Tag: Mysuru

ದೇವಸ್ಥಾನಕ್ಕೆ ಭಿಕ್ಷೆ ಬೇಡಿ ಬಂದ 2.5 ಲಕ್ಷ ರೂ. ದೇಣಿಗೆ ನೀಡಿದ್ದ ಸಾರ್ಥಕ ಜೀವಿ ಸೀತಾಲಕ್ಷ್ಮಿ ನಿಧನ
ಮೈಸೂರು

ದೇವಸ್ಥಾನಕ್ಕೆ ಭಿಕ್ಷೆ ಬೇಡಿ ಬಂದ 2.5 ಲಕ್ಷ ರೂ. ದೇಣಿಗೆ ನೀಡಿದ್ದ ಸಾರ್ಥಕ ಜೀವಿ ಸೀತಾಲಕ್ಷ್ಮಿ ನಿಧನ

June 28, 2018

ಮೈಸೂರು; ಮಕ್ಕಳು, ಸಂಬಂಧಿಕರ ನಿರ್ಲಕ್ಷ್ಯಕ್ಕೆ ಒಳಗಾಗಿ ತಮಿಳುನಾಡಿನಿಂದ ಮೈಸೂರಿಗೆ ಬಂದು ಭಿಕ್ಷೆ ಬೇಡಿ, ಸಾರ್ಥಕ ಜೀವನ ದೂಡುತ್ತಿದ್ದ ಆ ಹಿರಿಯ ಜೀವ ಇನ್ನಿಲ್ಲವಾಗಿದೆ. ಭಿಕ್ಷೆ ಬೇಡು ತ್ತಲೇ 2.5 ಲಕ್ಷ ರೂ. ಹಣವನ್ನು ಕೂಡಿಟ್ಟು ಒಂಟಿಕೊಪ್ಪಲಿನ ಶ್ರೀಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ದೇಣಿಗೆ ನೀಡಿದ್ದ ಶತಮಾನದಂಚಿನಲ್ಲಿದ್ದ ಸೀತಾ ಲಕ್ಷ್ಮೀ (92) ವಯೋ ಸಹಜ ಅನಾರೋಗ್ಯದಿಂದ ಸೋಮ ವಾರ ರಾತ್ರಿ ನಿಧನರಾದರು. ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ ಮುಖ್ಯದ್ವಾರದಲ್ಲಿ ಕುಳಿತು ಭಿಕ್ಷೆ ಬೇಡಿ ಕಾಲದೂಡುತ್ತಿದ್ದ ಸೀತಾಲಕ್ಷ್ಮೀ ಭಿಕ್ಷೆ ಹಣವನ್ನು ಕೂಡಿಟ್ಟು…

ಆಂಧ್ರ ಮಾದರಿ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿ ಜಾರಿಗೆ ರಾಜ್ಯ ಸರ್ಕಾರದ ಗಂಭೀರ ಚಿಂತನೆ
ಮೈಸೂರು

ಆಂಧ್ರ ಮಾದರಿ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿ ಜಾರಿಗೆ ರಾಜ್ಯ ಸರ್ಕಾರದ ಗಂಭೀರ ಚಿಂತನೆ

June 27, 2018

ರೈತ ಮುಖಂಡ ಬಡಗಲಪುರ ನಾಗೇಂದ್ರ ವಿಶ್ವಾಸ ಮೈಸೂರು: ಆಂಧ್ರಪ್ರದೇಶ ಅಳವಡಿಸಿಕೊಂಡಿರುವ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿಯನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕೆಂಬ ರಾಜ್ಯ ರೈತ ಸಂಘದ ಮನವಿಗೆ ಪೂರಕವಾಗಿ ಸ್ಪಂದಿಸಿರುವ ರಾಜ್ಯ ಸರ್ಕಾರ ಈ ಸಂಬಂಧ ಗಂಭೀರ ಚಿಂತನೆ ನಡೆಸಿದೆ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಸ್ರೇಲ್ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಉತ್ಸುಕರಾಗಿದ್ದರು. ಈ…

ಸ್ವಚ್ಛನಗರ: 8ನೇ ಸ್ಥಾನಕ್ಕೆ ಕುಸಿದ ಮೈಸೂರು
ಮೈಸೂರು

ಸ್ವಚ್ಛನಗರ: 8ನೇ ಸ್ಥಾನಕ್ಕೆ ಕುಸಿದ ಮೈಸೂರು

June 25, 2018

ಮೈಸೂರು:  ಪ್ರಥಮ ಸ್ವಚ್ಛನಗರಿ ಎಂಬ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಮೈಸೂರು ಜನತೆಗೆ ನಿರಾಸೆಯಾಗಿದ್ದು, 2018ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾಂಸ್ಕೃತಿಕ ನಗರಿ 8ನೇ ಸ್ಥಾನಕ್ಕೆ ಕುಸಿದಿದೆ. ಆದರೆ 3 ರಿಂದ 10 ಲಕ್ಷ ಜನ ಸಂಖ್ಯೆಹೊಂದಿರುವ ದೇಶದ 220 ನಗರಗಳ ಪೈಕಿ ಪಾರಂಪರಿಕ ನಗರಿ ಮೈಸೂರಿಗೆ ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಬಂದಿರುವುದು ಹೆಗ್ಗಳಿಕೆಯಾಗಿದೆ. ಮಧ್ಯಪ್ರದೇಶದ ಇಂದೂರಿನಲ್ಲಿ ಶನಿವಾರ ಸಂಜೆ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛನಗರ ಪ್ರಶಸ್ತಿ ಪ್ರದಾನ ಮಾಡಿದರು. ಮೈಸೂರು ಮೇಯರ್ ಬಿ.ಭಾಗ್ಯವತಿ, ಪಾಲಿಕೆ ಕಮೀಷ್ನರ್…

ಉಂಡುವಾಡಿಯಿಂದ ಮೈಸೂರಿಗೆ ಕುಡಿಯುವ ನೀರು ಸರಬರಾಜು ಯೋಜನೆ ಬಜೆಟ್‍ನಲ್ಲಿ ಪ್ರಸ್ತಾಪ ಸಾಧ್ಯತೆ
ಮೈಸೂರು

ಉಂಡುವಾಡಿಯಿಂದ ಮೈಸೂರಿಗೆ ಕುಡಿಯುವ ನೀರು ಸರಬರಾಜು ಯೋಜನೆ ಬಜೆಟ್‍ನಲ್ಲಿ ಪ್ರಸ್ತಾಪ ಸಾಧ್ಯತೆ

June 25, 2018

ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಅಧಿಕಾರಿಗಳ ಸಭೆ ಮೈಸೂರು: ಮೈಸೂರು ನಗರ ಸೇರಿದಂತೆ ಸಮೀಪದ ಹಲವು ಗ್ರಾಮ ಗಳಿಗೆ ಕುಡಿಯುವ ನೀರು ಪೂರೈಸುವ ಉಂಡುವಾಡಿ ಬಳಿಯ ಉದ್ದೇ ಶಿತ ಯೋಜನೆ ಯನ್ನು ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಸೇರ್ಪಡೆಮಾಡಿ, ಅನುದಾನ ಕಾಯ್ದಿರಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಇಂದು ಸಂಬಂಧಪಟ್ಟ ಅಧಿ ಕಾರಿಗಳು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಹಾತ್ವಾಕಾಂಕ್ಷೆಯ ಯೋಜನೆ ಅನುಷ್ಠಾನಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು, ಹಿಂದಿನ ಕಾಂಗ್ರೆಸ್ ಸರ್ಕಾರದ…

ಸಮಯದ ಸರಿಯಾದ ಬಳಕೆ ಯಶಸ್ಸಿನ ಗುಟ್ಟು ಜಿಲ್ಲಾ ಯೊಜನಾ ನಿರ್ದೇಶಕ ಆರ್. ಲೋಕನಾಥ್
ಮೈಸೂರು

ಸಮಯದ ಸರಿಯಾದ ಬಳಕೆ ಯಶಸ್ಸಿನ ಗುಟ್ಟು ಜಿಲ್ಲಾ ಯೊಜನಾ ನಿರ್ದೇಶಕ ಆರ್. ಲೋಕನಾಥ್

June 25, 2018

ಮೈಸೂರು: ವಿದ್ಯಾರ್ಥಿಗಳು ತಮ್ಮ ನಿಶ್ಚಿತ ಯಶಸ್ಸಿಗೆ ಸಮಯದ ಸರಿಯಾದ ಬಳಕೆ ಅವಶ್ಯವಾದುದು ಎಂದು ಜಿಲ್ಲಾ ಯೋಜನಾ ನಿರ್ದೇಶಕ ಆರ್. ಲೋಕನಾಥ್ ಸಲಹೆ ನೀಡಿದರು. ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಡಶಾಲೆ ಮತ್ತು ಕಾಲೇಜು ಕೊಠಡಿಯಲ್ಲಿ ಜ್ಞಾನಬುತ್ತಿ ಸಾಹಿತ್ಯ ಸಂಸ್ಕೃತಿ ಸಂಸ್ಥೆ ವತಿಯಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪಠ್ಯಕ್ರಮಕ್ಕೆ ಯಾವುದೇ ನಿಯಮಿತಿ ಇರುವುದಿಲ್ಲ. ಆದ್ದರಿಂದ ವಿದ್ಯಾರ್ಥಿ ಗಳು ಇಂದು ಕಷ್ಟ ಪಟ್ಟರೆ ಮುಂದಿನ ದಿನಗಳಲ್ಲಿ ಸಂತೋಷದ ಜೀವನವನ್ನು ನಡೆಸಬಹುದು. ಯಾರು ಯಾರನ್ನು ಕಾಪಿ ಮಾಡಬೇಡಿ ಪ್ರತಿ…

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಮೈಸೂರು

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

June 25, 2018

ಮೈಸೂರು: ಕಿಕ್ಕಿರಿದ ತುಂಬಿದ್ದ ಸಭಾಂಗಣದಲ್ಲಿ ಸಾಧನೆ ಎಂದರೆ ಪ್ರಶಸ್ತಿಯನ್ನು ಸ್ವೀಕರಿಸುವಂತಿರಬೇಕು. ಇನ್ನು ಮುಂದೆ ಪ್ರತೀ ವರ್ಷ ಪ್ರಥಮ ರ್ಯಾಂಕ್‍ಗಳಿಸಿ ಸನ್ಮಾನ ಸ್ವೀಕರಿಸುತ್ತೇನೆ. ಎನ್ನುವ ಮಕ್ಕಳ ಮನಸ್ಸುಗಳು ಪ್ರಶಸ್ತಿ ಪ್ರಧಾನವನ್ನೇ ಎದುರು ನೋಡುತ್ತಿದ್ದವು. ನಗರದ ಜೆ.ಎಲ್.ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಅಖಿಲ ಭಾರತ ಪರಿಶಿಷ್ಟ ಜಾತಿ, ಪರಿಶಿಷ್ಟವರ್ಗ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಾರ್ಮಿಕರ ಒಕ್ಕೂಟ ಮೈಸೂರು ಘಟಕದ ವತಿಯಿಂದ ನಡೆದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇಕಡ 85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು…

ಇಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮೈಸೂರಲ್ಲಿ ಇಂದು ಬೃಹತ್ ಸಾಮೂಹಿಕ ಯೋಗ ಪ್ರದರ್ಶನ
ಮೈಸೂರು

ಇಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮೈಸೂರಲ್ಲಿ ಇಂದು ಬೃಹತ್ ಸಾಮೂಹಿಕ ಯೋಗ ಪ್ರದರ್ಶನ

June 21, 2018

 ಬೆಳಿಗ್ಗೆ 6 ರಿಂದ ಮೈಸೂರಿನ ರೇಸ್ ಕೋರ್ಸ್‍ನಲ್ಲಿ ಲಕ್ಷ ಯೋಗಪಟುಗಳ ಸಮಾಗಮ ಸಚಿವರು, ಶಾಸಕರು, ಸಮಾಜದ ಗಣ್ಯಾತಿಗಣ್ಯರು ಪಾಲ್ಗೊಳ್ಳುವ ಸಾಧ್ಯತೆ ಪ್ರದರ್ಶನದಲ್ಲಿ ವಿವಿಧ ಯೋಗ ಶಾಲೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಾಥ್ ಮೈಸೂರು: ನಾಲ್ಕನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಸಾಂಸ್ಕೃತಿಕ ನಗರ ಮೈಸೂರು ಸಜ್ಜಾಗಿದ್ದು, ಇಲ್ಲಿನ ರೇಸ್‍ಕೋರ್ಸ್‍ನಲ್ಲಿ ನಡೆಯಲಿರುವ ಸಾಮೂಹಿಕ ಬೃಹತ್ ಯೋಗ ಪ್ರದರ್ಶನದಲ್ಲಿ ಲಕ್ಷ ಯೋಗಪಟು ಗಳು ಭಾಗವಹಿಸುವ ನಿರೀಕ್ಷೆಯಿದೆ. ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಯುಷ್ ಇಲಾಖೆ, ನೆಹರು ಯುವ ಕೇಂದ್ರ, ಎಸ್‍ಪಿವೈಎಸ್‍ಎಸ್, ಜಿಎಸ್‍ಎಸ್ ಯೋಗಿಕ್…

ನಮ್ಮಲ್ಲಿನ ಜಲಕ್ರೀಡೆ ಪ್ರವಾಸಿ ತಾಣಗಳೆಷ್ಟು ಸುರಕ್ಷಿತ?
ಮೈಸೂರು

ನಮ್ಮಲ್ಲಿನ ಜಲಕ್ರೀಡೆ ಪ್ರವಾಸಿ ತಾಣಗಳೆಷ್ಟು ಸುರಕ್ಷಿತ?

June 5, 2018

– ಎಸ್.ಟಿ.ರವಿಕುಮಾರ್ ಮೈಸೂರು: ಮಳೆ ಆರಂಭ ವಾಯಿತೆಂದರೆ ನೀರು ನಿಸರ್ಗದ ಸೊಬಗಿ ನಲ್ಲಿ ಜಲಪಾತವಾಗಿ ಭೋರ್ಗರೆದು ಧುಮ್ಮಿಕ್ಕುವ ದೃಶ್ಯ ಅತ್ಯಂತ ಆಕರ್ಷಣೀಯ. ಮಲೆನಾಡಿನಲ್ಲಿ ಹೆಚ್ಚಾಗಿ ಕಂಡು ಬರುವ ಜಲಪಾತಗಳ ಸೌಂದರ್ಯ ಎಣ ಕೆಗೂ ಮೀರಿದ್ದು. ದಟ್ಟ ಅರಣ್ಯಗಳಲ್ಲಿ ಉಗಮವಾಗಿ ಬೆಟ್ಟಗುಡ್ಡಗಳ ಮಧ್ಯೆ ನುಸುಳಿ ರಭಸದಿಂದ ಪ್ರಪಾತಕ್ಕೆ ಧುಮ್ಕಿಕ್ಕುವ ಜಲಧಾರೆಗಳನ್ನು ನೋಡುವುದೇ ಚೆಂದ. ಅತೀ ವೇಗದ ಇಂದಿನ ದಿನಗಳಲ್ಲಿ ಮಕ್ಕಳಿಗೆ ಓದುವ ಟೆನ್ಷನ್, ಉದ್ಯೋಗಸ್ಥರಿಗೆ ಕೆಲಸದ ಒತ್ತಡ, ಗೃಹಿಣ ಯರಿಗೆ ಮನೆ ನಿಭಾಯಿಸುವ ಚಿಂತೆ. ಈ ಯಾಂತ್ರಿಕ ಜೀವನದ…

ಮೈಸೂರಲ್ಲಿ ಸೋಮವಾರ 5 ಮಿಮೀ ಮಳೆ
ಮೈಸೂರು

ಮೈಸೂರಲ್ಲಿ ಸೋಮವಾರ 5 ಮಿಮೀ ಮಳೆ

May 30, 2018

ಮೈಸೂರು: ಸೋಮವಾರ ಮೈಸೂರಲ್ಲಿ 5 ಮಿಮೀ ಮಳೆಯಾಗಿದೆ. ನಂಜನಗೂಡು 10.51, ತಿ.ನರಸೀಪುರ 1.7, ಹುಣಸೂರು 7.6, ಕೆ.ಆರ್.ನಗರ 2.2, ಹೆಚ್.ಡಿ.ಕೋಟೆ 0.3, ಪಿರಿಯಾಪಟ್ಟಣ 7.13 ಮಿಮೀ ಮಳೆಯಾಗಿದೆ. ಕೆಆರ್‍ಎಸ್ ಅಣೆಕಟ್ಟಿನಲ್ಲಿ 73.80 ಅಡಿ ನೀರಿದ್ದು, 3,270 ಕ್ಯೂಸೆಕ್ ಒಳ ಹರಿವು, 292 ಹೊರ ಹರಿವಿದೆ. ಕಬಿನಿ ಜಲಾಶಯದಲ್ಲಿ 56.75 ಅಡಿ ನೀರಿದ್ದು, 2,378 ಕ್ಯೂಸೆಕ್ ಒಳ ಹರಿವು, 300 ಕ್ಯೂಸೆಕ್ ಹೊರ ಹರಿವಿದೆ ಎಂದು ಅಧಿಕಾರಿಗಳು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಪರಿಸರ ಅಧ್ಯಯನ ಶಿಬಿರ:ವಿದ್ಯಾರ್ಥಿಗಳಿಗೆ ವನ್ಯ ಸಂಪತ್ತಿನ ಸಂರಕ್ಷಣೆ ಮಹತ್ವದ ವಿವರಣೆ
ಮೈಸೂರು

ಪರಿಸರ ಅಧ್ಯಯನ ಶಿಬಿರ:ವಿದ್ಯಾರ್ಥಿಗಳಿಗೆ ವನ್ಯ ಸಂಪತ್ತಿನ ಸಂರಕ್ಷಣೆ ಮಹತ್ವದ ವಿವರಣೆ

May 29, 2018

ಮೈಸೂರು:  ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ ಬಂಡೀಪುರದ ಮಂಗಲ ಗ್ರಾಮದಲ್ಲಿ ನಡೆದ ಎರಡು ದಿನಗಳ ಪರಿಸರ ಅಧ್ಯಯನ ಶಿಬಿರದಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಗಂಗೋತ್ರಿ ಘಟಕದ ವಿದ್ಯಾರ್ಥಿಗಳಿಗಾಗಿ ವನ್ಯಸಂಪತ್ತಿನ ಸಂರಕ್ಷಣೆಯ ಮಹತ್ವವನ್ನು ಅರಿತುಕೊಂಡರು. ವೈಲ್ಡ್‍ಲೈಫ್ ಕನ್ರ್ಸರ್ವೇಷನ್ ಫೌಂಡೇಷನ್(ಡಬ್ಲ್ಯುಸಿಎಫ್) ವತಿಯಿಂದ ನಡೆದ ಅಧ್ಯಯನ ಶಿಬಿರದಲ್ಲಿ ಯೂತ್ ಹಾಸ್ಟೆಲ್ ಗಂಗೋತ್ರಿ ಘಟಕದ 25 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎರಡು ದಿನಗಳ ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಡಬ್ಲ್ಯುಸಿಎಫ್ ಸಂಸ್ಥೆಯ ಮುಖ್ಯಸ್ಥ ಡಿ.ರಾಜಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ನಾಗೇಂದ್ರ ಪ್ರಸಾದ್ ಸೇರಿದಂತೆ ಇನ್ನಿತರರು…

1 191 192 193 194
Translate »