ಮೈಸೂರು ನಗರ, ಜಿಲ್ಲೆಯಲ್ಲಿ 535 ಮದ್ಯ ಅಂಗಡಿ ಬಂದ್
ಮೈಸೂರು

ಮೈಸೂರು ನಗರ, ಜಿಲ್ಲೆಯಲ್ಲಿ 535 ಮದ್ಯ ಅಂಗಡಿ ಬಂದ್

April 18, 2019

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಸಂಜೆ 6 ಗಂಟೆಯಿಂದ ಗುರುವಾರ ಮಧ್ಯರಾತ್ರಿಯವರೆಗೆ ಮದ್ಯಪಾನ ನಿರೋಧ ದಿನವೆಂದು ಘೋಷಣೆ ಮಾಡಲಾಗಿದೆ.

ಜಿಲ್ಲಾ ಚುನಾ ವಣಾಧಿಕಾರಿಗಳೂ ಆದ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಒಟ್ಟು 535 ಮದ್ಯ ಮಾರಾಟ ಅಂಗಡಿಗಳನ್ನು ಬಂದ್ ಮಾಡ ಲಾಗಿದೆ. 181 ರೀಟೆಲ್ ಶಾಪ್ (ಸಿಎಲ್2), 16 ಕ್ಲಬ್‍ಗಳು (ಸಿಎಲ್4), ಮೂರು ಸ್ಟಾರ್ ಹೋಟೆಲ್‍ಗಳು, 134 ಬೋರ್ಡಿಂಗ್ ಅಂಡ್ ಲಾಡ್ಜಿಂಗ್(ಸಿಎಲ್7), 138 ಬಾರ್ ಅಂಡ್ ರೆಸ್ಟೋರೆಂಟ್‍ಗಳು (ಸಿಎಲ್9), 29 ಎಂಎಸ್ ಐಎಲ್(11ಸಿ), 4 ಮಿಲಿಟರಿ ಕ್ಯಾಂಟೀನ್ (ಸಿಎಲ್8) ಹಾಗೂ ಇತರ 30 ಮದ್ಯದಂಗಡಿ ಗಳು ಬಂದ್ ಆಗಿವೆ ಎಂದು ಅಬಕಾರಿ ಉಪ ಆಯುಕ್ತೆ ಎಂ.ರೂಪಾ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಮೂರು ದಿನ ಬಂದ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಕಳೆದ ಸೋಮವಾರ ಮತ್ತು ಮಂಗಳವಾರ ಮೈಸೂರು ನಗರ ಸೇರಿದಂತೆ ಜಿಲ್ಲೆಯಾ ದ್ಯಂತ ಮದ್ಯ ಖರೀದಿಸಲು ಪಾನಪ್ರಿಯರು ಮುಗಿ ಬೀಳುತ್ತಿರುವುದು ಕಂಡು ಬಂದಿತು.

1419 ದಾಳಿ: ಮಾ.10ರಿಂದ ಏಪ್ರಿಲ್ 16 ರವರೆಗೆ ಮೈಸೂರು ಜಿಲ್ಲೆಯಾದ್ಯಂತ 1419 ದಾಳಿ ನಡೆಸಿ ಅಕ್ರಮ ಮದ್ಯ ಸಾಗಾಣೆ, ದಾಸ್ತಾನು ಹಾಗೂ ಮಾರಾಟ ಸಂಬಂಧ ಒಟ್ಟು 631 ಪ್ರಕರಣ ದಾಖಲಿಸಿ 448 ಮಂದಿಯನ್ನು ಬಂಧಿಸಲಾಗಿದೆ. ದಾಳಿಯಿಂದ 2.25 ಕೋಟಿ ರೂ. ಮೌಲ್ಯದ 19,366 ಲೀಟರ್ ಐಎಂಎಲ್, 22,814 ಲೀಟರ್ ಬೀರ್ ಹಾಗೂ 108 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.

Translate »