ಮೈಸೂರು: ಮೈಸೂರು ಜಿಲ್ಲಾ ಪೊಲೀಸ್ ವೆಬ್‍ಸೈಟ್‍ನಿಂದ ದೂರ ಉಳಿದಿದ್ದು, ಇದರಿಂದ ಜಿಲ್ಲಾ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಪ್ರಕರಣದ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಜಿಲ್ಲಾ ಪೊಲೀಸ್ ವೆಬ್‍ಸೈಟ್‍ನ ಕ್ರೈಂ ಫೈಲ್‍ನಲ್ಲಿ 2017ರ ಮೇ 9ರವರೆಗೆ ಜಿಲ್ಲೆಯ ವಿವಿಧ ಠಾಣೆಯಲ್ಲಿ ದಾಖಲಾದ ಪ್ರಕರಣಗಳ ವಿವರ ಬಿಟ್ಟರೆ, ನಂತರ ನಡೆದ ಪ್ರಕರಣದ ವಿವರಗಳ ಮಾಹಿತಿ ದೊರಕುತ್ತಿಲ್ಲ. ಮೇ.9ರಂದು ಜಯಪುರ, ಮೈಸೂರು ದಕ್ಷಿಣ, ಹುಣಸೂರು, ಬೆಟ್ಟದಪುರ ಪೊಲೀಸ್ ಠಾಣೆಗಳಲ್ಲಿ ಹಲ್ಲೆ ಪ್ರಕರಣ, ಹೆಚ್.ಡಿ.ಕೋಟೆ ಹಾಗೂ ಹುಲ್ಲಹಳ್ಳಿ ಪೊಲೀಸ್ ಠಾಣೆಗಳಲ್ಲಿ ಅಕ್ರಮ ಮದ್ಯ ಮಾರಾಟಗಾರರ…
ಕಂಪ್ಯೂಟರ್ ಬಳಕೆ ಹೆಚ್ಚಾಗಿದ್ದರೂ ಪುಸ್ತಕಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ
November 20, 2018ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಅಭಿಮತ ಮೈಸೂರು: ಆಧುನಿಕ ಯುಗದಲ್ಲಿ ಕಂಪ್ಯೂಟರ್‍ಗಳ ಬಳಕೆ ಹೆಚ್ಚಾಗಿದ್ದರೂ ಪುಸ್ತಕಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಪುಸ್ತಕಗಳು ಎಂದೆಂದಿಗೂ ಶಾಶ್ವತ ದಾಖಲೆಗಳು ಎಂದು ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಅಭಿವ್ಯಕ್ತಪಡಿಸಿದರು. ಕುವೆಂಪುನಗರದಲ್ಲಿರುವ ಗ್ರಂಥಾಲಯ ದಲ್ಲಿ ‘ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2018’ರ ಅಂಗವಾಗಿ ಆಯೋಜಿಸಿದ್ದ ‘ಪುಸ್ತಕ ಪ್ರದರ್ಶನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕಗಳನ್ನು ಓದುವುದರಿಂದ ಸಿಗುವಂ ತಹ ಗ್ರಹಿಕೆ ಕಂಪ್ಯೂಟರ್ ಬಳಕೆಯಿಂದ ದೊರೆಯುವುದಿಲ್ಲ. ಕಂಪ್ಯೂಟರ್ ಹಾಗೂ ಮೊಬೈಲ್‍ಗಳು ಹೆಚ್ಚಾಗುತ್ತಿದ್ದರೂ ಪುಸ್ತಕ ಗಳಿಗೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ….
ಮಾಹಿತಿ, ಮೋಜಿಗೆ ಮಾತ್ರವಲ್ಲ ವಾಟ್ಸಾಪ್, ಫೇಸ್‍ಬುಕ್: ಜೀವನಕ್ಕೆ ದಾರಿಯು ಉಂಟು
November 20, 2018ಸಾಮಾಜಿಕ ಜಾಲತಾಣದ ಮೂಲಕ ಉದ್ಯೋಗದಾತ! ಮೈಸೂರು: ಪ್ರಸ್ತುತ ದಿನಗಳಲ್ಲಿ ಫೇಸ್‍ಬುಕ್, ವಾಟ್ಸಾಪ್ ಮತ್ತಿತರೆ ಸಾಮಾಜಿಕ ಜಾಲತಾಣದಿಂದ ಉಂಟಾಗುತ್ತಿ ರುವ ಅವಾಂತರಗಳ ಪಟ್ಟಿಯೇ ದೊಡ್ಡದಿದೆ. ಆದರೆ, ಇಲ್ಲೊಬ್ಬರು ವಾಟ್ಸಾಪ್ ಅನ್ನೇ ಬಳಸಿ ಕೊಂಡು ಹಲವರಿಗೆ ಉದ್ಯೋಗ ದೊರೆಯು ವಂತೆ ಮಾಡುವ ಮೂಲಕ ಸಾಮಾಜಿಕ ಜಾಲತಾಣವನ್ನು ಹೀಗೂ ಬಳಸಿಕೊಳ್ಳ ಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮೈಸೂರಿನ ಟಿ.ಕೆ.ಲೇಔಟ್ ನಿವಾಸಿ, ಪ್ರಸ್ತುತ ಬೆಂಗಳೂರಿನ ಇನ್‍ಸೈನ್ ಎಕ್ವಿಪ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಕಾಫಿ ಪಾಯಿಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಬ್ಯುಸಿನೆಸ್ ಯೂನಿಟ್ ಹೆಡ್…
ಫೈನಲ್‍ನಲ್ಲಿ ಬೆಂಗಳೂರು ವಿರುದ್ಧ ಮೈಸೂರು ತಂಡಕ್ಕೆ ಮೂರು ವಿಕೆಟ್‍ಗಳ ಭರ್ಜರಿ ಜಯ
November 19, 2018ಮೈಸೂರು: ಇಂದಿಲ್ಲಿ ದಿವ್ಯಾಂಗರಿಗಾಗಿ ನಡೆದ ದಕ್ಷಿಣ ಭಾರತ ವ್ಹೀಲ್‍ಚೇರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರು ವಿರುದ್ಧ ಮೈಸೂರು ದಿವ್ಯಾಂಗ ತಂಡ 3 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಮೈಸೂರಿನ ವಿಜಯನಗರ 1ನೇ ಹಂತ ದಲ್ಲಿರುವ ಮುಡಾ ಕ್ರೀಡಾಂಗಣದಲ್ಲಿ ಭಾನು ವಾರ ಮೈಸೂರು ಹಾಗೂ ಬೆಂಗಳೂರು ದಿವ್ಯಾಂಗರ ವ್ಹೀಲ್‍ಚೇರ್ ಕ್ರಿಕೆಟ್ ಪಂದ್ಯಾ ವಳಿಯ ಫೈನಲ್ ಪಂದ್ಯದಲ್ಲಿ ಬೆಂಗ ಳೂರು ನೀಡಿದ 63 ರನ್‍ಗಳ ಗುರಿಯನ್ನು ಬೆನ್ನತ್ತಿದ ಮೈಸೂರು ತಂಡ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಗೆಲುವಿನ…
`ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…’ ಹಾಡಿಗೆ ಕುಣಿದು ಕುಪ್ಪಳಿಸಿದ ವಿಶೇಷ ಚೇತನ ಮಕ್ಕಳು
November 19, 2018ಮೈಸೂರು: ಮೈಸೂ ರಿನಲ್ಲಿರುವ 500ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು ಮತ್ತು ಪೋಷಕರು ಕುಣಿದು ಕುಪ್ಪ ಳಿಸಿದರು. ಮಕ್ಕಳ ಪೋಷಕರು ಈ ಸಂಭ್ರಮ ದಲ್ಲಿ ಖುಷಿಯಿಂದ ಪಾಲ್ಗೊಂಡಿದ್ದರು. ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರು ಹೆರಿಟೇಜ್ ರೌಂಡ್ ಟೇಬಲ್ -109 ಮತ್ತು ಮೈಸೂರು ಹೆರಿಟೇಜ್ ಲೇಡಿಸ್ ಸರ್ಕಲ್-109 ಜಂಟಿಯಾಗಿ ಮೈಸೂರಿನ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ನಿಜಕ್ಕೂ ಸಂಭ್ರಮಿಸಿದರು. ಮೈಸೂರಿನ ಕರುಣಾಮಯಿ, ಕೌಶಲ, ನಿರೀಕ್ಷೆ, ಆಶಿಯಾನ, ಮಾತೃ…
ಜಾತಿ ಧರ್ಮದ ಹೆಸರಲ್ಲಿ ಮನುಸ್ಮøತಿ ಜೀವಂತ
November 19, 2018ಮೈಸೂರು: ಸಂಪ್ರ ದಾಯ, ಜಾತಿ-ಧರ್ಮದ ಹೆಸರಿನಲ್ಲಿ ಮನು ಸ್ಮøತಿಯನ್ನು ಮನುವಾದಿಗಳು ಜೀವಂತ ವಾಗಿಟ್ಟಿದ್ದಾರೆ. ಆ ಮೂಲಕ ಸರ್ವಾಧಿ ಕಾರದಿಂದ ಆಡಳಿತ ನಡೆಸಿ ತಳ ಸಮು ದಾಯಗಳನ್ನು ಅಧೀನದಲ್ಲಿ ಇರಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ ಎಂದು ಗಾಂಧಿ ನಗರದ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಕಿಡಿಕಾರಿದರು. ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಸಮೈಕ್ಯ ಪಬ್ಲಿಕೇಷನ್ಸ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಚಿಂತಕ ಗಂಗಾರಾಂ ಚಂಡಾಳ ಅವರ `ಪ್ರಸ್ತುತ-ಅಪ್ರಸ್ತುತ (ಸಂವಿಧಾನ-ಮನುಸ್ಮøತಿ: ತೌಲ ನಿಕ…
ಪ್ರಜಾಪ್ರಭುತ್ವದ 4 ಅಂಗಗಳು ಭ್ರಷ್ಟಾಚಾರದಿಂದ ಕೂಡಿವೆ
November 18, 2018ಮೈಸೂರು: ಪ್ರಜಾಪ್ರಭುತ್ವದ ನಾಲ್ಕು ಆಧಾರ ಸ್ತಂಭಗಳೆಸಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾಂಗ ವ್ಯವಸ್ಥೆಗಳು ಭ್ರಷ್ಟಾ ಚಾರದಿಂದ ತುಂಬಿ ಹೋಗಿವೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿ ನಲ್ಲಿ ಏರ್ಪಡಿಸಿದ್ದ ಭಾರತದಲ್ಲಿ `ಭ್ರಷ್ಟಾಚಾರ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ’ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜಕಾರಣಿಗಳು, ಅಧಿಕಾರಿಗಳಿಗೆ ಹಣ ಗಳಿಕೆಯಲ್ಲಿ ತೃಪ್ತಿಯೇ ಇಲ್ಲ ಎನ್ನುವಷ್ಟು ಭ್ರಷ್ಟರಾಗಿದ್ದಾರೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ ಎಂದು ತಿಳಿಸಿದರು. ಹಿಂದೆ ಪಾಶ್ಚಾತ್ಯರ…
ಹೊಗಳುಭಟ್ಟರ ಜಾತ್ರೆಯಂತಾಗಿರುವ ಸಾಹಿತ್ಯ ಸಮ್ಮೇಳನ
November 17, 2018ಮೈಸೂರು: ಸಾಹಿತ್ಯ ಪರಿ ಷತ್‍ಗಳು ಸಾಹಿತ್ಯ ಸಮ್ಮೇಳನಗಳನ್ನು ದೊಡ್ಡ ಜಾತ್ರೆಯನ್ನಾಗಿಸಿವೆ, ಇದಕ್ಕೆ ಈವರೆಗೂ ನಡೆದು ಬಂದಿರುವ ಸಾಹಿತ್ಯ ಸಮ್ಮೇಳನಗಳೇ ಸಾಕ್ಷಿ ಎಂದು ಹಿರಿಯ ಸಂಸ್ಕøತಿ ಚಿಂತಕ ಪ.ಮಲ್ಲೇಶ್ ವಿಷಾದ ವ್ಯಕ್ತಪಡಿಸಿದರು. ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂ ಗಣದಲ್ಲಿ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಆಯೋಜಿ ಸಿದ್ದ 62ನೇ ಕನ್ನಡ ರಾಜ್ಯೋತ್ಸವ ಹಾಗೂ ಹಾ.ಮಾ.ನಾಯಕ ದತ್ತಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯ ಸಮ್ಮೇ ಳನ ಎಂಬುದು ಕನ್ನಡಕ್ಕಾಗಿ ಹೋರಾಡಿ ದವರು ಎಂದು…
ಸಮಾಜದ ಪರಿವರ್ತನೆಯಲ್ಲಿ ಮಾಧ್ಯಮ, ಕಾನೂನು ಮಹತ್ವದ ಪಾತ್ರ ವಹಿಸಲಿವೆ
November 17, 2018ಮೈಸೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದ ಉನ್ನತ ಪರಿವರ್ತನೆಗೆ ಮಾಧ್ಯಮ ಮತ್ತು ಕಾನೂನು ಮಹತ್ವದ ಪಾತ್ರ ವಹಿಸಲಿವೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್.ಸಿದ್ದೇಗೌಡ ಅಭಿಪ್ರಾಯಪಟ್ಟರು. ಮೈಸೂರು ಮಾನಸ ಗಂಗೋತ್ರಿಯ ಗಣಿತಶಾಸ್ತ್ರ ವಿಭಾಗದ ಸಭಾಂ ಗಣದಲ್ಲಿ `ಮಾಧ್ಯಮ, ಕಾನೂನು ಮತ್ತು ಅಭಿವೃದ್ಧಿ : ಹೊಸ ಚರ್ಚೆ ಗಳು’ ಕುರಿತಂತೆ 2 ದಿನಗಳ ಕಾಲ ಹಮ್ಮಿಕೊಂಡಿರುವ ರಾಷ್ಟ್ರ ಮಟ್ಟದ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲು ಮಾಧ್ಯಮ ಮತ್ತು ಕಾನೂನು ಮಹತ್ವದ…
ಪುಸ್ತಕ ಉಡುಗೊರೆ ನೀಡುವ ಅಭ್ಯಾಸ ಬೆಳೆಸಿಕೊಳ್ಳಿ
November 16, 2018ಮೈಸೂರು: ಹುಟ್ಟು ಹಬ್ಬ, ಮದುವೆ, ಮುಂಜಿ ಇನ್ನಿತರ ಶುಭ ಸಮಾರಂಭಗಳ ಸಂದರ್ಭದಲ್ಲಿ ಪುಸ್ತಕ ಗಳನ್ನು ಉಡುಗೊರೆಯಾಗಿ ನೀಡುವ ಅಭ್ಯಾಸ ವನ್ನು ಎಲ್ಲರೂ ಬೆಳೆಸಿಕೊಳ್ಳುವ ಮೂಲಕ ಪುಸ್ತಕ ಓದಲು ಪ್ರೇರೇಪಿಸಬೇಕು ಎಂದು ಸಾಹಿತಿ ಡಾ.ಜಯಪ್ಪ ಹೊನ್ನಾಳಿ ಇಂದಿಲ್ಲಿ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮೈಸೂರು ನಗರ ಗ್ರಂಥಾಲಯ ವತಿಯಿಂದ ಮೈಸೂರಿನ ವಿವೇಕಾನಂದ ನಗರ ಶಾಖಾ ಗ್ರಂಥಾಲಯದಲ್ಲಿ ಆಯೋ ಜಿಸಿದ್ದ `ಗ್ರಂಥಾಲಯ ಸಪ್ತಾಹ ಮತ್ತು ಪುಸ್ತಕ ಪ್ರದರ್ಶನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಂಥಾಲಯಗಳು…