ಮಹಾಲಕ್ಷ್ಮಿ ಸ್ವೀಟ್ಸ್ ಚಾರಿಟಬಲ್ ಟ್ರಸ್ಟ್‍ನಿಂದ ಸ್ತುತ್ಯಾರ್ಹ ಕಾರ್ಯ
ಮೈಸೂರು

ಮಹಾಲಕ್ಷ್ಮಿ ಸ್ವೀಟ್ಸ್ ಚಾರಿಟಬಲ್ ಟ್ರಸ್ಟ್‍ನಿಂದ ಸ್ತುತ್ಯಾರ್ಹ ಕಾರ್ಯ

April 16, 2019

ಮೈಸೂರು: ಶಿಕ್ಷಣದ ಉಳಿವಿಗಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಆತ್ಮಜ್ಞಾ ನಂದಜೀ ಹೇಳಿದರು.

ಮೈಸೂರಿನ ವಿಶ್ವೇಶ್ವರನಗರದಲ್ಲಿರುವ ಮಾಧವ ಶೆಣೈ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್ ಚಾರಿ ಟಬಲ್ ಟ್ರಸ್ಟ್‍ನ ವಾರ್ಷಿಕೋತ್ಸವ, ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್ ನೌಕರರ ಪ್ರತಿಭಾ ವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇವತ್ತಿಗೂ ಸಮಾಜ ಮತ್ತು ಶಿಕ್ಷಣದಲ್ಲಿ ಕಾಣುತ್ತಿರುವ ಲೋಪವೆಂದರೆ ಒಗ್ಗಟ್ಟಿ ನಿಂದ ಕೆಲಸಮಾಡದಿರುವುದು. ಕಾರ್ಮಿ ಕರು ತಾವು ಮಾಡುವ ಕೆಲಸವನ್ನು ನಮ್ಮ ಸಂಸ್ಥೆಯ ಕೆಲಸವೆಂದು ಪರಿಗಣಿಸುವ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಸ್ವಾರ್ಥ ವನ್ನು ಬಿಟ್ಟು ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದರೆ ತಮ್ಮ ಅಭಿವೃದ್ಧಿಯೊಂದಿಗೆ ಸಂಸ್ಥೆಯು ಬೆಳೆಯಲು ಸಾಧ್ಯ ಎಂದರು.

ಮೈಸೂರಿನ ಮನೆ ಮನೆಗೆ ಚಿರಪರಿ ಚಿತವಾಗಿರುವ ಮಹಾಲಕ್ಷ್ಮಿ ಸ್ವೀಟ್ಸ್ ತನ್ನದೇ ಆದ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ. ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ, ಹಲವಾರು ಸಂಘ ಸಂಸ್ಥೆಗಳಿಗೆ ಸಹಾಯ ನೀಡುತ್ತಿರುವುದು ಶ್ಲಾಘನೀಯ ಎಂದು ನುಡಿದರು.

ಇದೇ ವೇಳೆ ಕಾರ್ಯಕ್ರಮವನ್ನು ಉದ್ಘಾ ಟಿಸಿದ ಖ್ಯಾತ ಕಾದಂಬರಿಕಾರರಾದ ಡಾ. ಎಸ್.ಎಲ್.ಭೈರಪ್ಪ ಅವರು, ವಿವಿಧ ಕ್ಷೇತ್ರ ದಲ್ಲಿನ ಸಾಧಕರಾದ ದೀನಬಂಧು ಟ್ರಸ್ಟ್‍ನ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯ ದೇವ, ಪಾಂಡವಪುರ ಪುಸ್ತಕಮನೆ ಖ್ಯಾತಿಯ ಅಂಕೇಗೌಡ, ಪ್ರಗತಿಪರ ಕೃಷಿಕರಾದ ಎಂ. ರೇಚಣ್ಣ, ಸಂತೋಷ್ ರಾಯಪ್ಪ ಕಿತ್ತೂರು ಅವರನ್ನು ಸನ್ಮಾನಿಸಿ, ಅಭಿನಂದಿಸಿದರು. ನಂತರ ಶ್ರೀ ಮಹಾಲಕ್ಷ್ಮಿ ಸ್ವೀಟ್ಸ್‍ನ ಕಾರ್ಮಿಕರ 75 ಮಕ್ಕಳಿಗೆ ಪ್ರತಿಭಾ ಪುರ ಸ್ಕಾರ ನೀಡಿದರು.

ಅತ್ಯುತ್ತಮ ಕಾರ್ಮಿಕರಿಗೆ ಗೌರವ: ಮಹಾ ಲಕ್ಷ್ಮಿ ಸ್ವೀಟ್ಸ್‍ನಲ್ಲಿ ನಿಷ್ಠಾವಂತರಾಗಿ ಕಾರ್ಯ ನಿರ್ವಹಿಸುತ್ತಿರುವ ಕಾಟ್ವಾಳ್ ಕುಮಾರ್, ವೀರ ಭದ್ರ, ಸುಜಾತ, ಶೋಭಾ, ಸಿದ್ದಪ್ಪ, ಸತೀಶ್ ಹಾಗು ರವಿ ಅವರಿಗೆ ನಗದು ಬಹು ಮಾನ ನೀಡಲಾಯಿತು.

ವಿವಿಧ ಸಂಘ-ಸಂಸ್ಥೆಗಳಿಗೆ ಸಹಾಯ: ಶ್ರೀ ಮಹಾಲಕ್ಷ್ಮಿಚಾರಿಟಬಲ್ ಟ್ರಸ್ಟ್ ವತಿ ಯಿಂದ ರಾಮಕೃಷ್ಣ ಆಶ್ರಮಕ್ಕೆ 5 ಲಕ್ಷ, ಜನಜಾಗರಣ ಟ್ರಸ್ಟ್, ದೀನಬಂಧು ಟ್ರಸ್ಟ್ ಹಾಗೂ ಮೈಸೂರಿನ ಶಕ್ತಿಧಾಮಕ್ಕೆ ತಲಾ 1 ಲಕ್ಷ, ವಿಶ್ವೇಶ್ವರನಗರದಲ್ಲಿರುವ ಸುಬ್ರ ಮಣ್ಯ ದೇವಸ್ಥಾನಕ್ಕೆ 2.50 ಕೆಜಿ ಬೆಳ್ಳಿ, ನಿರೀಕ್ಷೆ ವಿಶೇಷಚೇತನ ಮಕ್ಕಳ ಶಾಲೆ, ಕರುಣಾ ಮಯಿ ಫೌಂಡೇಶನ್‍ಗೆ ತಲಾ 50 ಸಾವಿರ ಹಾಗೂ ಕ್ರೀಡಾಪಟು ಬಿ.ಮನುಷ್ ಮತ್ತು ವಿದ್ಯಾರ್ಥಿನಿ ನಂದಿತಾರಾಜ್‍ಗೆ ತಲಾ 25 ಸಾವಿರ ರೂ. ಸಹಾಯ ಧನ ನೀಡಲಾ ಯಿತು. ಹಾಗೆಯೇ ಮೈಸೂರು ತಾಲೂಕಿನ ಗೆಜ್ಜೆಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ 2 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶೌಚಾಲಯದ ಕೀಯನ್ನು ಹಸ್ತಾಂತರಿಸ ಲಾಯಿತು.

ಕಾರ್ಯಕ್ರಮದಲ್ಲಿ ರಂಗಾ ಯಣ ಮಾಜಿ ನಿರ್ದೇಶಕ ಜನಾರ್ಧನ್, ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಹೋಟೆಲ್ ಮಾಲೀ ಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಪ್ರಸಿದ್ಧ ಹಿನ್ನೆಲೆ ಗಾಯಕಿ ಹೆಚ್.ಆರ್. ಲೀಲಾವತಿ, ಶಂಕರ್ ದೇವನೂರು, ಶ್ರೀ ಮಹಾಲಕ್ಷ್ಮಿಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್, ಭೀಮಾ ಪ್ರಾಪರ್ಟಿಸ್‍ನ ನಾಗೇಶ್, ಭವಾನಿ, ಕೃಪಾ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Translate »