ಜಮೀನು, ಭೂ ಒತ್ತುವರಿ, ಅಕ್ರಮ ಕಟ್ಟಡ ತೆರವಿಗೆ ಮನವಿ
ಮೈಸೂರು

ಜಮೀನು, ಭೂ ಒತ್ತುವರಿ, ಅಕ್ರಮ ಕಟ್ಟಡ ತೆರವಿಗೆ ಮನವಿ

November 23, 2018

ಮೈಸೂರು: ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರು ವಾರ ನಡೆದ ಸಾರ್ವಜನಿಕ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭೂ ಒತ್ತುವರಿ, ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಖಾಲಿ ನಿವೇ ಶನಗಳಲ್ಲಿ ಕಸ, ಕಡ್ಡಿ, ಗಲೀಜು ಇತ್ಯಾದಿ ಸೇರಿದಂತೆ 15 ದೂರುಗಳು ಕೇಳಿ ಬಂದಿತು.

ಜಟ್ಟಿಹುಂಡಿ ಗ್ರಾಮದ ಅರುಣ್‍ಕುಮಾರ್, ಬೆಟ್ಟದಪುರ ಗ್ರಾಮದ ನಟರಾಜು ದೂರ ವಾಣಿ ಮೂಲಕ ತಮ್ಮ ಗ್ರಾಮಗಳಲ್ಲಿ ಜಮೀನು ಮತ್ತು ಭೂ ಒತ್ತುವರಿ ಆಗಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಬೆಟ್ಟದ ಪುರದ ನಟರಾಜು, ಸರ್ವೆ ನಂ.1 ಮತ್ತು 2ರಲ್ಲಿ ಭೂಮಿ ಒತ್ತುವರಿಯಾಗಿದೆ. ಕೆರೆ ಒತ್ತುವರಿಯನ್ನು ತೆರವುಗೊಳಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಅಭಿರಾಂ ಜಿ.ಶಂಕರ್, ಈ ಸಂಬಂಧ ಡಿಡಿಎಲ್ ಆರ್‍ನಿಂದ ಸರ್ವೆ ಮಾಡಿಸಿ, ಗ್ರಾಮದೊಳಗೆ ಆಗಿರುವ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಅಕ್ರಮ ಕಟ್ಟಡ ತೆರವಿಗೆ ಮನವಿ: ಮೈಸೂರು ತಾಲೂಕಿನ ಕುಪ್ಪೇಗಾಲದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ನಡೆಯುತ್ತಿರುವ ಬಗ್ಗೆ ದೂರಿ ದರು. ಗ್ರಾಮದ ಸಿದ್ದರಾಮಯ್ಯ ವೃತ್ತದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದ್ದು, ತೆರವುಗೊಳಿಸಿ, ಇದು ಜನರ ಓಡಾಟಕ್ಕೆ ತೊಂದರೆಯಾಗಿದೆ. ಶೀಘ್ರ ಅಕ್ರಮ ಕಟ್ಡಡ ನಿರ್ಮಾಣ ತೆರವುಗೊಳಿಸುವಂತೆ ಒತ್ತಾಯಿ ಸಿದರು. ಈ ಸಂಬಂಧ ಒತ್ತುವರಿದಾರರಿಗೆ ನೋಟೀಸ್ ನೀಡಿ, ವಿಚಾರಣೆ ನಡೆಸ ಲಾಗುತ್ತಿದೆ ಎಂದು ಮೈಸೂರು ತಹಸೀಲ್ದಾರ್ ರಮೇಶ್‍ಬಾಬು ಉತ್ತರಿಸಿದರು.

ಮುಡಾದಿಂದ ಮನೆ ಕಟ್ಟಲು ಅನುಮತಿ ದೊರೆಯುತ್ತಿಲ್ಲ: ಮೈಸೂರಿನ ದ್ವಾರಕಾ ನಗರದ ಕೆ.ವಿ.ವಿಜಯರಾಘವನ್ ಅವರು, ಮೈಸೂರಿನ ಸರ್ಕಾರಿ ನೌಕರರ ಸಹಕಾರಿ ಸಂಘದಿಂದ ನೀಡಲಾಗಿದ್ದ 450 ನಿವೇ ಶನಗಳ ಪೈಕಿ ಮನೆ ಕಟ್ಟಲು 5 ಮಂದಿಗೆ ಮಾತ್ರ ಮುಡಾ ನಕ್ಷೆ ಮಂಜೂರಾತಿ ಸಿಕ್ಕಿ ಮನೆಯನ್ನು ಕಟ್ಟಿಕೊಂಡು ವಾಸವಿದ್ದೇವೆ. ಆದರೆ ಮನೆ ಕಟ್ಟಲು ಪ್ಲಾನ್‍ಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿ ಸಿದ್ದ ಬಡಾವಣೆಯ 15 ಮಂದಿಗೆ ನಕ್ಷೆ ಮಂಜೂರಾತಿಯಾಗಿಲ್ಲ. ಅರ್ಜಿಗಳು ಮುಡಾ ಕಚೇರಿಯಲ್ಲಿ ಬಾಕಿ ಉಳಿದಿದೆ. ಸಂಘ ಮತ್ತು ಡೆವಲಪರ್ ಸರಿಯಾದ ಮಾಹಿತಿ ಒದಗಿಸದ ಕಾರಣ ಮನೆ ಕಟ್ಟಲಾಗುತ್ತಿಲ್ಲ. ಹಿಂದಿನ ಮುಡಾ ಆಯುಕ್ತರು ಯಾವ ಖಾತೆ ನೀಡದಂತೆ, ಕಂದಾಯ ವಸೂಲಿ ಮಾಡ ದಂತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಉಂಟಾಗಿದೆ. ಕೂಡಲೇ ಮನೆ ಗಳನ್ನು ಕಟ್ಟಲು ಅನುಮತಿ ಕೊಡಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಮುಡಾ ಕಾರ್ಯದರ್ಶಿಗೆ ಸೂಚನೆ ನೀಡಿದರು.

ಪರಿಹಾರವೂ ಇಲ್ಲ.. ಕೆಲಸವೂ ಇಲ್ಲ: ಬೆಳವಾಡಿಯ ವೆನ್‍ಲಾನ್ ಕಂಪನಿಯ ಕಾರ್ಮಿಕ ಕೂರ್ಗಳ್ಳಿಯ ಜಗದೀಶ್, ಕಂಪ ನಿಯ ತಪ್ಪು ನಿರ್ಧಾರದಿಂದ ತನ್ನ ಕಾಲು ಊನವಾಗಿದ್ದು, ಈಗ ರಾಡ್ ಹಾಕಲಾಗಿದೆ. ನನಗೆ ಯಾವುದೇ ಪರಿಹಾರ ನೀಡದೆ, ಕೆಲಸ ದಿಂದಲೂ ತೆಗೆದು ಹಾಕಲಾಗಿದೆ. ಅಲ್ಲದೆ ಕಂಪನಿಯನ್ನೂ ಮುಚ್ಚಲಾಗಿದೆ. ಇದರಿಂದ ಪರಿಹಾರವೂ ಇಲ್ಲದೆ, ಕೆಲಸವೂ ಇಲ್ಲದೆ ನಾನು ತೊಂದರೆ ಅನುಭವಿಸುತ್ತಿದ್ದು, ಜೀವನ ನಿರ್ವಹಣೆಗೆ ತೊಂದರೆಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಸಮಸ್ಯೆಯನ್ನು ಪರಿಶೀಲಿಸಿ ಕ್ರಮ ಕೈಗೊ ಳ್ಳಲು ಕಾರ್ಮಿಕ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ಕೊಟ್ಟರು.
ಮೈಸೂರಿನ ಶಾರದಾದೇವಿನಗರದ ಯಶ ವಂತ್ ನೀಡಿದ ದೂರಿನಲ್ಲಿ, ಶಾರದಾದೇವಿ ನಗರ ಮುಖ್ಯ ರಸ್ತೆಯ ಫುಟ್‍ಪಾತ್‍ನಲ್ಲಿ ಗೋಬಿ ಮಂಚೂರಿ ಅಂಗಡಿಗಳು ಆಕ್ರಮಿಸಿ ಕೊಂಡಿರುವುದರಿಂದ ಸಾರ್ವಜನಿಕರು ಓಡಾ ಡಲು ತೊಂದರೆಯಾಗಿದ್ದು, ಇದನ್ನು ತೆರವು ಮಾಡುವಂತೆ ಮನವಿ ಮಾಡಿದರು. ರಾಮ ಕೃಷ್ಣನಗರದ ರಂಗಸ್ವಾಮಿ ಅವರು, ಬಡಾ ವಣೆಯ ಖಾಲಿ ನಿವೇಶನಗಳಲ್ಲಿ ಕಸ, ಕಡ್ಡಿ, ಗಲೀಜು ತುಂಬಿ ತೊಂದರೆಯಾಗುತ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಧಿಕಾರಿ, ನಿವೇಶನದ ಮಾಲೀಕರನ್ನು ಪತ್ತೆ ಹಚ್ಚಿ ಅವರ ಮೂಲಕ ನಿವೇಶನ ಸ್ವಚ್ಛವಾಗಿ ಟ್ಟುಕೊಳ್ಳುವ ಕುರಿತು ಪ್ರಯತ್ನ ನಡೆಸ ಲಾಗುವುದು ಎಂದರು. ಇಂದಿನ ನೇರ ಫೋನ್‍ಇನ್ ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಕೆ.ಜ್ಯೋತಿ, ಎಡಿಸಿ ಟಿ.ಯೋಗೇಶ್, ಮೈಸೂರು ಮಹಾನಗರಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರ್ ಉಪಸ್ಥಿತರಿದ್ದರು.

Translate »