‘ಮುಂದಿನ ಜನವರಿ 1ಕ್ಕೆ ವಯಸ್ಸು 18 ತುಂಬಿದರೆ ನೀವೂ ಮತ ಹಾಕಬಹುದು
ಮೈಸೂರು

‘ಮುಂದಿನ ಜನವರಿ 1ಕ್ಕೆ ವಯಸ್ಸು 18 ತುಂಬಿದರೆ ನೀವೂ ಮತ ಹಾಕಬಹುದು

November 23, 2018

ಮತದಾರರ ನೋಂದಣಿಗೆ ನ.23ರಿಂದ 25ರವರೆಗೆ ವಿಶೇಷ ಆಂದೋಲನ: ಅಭಿರಾಮ್ ಜಿ.ಶಂಕರ್
ಮೈಸೂರು: ದೇಶಾದ್ಯಂತ ನಡೆಯುವ ಮತದಾರರ ವಿಶೇಷ ನೋಂದಣಿ ಆಂದೋಲನ ಮೈಸೂರು ಜಿಲ್ಲೆಯಲ್ಲೂ ಸಹ ನವೆಂಬರ್ 23, 24 ಹಾಗೂ 25 ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

2019ರ ಜನವರಿ 1ನೇ ತಾರೀಖಿಗೆ 18 ವರ್ಷ ತುಂಬುವ ಎಲ್ಲಾ ಯುವಕ-ಯುವತಿಯರಿಗೆ ಇದೊಂದು ಉತ್ತಮ ಅವಕಾಶ. ಈ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಕೆಲವು ಕಾರಣಗಳಿಗೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡು ವುದು ಅಗತ್ಯವಿದ್ದರೆ ನಮೂನೆ -7ರಲ್ಲಿ ಅರ್ಜಿ ಸಲ್ಲಿಸಬೇಕು. ಸಾರ್ವಜನಿಕರು ಮತ ದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನಮೂನೆ-6ರಲ್ಲಿ ಅರ್ಜಿ ಕೊಡಬೇಕು. ಅದರೊಂದಿಗೆ ಒಂದು ಫೋಟೊ, ವಿಳಾಸ ದಾಖಲಾತಿ ಹಾಗೂ ವಯಸ್ಸಿನ ದಾಖ ಲಾತಿ ಇರಬೇಕು. ಈಗಾಗಲೇ ನೋಂದಣಿ ಮಾಡಿಸಿಕೊಂಡಿದ್ದು, ಗುರುತಿನ ಚೀಟಿಯಲ್ಲಿ ತಿದ್ದುಪಡಿ ಬೇಕಿದ್ದರೆ, ನಮೂನೆ-8ರಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ತಿದ್ದುಪಡಿ ಬಗ್ಗೆ ದಾಖಲಾತಿ ಸಲ್ಲಿಸಬೇಕು.ಒಂದು ವಿಧಾನಸಭಾ ಕ್ಷೇತ್ರದಲ್ಲಿ ಬೇರೆ ಮತಗಟ್ಟೆಗೆ ವರ್ಗಾವಣೆಗೆ ನಮೂನೆ-8 ರಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬೇಕು.ಅರ್ಜಿಗಳನ್ನು ಸಂಬಂಧಪಟ್ಟ ಮತದಾರರ ನೋಂದಣಾ ಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಮೈಸೂರು ಮಹಾನಗರ ಪಾಲಿಕೆ, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರ್ ಕಚೇರಿ ಅಥವಾ ಆಯಾ ಮತಗಟ್ಟೆಗಳಲ್ಲಿ ಬೂತ್ ಲೆವಲ್ ಅಧಿಕಾರಿಗಳಿಗೆ ಸಲ್ಲಿಸುವುದು.ಅರ್ಜಿ ನಮೂನೆ ಗಳು ಆಯಾ ಕಚೇರಿಗಳಲ್ಲೇ ಸಿಗುತ್ತವೆ.

ಮೈಸೂರು ಜಿಲ್ಲೆಯ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದರೂ ಸಹ ಹೊಸ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಚಿತ ಪಡಿಸಿಕೊಳ್ಳುವುದು.ಇಲ್ಲದಿದ್ದಲ್ಲಿ ಹೊಸದಾಗಿ ಸೇರ್ಪಡೆಗೆ ಅವಕಾಶವಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

Translate »