Tag: Mysuru

ಮೈಸೂರಲ್ಲಿ ಜನ ಸಂಚಾರ ವಿರಳ
ಮೈಸೂರು

ಮೈಸೂರಲ್ಲಿ ಜನ ಸಂಚಾರ ವಿರಳ

April 19, 2019

ಮೈಸೂರು: ಲೋಕಸಭಾ ಚುನಾವಣೆ ಮತದಾನದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಮೈಸೂರಿನ ಹೃದಯ ಭಾಗಗಳೂ ಸೇರಿದಂತೆ ಹಲ ವೆಡೆ ಜನ ಸಂಚಾರ ವಿರಳವಾಗಿತ್ತು. ಮೈಸೂರಿನ ಕೆಆರ್ ವೃತ್ತ, ಚಾಮರಾಜ ವೃತ್ತ, ದೊಡ್ಡ ಗಡಿಯಾರ ವೃತ್ತ ಸೇರಿದಂತೆ ಸಯ್ಯಾಜಿರಾವ್ ರಸ್ತೆ, ಡಿ. ದೇವರಾಜ ಅರಸು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಿತ್ಯ ಇರುತ್ತಿದ್ದಷ್ಟು ಜನ ಸಂಚಾರವೇ ಇರಲಿಲ್ಲ. ಬಹುತೇಕರು ಮತದಾನ ಪ್ರಕ್ರಿಯೆಯಲ್ಲಿ ತಲ್ಲೀನರಾದರೆ, ರಜೆಯೊಂದಿಗೆ ಬಿಸಿಲಿನ ಬೇಗೆ ಯಿಂದಲೂ ಅನೇಕರು ಹೊರ ಬಾರದಿರಬಹುದು. ಸಾಮಾನ್ಯವಾಗಿ ನಿತ್ಯ ಇರುತ್ತಿದ್ದ ಜನ ಸಂದಣಿ…

ಬೆಳ್ಳಿ ರಥದಲ್ಲಿ ಭಗವಾನ್ ಮಹಾವೀರರ ಮೂರ್ತಿ ಉತ್ಸವ
ಮೈಸೂರು

ಬೆಳ್ಳಿ ರಥದಲ್ಲಿ ಭಗವಾನ್ ಮಹಾವೀರರ ಮೂರ್ತಿ ಉತ್ಸವ

April 18, 2019

ಮೈಸೂರು: ಜೈನರ ಆರಾಧ್ಯ ದೈವ, ಅಹಿಂಸಾ ಪ್ರತಿಪಾದಕ, 24ನೇ ತೀರ್ಥಂಕರ ಭಗವಾನ್ ಮಹಾ ವೀರನ ಜಯಂತಿ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ಬುಧವಾರ ಭಗವಾನ್ ಮಹಾವೀರ ಮೂರ್ತಿಯ ಅದ್ಧೂರಿ ಉತ್ಸವ ನಡೆಯಿತು. ದಿಗಂಬರ ಜೈನ ಸಮಾಜದ ನೇತೃತ್ವದಲ್ಲಿ ಮಹಾವೀರ ಮಂಡಳಿ, ಸಮೀಕ್ಷಾ ಮಿಲನ್, ಮಹಾವೀರ ಸೇವಾ ಸಂಘ ಸೇರಿದಂತೆ ಹಲವು ಸಂಘಟನೆಗಳ ಆಶ್ರಯದಲ್ಲಿ ಉತ್ಸವ ನಡೆಯಿತು. ಮೈಸೂ ರಿನ ಚಂದ್ರಗುಪ್ತ ರಸ್ತೆಯಲ್ಲಿರುವ ಎಂ.ಎಲ್. ಜೈನ್ ಬೋರ್ಡಿಂಗ್ ಹೋಂನಿಂದ ಹೊರಟ ಉತ್ಸವದಲ್ಲಿ ಅಲಂಕೃತ ಬೆಳ್ಳಿ ರಥದಲ್ಲಿ ಭಗ ವಾನ್ ಮಹಾವೀರನ…

ಮೈಸೂರು ನಗರ, ಜಿಲ್ಲೆಯಲ್ಲಿ 535 ಮದ್ಯ ಅಂಗಡಿ ಬಂದ್
ಮೈಸೂರು

ಮೈಸೂರು ನಗರ, ಜಿಲ್ಲೆಯಲ್ಲಿ 535 ಮದ್ಯ ಅಂಗಡಿ ಬಂದ್

April 18, 2019

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಸಂಜೆ 6 ಗಂಟೆಯಿಂದ ಗುರುವಾರ ಮಧ್ಯರಾತ್ರಿಯವರೆಗೆ ಮದ್ಯಪಾನ ನಿರೋಧ ದಿನವೆಂದು ಘೋಷಣೆ ಮಾಡಲಾಗಿದೆ. ಜಿಲ್ಲಾ ಚುನಾ ವಣಾಧಿಕಾರಿಗಳೂ ಆದ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಒಟ್ಟು 535 ಮದ್ಯ ಮಾರಾಟ ಅಂಗಡಿಗಳನ್ನು ಬಂದ್ ಮಾಡ ಲಾಗಿದೆ. 181 ರೀಟೆಲ್ ಶಾಪ್ (ಸಿಎಲ್2), 16 ಕ್ಲಬ್‍ಗಳು (ಸಿಎಲ್4), ಮೂರು ಸ್ಟಾರ್ ಹೋಟೆಲ್‍ಗಳು, 134 ಬೋರ್ಡಿಂಗ್ ಅಂಡ್ ಲಾಡ್ಜಿಂಗ್(ಸಿಎಲ್7),…

ಜೆಸಿಬಿಯಿಂದ ಗಾಯಗೊಂಡ ನಾಗರಹಾವುಗಳಿಗೆ ಚಿಕಿತ್ಸೆ
ಮೈಸೂರು

ಜೆಸಿಬಿಯಿಂದ ಗಾಯಗೊಂಡ ನಾಗರಹಾವುಗಳಿಗೆ ಚಿಕಿತ್ಸೆ

April 18, 2019

ಮೈಸೂರು: ಕಾಮಗಾರಿಯೊಂದರ ವೇಳೆ ಜೆಸಿಬಿಗೆ ಸಿಲುಕಿ ಗಾಯಗೊಂಡಿದ್ದ ಮೂರು ನಾಗರಹಾವುಗಳನ್ನು ಉರಗ ತಜ್ಞ, ಅಗ್ನಿಶಾಮಕ ಸಿಬ್ಬಂದಿ ಕೆಂಪರಾಜು ರಕ್ಷಿಸಿ, ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಮೇಟಗಳ್ಳಿಯಲ್ಲಿರುವ ಭಾರತೀಯ ನೋಟು ಮುದ್ರಣ ಕಾರ್ಖಾನೆಯಲ್ಲಿ ಜೆಸಿಬಿ ಗುಂಡಿ ತೋಡುತ್ತಿದ್ದಾಗ ಮಣ್ಣಿನೊಂದಿಗೆ ನಾಗರಹಾವೊಂದು ಜೆಸಿಬಿ ಬಕೆಟ್‍ನಲ್ಲಿ ಮೇಲಕ್ಕೆ ಬಂದಿದೆ. ಈ ವೇಳೆ ಅದಕ್ಕೆ ಪೆಟ್ಟಾಗಿದೆ. ತಕ್ಷಣ ಅದನ್ನು ಪಕ್ಕದಲ್ಲಿ ಬಿಟ್ಟ ಚಾಲಕ, ಮತ್ತೊಂದು ಕಡೆ ಗುಂಡಿ ತೋಡಲು ಮುಂದಾದಾಗ ಮತ್ತೆರಡು ನಾಗರಹಾವು ಕಂಡು ಬಂದಿವೆ. ಈ ಮೂರು ಹಾವಿಗೂ ಗಾಯವಾಗಿದೆ. ವಿಷಯ…

ಬಹಿರಂಗ ಪ್ರಚಾರಕ್ಕೆ ತೆರೆ
ಮೈಸೂರು

ಬಹಿರಂಗ ಪ್ರಚಾರಕ್ಕೆ ತೆರೆ

April 17, 2019

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಹಂತದ ಲೋಕಸಭಾ ಚುನಾವಣಾ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 6 ಗಂಟೆಗೆ ತೆರೆಬಿತ್ತು. ಏಪ್ರಿಲ್ 18 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನ ಅಂತ್ಯಗೊಳ್ಳುವ 48 ಗಂಟೆ ಮುಂಚಿತವಾಗಿ, ಅಂದರೆ ಇಂದು ಸಂಜೆ 6 ಗಂಟೆಗೆ ಚುನಾವಣಾ ಬಹಿರಂಗ ಪ್ರಚಾರ ಅಂತ್ಯಗೊಂಡಿತು. ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ, ತುಮಕೂರು ಸೇರಿದಂತೆ ಮೊದಲ ಹಂತದ ಚುನಾವಣಾ ಸ್ಪರ್ಧಾ ಕಣದಲ್ಲಿರುವ ಎಲ್ಲಾ 14 ಲೋಕಸಭಾ ಕ್ಷೇತ್ರಗಳ…

ನರೇಂದ್ರ ಮೋದಿ ನಾಯಕತ್ವ,ಬಿ.ಎಸ್.ಯಡಿಯೂರಪ್ಪ ವರ್ಚಸ್ಸು,ಅಭಿವೃದ್ಧಿ ಆದ್ಯತೆ  ನನ್ನ ಗೆಲುವಿಗೆ ಸೋಪಾನ
ಮೈಸೂರು

ನರೇಂದ್ರ ಮೋದಿ ನಾಯಕತ್ವ,ಬಿ.ಎಸ್.ಯಡಿಯೂರಪ್ಪ ವರ್ಚಸ್ಸು,ಅಭಿವೃದ್ಧಿ ಆದ್ಯತೆ ನನ್ನ ಗೆಲುವಿಗೆ ಸೋಪಾನ

April 17, 2019

ಮೈಸೂರು: ಪ್ರಧಾನಿ ನರೇಂದ್ರ ಮೋದಿ ನಾಯಕತ್ವ, ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ಚಸ್ಸು ಹಾಗೂ ನನ್ನ 42 ವರ್ಷದ ರಾಜಕಾರಣದಲ್ಲಿ ಅಭಿವೃದ್ಧಿಗೆ ನೀಡಿರುವ ಆದ್ಯತೆ ನನ್ನ ಗೆಲುವಿಗೆ ಸೋಪಾನವಾಗಲಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾ ಸಂವಾದದಲ್ಲಿ ಮಾತ ನಾಡಿದ ಅವರು, ನಾನು 42 ವರ್ಷದಿಂದ ರಾಜಕಾರಣದಲ್ಲಿದ್ದೇನೆ. 5 ಬಾರಿ ಸಂಸದನಾಗಿ, ಎರಡು ಬಾರಿ ಶಾಸಕನಾಗಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸಚಿವ…

ದ್ವಿತೀಯ ಪಿಯು ಫಲಿತಾಂಶ ಪ್ರಕಟ: ಶೇ.61.73ರಷ್ಟು ತೇರ್ಗಡೆ: ಬಾಲಕಿಯರದ್ದೇ ಮೇಲುಗೈ
ಮೈಸೂರು

ದ್ವಿತೀಯ ಪಿಯು ಫಲಿತಾಂಶ ಪ್ರಕಟ: ಶೇ.61.73ರಷ್ಟು ತೇರ್ಗಡೆ: ಬಾಲಕಿಯರದ್ದೇ ಮೇಲುಗೈ

April 16, 2019

ಬೆಂಗಳೂರು: ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆ ಶೇಕಡಾ 61.73ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಕಲಾ ವಿಭಾಗದಲ್ಲಿ ಮೊದಲ 10 ರ್ಯಾಂಕ್‍ಗಳಲ್ಲಿ 9 ರ್ಯಾಂಕ್ ಗಳನ್ನು ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಸ್ವತಂತ್ರ ಪದವಿಪೂರ್ವ ಕಾಲೇಜು ಬಾಚಿಕೊಂಡಿದೆ. ಉಳಿದ ಒಂದು ರ್ಯಾಂಕ್ ದಾವಣಗೆರೆ ಜಿಲ್ಲಾ ಪಾಲಾ ಗಿದೆ. ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗ…

ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ
ಮೈಸೂರು

ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ

April 16, 2019

ಮೈಸೂರು: ಏ.18 ರಂದು ನಡೆಯಲಿರುವ ಮೊದಲ ಹಂತದ ಲೋಕಸಭಾ ಚುನಾವಣಾ ಬಹಿರಂಗ ಪ್ರಚಾರ ನಾಳೆ(ಏ16) ಸಂಜೆ 6ಕ್ಕೆ ಅಂತ್ಯಗೊಳ್ಳಲಿದೆ ಎಂದು ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಗಳೂ ಆದ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ. ಮೈಸೂರಿನ ಡಿಸಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ಸಿದ್ಧತೆ ಕುರಿತು ಪತ್ರಿಕಾಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಅವರು, ಆ 48 ಗಂಟೆ ಅವಧಿ ಯಲ್ಲಿ ಚುನಾವಣಾ ಫಲಿ ತಾಂಶದ ಮೇಲೆ ಪರಿಣಾಮ ಬೀರುವ ಎಲ್ಲಾ ರೀತಿಯ ಬಹಿ ರಂಗ ಪ್ರಚಾರ, ಟೆಲಿವಿಷನ್,…

ಮತದಾನ ಮಾಡಲು ಈ ದಾಖಲೆಗಳನ್ನು ಕೊಂಡೊಯ್ಯಿರಿ
ಮೈಸೂರು

ಮತದಾನ ಮಾಡಲು ಈ ದಾಖಲೆಗಳನ್ನು ಕೊಂಡೊಯ್ಯಿರಿ

April 16, 2019

ಮೈಸೂರು: ಏ.18ರಂದು ಬೆಳಿಗ್ಗೆ 7 ರಿಂದ ಸಂಜೆ 6ಗಂಟೆವರೆಗೆ ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ಭಾರತ ಚುನಾವಣಾ ಆಯೋಗ ನೀಡಿರುವ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಕೊಂಡೊಯ್ಯಬೇಕು. ಒಂದು ವೇಳೆ ಅದು ಇಲ್ಲದಿದ್ದಲ್ಲಿ ಈ ಕೆಳಕಂಡ 11 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ತೋರಿಸಿ ತಮ್ಮ ಹಕ್ಕು ಚಲಾಯಿಸಬಹುದಾಗಿದೆ. ಭಾವಚಿತ್ರವಿರುವ ಪಾಸ್‍ಪೋರ್ಟ್, ಡಿಎಲ್, ಸರ್ಕಾರಿ ಅಥವಾ ಖಾಸಗಿ ಉದ್ಯಮ ಸಂಸ್ಥೆಗಳ ಗುರುತಿನ ಚೀಟಿ, ಬ್ಯಾಂಕ್-ಅಂಚೆ ಕಚೇರಿ ಪಾಸ್‍ಬುಕ್, ಪಾನ್‍ಕಾರ್ಡ್, ಆರ್‍ಜಿಪಿ ವಿತರಿಸಿರುವ ಸ್ಮಾರ್ಟ್ ಕಾರ್ಡ್, ನರೇಗಾ ಯೋಜನೆಯ ಉದ್ಯೋಗ…

ಮಹಾಲಕ್ಷ್ಮಿ ಸ್ವೀಟ್ಸ್ ಚಾರಿಟಬಲ್ ಟ್ರಸ್ಟ್‍ನಿಂದ ಸ್ತುತ್ಯಾರ್ಹ ಕಾರ್ಯ
ಮೈಸೂರು

ಮಹಾಲಕ್ಷ್ಮಿ ಸ್ವೀಟ್ಸ್ ಚಾರಿಟಬಲ್ ಟ್ರಸ್ಟ್‍ನಿಂದ ಸ್ತುತ್ಯಾರ್ಹ ಕಾರ್ಯ

April 16, 2019

ಮೈಸೂರು: ಶಿಕ್ಷಣದ ಉಳಿವಿಗಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಆತ್ಮಜ್ಞಾ ನಂದಜೀ ಹೇಳಿದರು. ಮೈಸೂರಿನ ವಿಶ್ವೇಶ್ವರನಗರದಲ್ಲಿರುವ ಮಾಧವ ಶೆಣೈ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್ ಚಾರಿ ಟಬಲ್ ಟ್ರಸ್ಟ್‍ನ ವಾರ್ಷಿಕೋತ್ಸವ, ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್ ನೌಕರರ ಪ್ರತಿಭಾ ವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಇವತ್ತಿಗೂ ಸಮಾಜ ಮತ್ತು ಶಿಕ್ಷಣದಲ್ಲಿ ಕಾಣುತ್ತಿರುವ ಲೋಪವೆಂದರೆ ಒಗ್ಗಟ್ಟಿ ನಿಂದ ಕೆಲಸಮಾಡದಿರುವುದು. ಕಾರ್ಮಿ…

1 20 21 22 23 24 194
Translate »