ಸರಳ ವ್ಯಕ್ತಿತ್ವದ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಬೆಂಬಲಿಸಿ
ಮೈಸೂರು

ಸರಳ ವ್ಯಕ್ತಿತ್ವದ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಬೆಂಬಲಿಸಿ

April 16, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಬ್ರಾಹ್ಮಣರು ಆಗದಿದ್ದರೂ ಕರ್ಮ ದಲ್ಲೇ ಅವರು ಬ್ರಾಹ್ಮಣರು. ಈ ಚುನಾವಣೆಯಲ್ಲಿ ಸರಳ ವ್ಯಕ್ತಿತ್ವದ ವಿಜಯಶಂಕರ್ ಅವರನ್ನು ನಮ್ಮ ಸಮಾಜದ ಮುಖಂಡರು ಬೆಂಬಲಿಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನವಿ ಮಾಡಿದರು.

ಚಾಮುಂಡಿಪುರಂನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಸೋಮವಾರ ಆಯೋಜಿಸಿದ್ದ ಬ್ರಾಹ್ಮಣರ ಸಭೆಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣರೆಂದರೆ ಬಿಜೆಪಿಗೆ ಮತ ಹಾಕುತ್ತಾರೆ ಎಂಬ ಭಾವನೆ ಇದೆ. ಆದರೆ, ಬ್ರಾಹ್ಮಣರು ಬಿಜೆಪಿಗೆ ಮೀಸಲು ಅನ್ನುವುದು ಸುಳ್ಳು. ಚುನಾವಣೆಗಳಲ್ಲಿ ನಮ್ಮ ಸಮಾಜದವರು ಅಭ್ಯರ್ಥಿ ನೋಡಿ ಮತ ಹಾಕುತ್ತಾರೆ. ಹಾಗಾಗಿ ಈ ಚುನಾ ವಣೆಯಲ್ಲಿ ನಮ್ಮ ಸಮಾಜದವರು ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂಬ ವಿಶ್ವಾಸವಿದ್ದು, ಸರಳ ವ್ಯಕ್ತಿತ್ವ, ಜನಪರ ಕಾಳಜಿಯಿರುವ ವಿಜಯಶಂಕರ್ ಬೆಂಬಲಿಸುವಂತೆ ಮನವಿ ಮಾಡಿದರು.

ಆದರೆ, ಬಿಜೆಪಿ ಅಭ್ಯರ್ಥಿ ವ್ಯಕ್ತಿತ್ವದ ಬಗ್ಗೆ ಹೇಳುವ ಅಗತ್ಯವಿಲ್ಲ. ಒಬ್ಬ ಸಂಸದ ಯಾವ ರೀತಿ ನಡೆದು ಕೊಳ್ಳಬೇಕೋ ಆ ರೀತಿ ನಡೆದುಕೊಳ್ಳುವುದಿಲ್ಲ. ಎಲ್ಲಾ ಸಮಾಜದವರನ್ನು ಒಗ್ಗೂಡಿಸುವ ಕೆಲಸವನ್ನೂ ಮಾಡಿಲ್ಲ. ಹಾಗಾಗಿ ಈ ಬಾರಿ ವಿಜಯಶಂಕರ್ ಗೆಲುವು ಸಾಧಿ ಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬ್ರಾಹ್ಮಣರು ಬಿಜೆಪಿಯ ಓಟ್ ಬ್ಯಾಂಕ್ ಎಂದು ಬಿಂಬಿಸುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿರುವ ಸಭಾಧ್ಯಕ್ಷ, ಕಂದಾಯ ಸಚಿವರು, ಕೆಪಿಸಿಸಿ ಅಧ್ಯ ಕ್ಷರೂ ಕೂಡ ಬ್ರಾಹ್ಮಣ ಸಮಾಜದವರೇ. ಇದಕ್ಕಿಂತ ಪಕ್ಷ ಮತ್ತೇನು ಮಾಡಬೇಕು ಎಂದು ಪ್ರಶ್ನಿಸಿದರು.
ನಾನು ಸಚಿವನಾಗಿದ್ದ ವೇಳೆ ಬ್ರಾಹ್ಮಣ ಸಮು ದಾಯದ ನಿಗಮ ರಚನೆ ಮಾಡಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಬೇಡಿಕೆ ಇಟ್ಟಿದ್ದೆ. ಇದೇ ವೇಳೆಗೆ ಚುನಾವಣೆ ಎದುರಾಯಿತು. ಈಗ ಮೈತ್ರಿ ಸರ್ಕಾರ ಬ್ರಾಹ್ಮಣ ಸಮುದಾಯದ ನಿಗಮ ರಚನೆಗೆ 25 ಕೋಟಿ ನೀಡಿದ್ದು, ನಾನು 100 ಕೋಟಿಗೆ ಬೇಡಿಕೆ ಇಟ್ಟಿದ್ದೇನೆ. ಕೊಡುವ ಭರವಸೆ ಇದೆ ಎಂದರು.

ಜನರ ಮನಸ್ಸನ್ನು ಒಡೆದು ದೇಶವನ್ನು ಕಟ್ಟಲು ಸಾಧ್ಯ ವಿಲ್ಲ. ಬಿಜೆಪಿಗೆ ಮತ ಹಾಕದವರು ಪಾಕಿಸ್ತಾನಕ್ಕೆ ಪಲಾ ಯನ ಮಾಡಿ ಎಂದು ದೊಡ್ಡ ದೊಡ್ಡ ನಾಯಕರೇ ಹೇಳಿದಾಗ ಸಮಾಜವನ್ನು ಒಡೆಯುವ ಕೆಲಸವಾಗು ತ್ತದೆ. ಅದನ್ನು ಮಾಡಬಾರದು. ಎಲ್ಲಾ ಸಮಾಜದವ ರನ್ನೂ ಒಗ್ಗೂಡಿಸಬೇಕು. ಆ ಶಕ್ತಿ ನಮ್ಮ ಸಮಾಜಕ್ಕಿದೆ ಎಂದರು. ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ. ವಿಜಯ್‍ಕುಮಾರ್, ಹಿರಿಯ ವಿಪ್ರ ಮುಖಂಡ ಕೆ.ರಘುರಾಂ, ವಕೀಲೆ ವೀಣಾ, ಜೆಡಿಎಸ್ ಮುಖಂಡ ಅಜಯ್‍ಶಾಸ್ತ್ರಿ, ಮುಖಂಡರಾದ ಕೃಷ್ಣ, ಲೋಕೇಶ್, ರಘು, ಪ್ರಕಾಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Translate »