ ಗೆದ್ದ ದ್ರೋಣ ಮತ್ತೆ ಅಶೋಕ ಆನೆಗಳು ಅವುಗಳ ಮಾವುತರಾದ ಗುಂಡ ಮತ್ತು ನಂಜುಂಡ ಇಬ್ಬರನ್ನೂ ಕೆಳಕ್ಕೆ ಬೀಳಿಸಿ ಕಾಡಿನತ್ತ ಓಡಿದವು. ಇದರಿಂದ ಅರಣ್ಯ ಇಲಾಖೆಯ ಅಧಿ ಕಾರಿಗಳು ಮತ್ತು ಸಿಬ್ಬಂದಿ…
ಹಿಮ್ಮುಖವಾಗಿ ಜಿಗಿದ ಕಾರು: ಮನೆ ಜಗುಲಿ ಮೇಲೆ ಕೂತಿದ್ದ ಮಹಿಳೆ ಸಾವು
November 22, 2018ಚಾಮರಾಜನಗರ: ಹಿಮ್ಮುಖವಾಗಿ ಕಾರೊಂದು ಜಿಗಿದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡ ದುರಂತ ಚಾಮರಾಜನಗರ ಸಮೀಪದ ಚನ್ನಿಪುರ ಮೋಳೆ ಬಳಿಯ ಹಳೆ ಜಾಲಹಳ್ಳಿ ಹುಂಡಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಈ ಅಪಘಾತ ಗ್ರಾಮಸ್ಥರಲ್ಲಿ ಮಾತ್ರವಲ್ಲ, ಪೊಲೀಸರಿಗೂ ಆಘಾತ ಉಂಟು ಮಾಡಿದೆ. ಹೀಗೆ ಹಿಮ್ಮುಖವಾಗಿ ಜಿಗಿದಿರುವ ಕಾರು, ಸುಮಾರು 8 ಅಡಿ ಎತ್ತರದ ಮನೆ ಮೇಲ್ಛಾವಣಿ ಮೇಲೆ ನಿಂತಿದೆ. ಕಾರು ಮನೆ ಮುಂದಿನ ಜಗುಲಿ ಮೇಲಿಂದ ಮೇಲ್ಛಾವಣಿ ಮೇಲೇರಿದ್ದು ಹೇಗೆ ಎಂಬ ಬಗ್ಗೆ ಗ್ರಾಮಸ್ಥರು ಹಾಗೂ ಪೊಲೀಸರಲ್ಲಿ…
ಪುರಭವನ ವಾಹನ ನಿಲುಗಡೆ ಸ್ಥಳದಲ್ಲಿ ಸುಲಿಗೆ
November 22, 2018ಮೈಸೂರು: ನಾಡ ಹಬ್ಬ ದಸರಾ ವೇಳೆ ಪ್ರವಾಸಿಗರ ವಾಹನ ನಿಲುಗಡೆಗೆ ಪುರಭವನದಲ್ಲಿ ನಗರಪಾಲಿಕೆಯಿಂದ ವ್ಯವಸ್ಥೆ ಮಾಡಿದ್ದ ತಾತ್ಕಾಲಿಕ ವಾಹನ ನಿಲುಗಡೆ ವ್ಯವಸ್ಥೆ ಇದೀಗ ಸುಲಿಗೆ ತಾಣವಾಗಿ ಮಾರ್ಪಟ್ಟಿದ್ದು, ವಾಹನ ಮಾಲೀಕರಿಂದ ಅಧಿಕ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಮೈಸೂರಿಗೆ ಬರುವ ಪ್ರವಾಸಿಗರ ವಾಹನ ನಿಲುಗಡೆಗೆ ನಗರಪಾಲಿಕೆ ಪುರಭವನದ ಆವರಣದಲ್ಲಿ ನಿರ್ಮಾಣ ಹಂತದ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿ, ಅದಕ್ಕೆ ಟೆಂಡರ್ ಕರೆದಿತ್ತು. ಮೈಸೂರಿನ ಮನು ಎಂಬುವವರು ವಾಹನ ನಿಲುಗಡೆ ಹಾಗೂ ನಿರ್ವಹಣೆ ಟೆಂಡರ್ ಪಡೆದಿದ್ದರು….
ಕೊಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ
November 22, 2018ಮದ್ದೂರು: ಸಮೀಪದ ಕೊಪ್ಪದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಓರ್ವ ಸಿಬ್ಬಂದಿ ಗಾಯಗೊಂಡಿದ್ದು, ರೈತರ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ. ಕಾರ್ಖಾನೆಯ ನೌಕರ ಆನಂದ್ ಗಾಯಗೊಂಡಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಯ್ಲರ್ ಸ್ಫೋಟದಿಂದ ಕಾರ್ಖಾನೆಯ ಕಾಂಪೌಂಡ್ ಛಿದ್ರವಾಗಿದ್ದು, ಸಮೀಪ 20 ಮೀಟರ್ ವ್ಯಾಪ್ತಿ ಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಅಲ್ಲದೆ ಸ್ಫೋಟದಿಂದ ಹೊರ ಬಂದ ಡಿಸ್ಟಲರಿ ವಾಟರ್ ಕಾಲುವೆ ನೀರಿಗೆ ಸೇರಿ ಸುತ್ತಮುತ್ತಲ ಗ್ರಾಮಗಳ ನೂರಾರು ಎಕರೆ ಪ್ರದೇಶದ ಲಕ್ಷಾಂತರ ರೂ….