ಪರಿಸರ ಅಧ್ಯಯನ ಶಿಬಿರ:ವಿದ್ಯಾರ್ಥಿಗಳಿಗೆ ವನ್ಯ ಸಂಪತ್ತಿನ ಸಂರಕ್ಷಣೆ ಮಹತ್ವದ ವಿವರಣೆ
ಮೈಸೂರು

ಪರಿಸರ ಅಧ್ಯಯನ ಶಿಬಿರ:ವಿದ್ಯಾರ್ಥಿಗಳಿಗೆ ವನ್ಯ ಸಂಪತ್ತಿನ ಸಂರಕ್ಷಣೆ ಮಹತ್ವದ ವಿವರಣೆ

May 29, 2018

ಮೈಸೂರು:  ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ ಬಂಡೀಪುರದ ಮಂಗಲ ಗ್ರಾಮದಲ್ಲಿ ನಡೆದ ಎರಡು ದಿನಗಳ ಪರಿಸರ ಅಧ್ಯಯನ ಶಿಬಿರದಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಗಂಗೋತ್ರಿ ಘಟಕದ ವಿದ್ಯಾರ್ಥಿಗಳಿಗಾಗಿ ವನ್ಯಸಂಪತ್ತಿನ ಸಂರಕ್ಷಣೆಯ ಮಹತ್ವವನ್ನು ಅರಿತುಕೊಂಡರು.

ವೈಲ್ಡ್‍ಲೈಫ್ ಕನ್ರ್ಸರ್ವೇಷನ್ ಫೌಂಡೇಷನ್(ಡಬ್ಲ್ಯುಸಿಎಫ್) ವತಿಯಿಂದ ನಡೆದ ಅಧ್ಯಯನ ಶಿಬಿರದಲ್ಲಿ ಯೂತ್ ಹಾಸ್ಟೆಲ್ ಗಂಗೋತ್ರಿ ಘಟಕದ 25 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎರಡು ದಿನಗಳ ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಡಬ್ಲ್ಯುಸಿಎಫ್ ಸಂಸ್ಥೆಯ ಮುಖ್ಯಸ್ಥ ಡಿ.ರಾಜಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ನಾಗೇಂದ್ರ ಪ್ರಸಾದ್ ಸೇರಿದಂತೆ ಇನ್ನಿತರರು ವನ್ಯ ಜೀವಿಗಳು, ಅರಣ್ಯದ ಮಹತ್ವ, ರಕ್ಷಣೆ, ನಮ್ಮ ಜೀವನದಲ್ಲಿ ಅರಣ್ಯಗಳು ಹೇಗೆ ಮಹತ್ವ ಪಡೆದಿರುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿವರಣೆ ನೀಡಿದರು.

ಪಕ್ಷಿವೀಕ್ಷಕರಾದ ಚೇತನ್, ಮಾದೇಶ್, ಮನು ಹಾಗೂ ಮಹೇಶ್ ಅವರು ಶಿಬಿರಾರ್ಥಿಗಳಿಗೆ ಪಕ್ಷಿ ವೀಕ್ಷಣೆ, ಪಕ್ಷಿಗಳ ರಕ್ಷಣೆಯ ಅಗತ್ಯ, ಕೃಷಿ ಚಟುವಟಿಕೆಗೆ ಪಕ್ಷಿಗಳ ಕೊಡುಗೆಯ ಬಗ್ಗೆ ಮಾಹಿತಿ ನೀಡಿದರು. ನೇಚರ್ ವಾಕ್ ಮತ್ತು ಬೇಸಿಕ್ ಔಟ್ ಡೋರ್ ಸರ್ವೈವಲ್ ಟೆಕ್ನಿಕ್ಸ್, ಡೇರೆ ಪಿಚಿಂಗ್, ಪ್ರಥಮ ಚಿಕಿತ್ಸಾ ವಿಧಾನದ ಬಗ್ಗೆ ವಿವರಿಸಲಾಯಿತು. ಅಲ್ಲದೆ, ವನ್ಯಜೀವಿ ಚಲನಚಿತ್ರಗಳು ಮತ್ತು ಸಂರಕ್ಷಣೆ ಶಿಕ್ಷಣ ಮತ್ತು ಸಂರಕ್ಷಣೆಯ ಜ್ಞಾನ ಮತ್ತು ವನ್ಯಜೀವಿಗಳ ಶ್ರೀಮಂತಿಕೆ ಕುರಿತು ಪಿಪಿಟಿ ಮೂಲಕ ಮಾಹಿತಿ ನೀಡಲಾಯಿತು. ಸತೀಶ್ ಮತ್ತು ಅವರ ರಾಣ ಅವರ ನೇತೃತ್ವದಲ್ಲಿ ಯೂತ್ ಹಾಸ್ಟೆಲ್ ವಿದ್ಯಾರ್ಥಿಗಳು ಪರಿಸರ ಅಧ್ಯಯನ ಶಿಬಿರದಲ್ಲಿ ಪಾಲ್ಗೊಂಡಿದ್ದರು.

Translate »