ಪ್ರತಾಪ್ ಸಿಂಹ ಪರ ಶಾಸಕ ನಾಗೇಂದ್ರ ಬಿರುಸಿನ ಪ್ರಚಾರ
ಮೈಸೂರು

ಪ್ರತಾಪ್ ಸಿಂಹ ಪರ ಶಾಸಕ ನಾಗೇಂದ್ರ ಬಿರುಸಿನ ಪ್ರಚಾರ

April 16, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಶಾಸಕ ಎಲ್.ನಾಗೇಂದ್ರ ಮೈಸೂರಿನ ಕುಂಬಾರ ಕೊಪ್ಪಲಿನಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಕುಂಬಾರಕೊಪ್ಪಲಿನಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಅವರು, ಮೈಸೂರಿನ ಪ್ರಮುಖ ವಾರ್ಡ್‍ಗಳಲ್ಲಿ ಕುಂಬಾರಕೊಪ್ಪಲು ಒಂದಾಗಿದೆ. ಪ್ರಚಾರದ ವೇಳೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಇಲ್ಲಿನ ಮತದಾರರು ತಮಗಿರುವ ಸಮಸ್ಯೆಗಳನ್ನು ಹೇಳುತ್ತಿದ್ದಾರೆ. ಚುನಾವಣೆಯ ನಂತರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಾಗಿ ಹೇಳುತ್ತಿದ್ದೇನೆ. ನಾನು ಶಾಸಕನಾದ ಬಳಿಕ ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ಶಾಸಕನಾಗಿ ಕೆಲವಷ್ಟೇ ತಿಂಗಳುಗಳಾಗಿವೆ. ಈ ಮೊದಲು ಮುಡಾ ಅಧ್ಯಕ್ಷನಾಗಿದ್ದಾಗ ಗರಡಿ ಮನೆ, ಮಹದೇಶ್ವರ ದೇವಸ್ಥಾನ ಸೇರಿದಂತೆ ಕೆಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಈ ವಾರ್ಡಿನ ಪಾಲಿಕೆ ಸದಸ್ಯರು ಕಾಂಗ್ರೆಸ್‍ನವರಾಗಿದ್ದಾರೆ. ಅವರಿಂದ ಸಾಧ್ಯವಾಗುವ ಕೆಲಸಗಳನ್ನು ಮಾಡಲಿ, ಶಾಸಕನಾಗಿ ನನ್ನಿಂದಾಗುವ ಕೆಲಸಗಳನ್ನು ಮಾಡುತ್ತೇನೆ ಎಂದು ತಿಳಿಸಿದರು. ಮುಖಂಡರಾದ ಸುಷ್ಮಾ, ಭೈರಪ್ಪ, ನರಸಿಂಹ, ಮಂಜಪ್ಪ, ಬಂಗಾರಪ್ಪ, ಮಾದೇಗೌಡ, ಬಸವೇಗೌಡ, ಸತೀಶ್, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Translate »