ಬ್ರಾಹ್ಮಣ ಸಮುದಾಯ ಕಡ್ಡಾಯ ಮತದಾನ ಜಾಗೃತಿ ಸಭೆ
ಮೈಸೂರು

ಬ್ರಾಹ್ಮಣ ಸಮುದಾಯ ಕಡ್ಡಾಯ ಮತದಾನ ಜಾಗೃತಿ ಸಭೆ

April 16, 2019

ಮೈಸೂರು: ಮಹಾತ್ಮ ಗಾಂಧೀಜಿ ನೇತೃತ್ವದ 1947ರ ಸ್ವಾತಂತ್ರ್ಯ ಹೋರಾಟ ಸಫಲವಾಗಬೇಕಾ ದರೆ, ಪ್ರಜಾಪ್ರಭುತ್ವದ ಮಹಾಹಬ್ಬವಾದ ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು 98 ವರ್ಷದ ವಿಪ್ರ ಮುಖಂಡ ವೇಣುಗೋಪಾಲ್ ಮನವಿ ಮಾಡಿದರು.

ಮೈಸೂರಿನ ಅಗ್ರಹಾರದ ರಾಜೇಂದ್ರ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮೈಸೂರು ಘಟಕದ ವತಿ ಯಿಂದ ಆಯೋಜಿಸಿದ್ದ 17ನೇ ಲೋಕ ಸಭಾ ಚುನಾವಣೆಯಲ್ಲಿ ಬ್ರಾಹ್ಮಣ ಸಮು ದಾಯ ಕಡ್ಡಾಯವಾಗಿ ಮತದಾನ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನಾನು, ಸ್ವಾತಂತ್ರ್ಯ ಬಂದ ನಂತರ ನಡೆದ ಎಲ್ಲಾ ವಿಧಾನ ಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲ್ಲಿ ಮತದಾನ ಮಾಡಿ ದ್ದೇನೆ. ಅದು ನನ್ನ ಕರ್ತವ್ಯವೂ ಹೌದು. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮತ ದಾನ ಹಕ್ಕು ದೊರಕಿರುವುದು ಮಹಾತ್ಮ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಹೋರಾಟ ದಿಂದಲೇ ಎಂದು ಪ್ರತಿಪಾದಿಸಿದರು.

ಇದರ ಪ್ರತಿರೂಪವಾಗಿ, ಐದು ವರ್ಷ ಕ್ಕೊಮ್ಮೆ ಎದುರಾಗುವ ವಿಧಾನ ಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ನಮಗೆ ಬೇಕಾದ ನಾಯಕ ಅಥವಾ ಪಕ್ಷ ವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮತದಾರರಿಗೆ ಲಭ್ಯವಾಗಿದೆ. ಇದರ ಹಿಂದೆ 1947ರ ಸ್ವಾತಂತ್ರ್ಯ ಹೋರಾಟದ ಬಲಿ ದಾನವನ್ನು ಪ್ರತಿಯೊಬ್ಬ ಯುವಕರು ನೆನ ಪಿಸಿಕೊಳ್ಳಬೇಕು. ಅಲ್ಲದೆ, ನಾವೆಲ್ಲರೂ ಈ ಬಾರಿ ಮತದಾನದಲ್ಲಿ ಪಾಲ್ಗೊಂಡು ಪ್ರತಿಯೊಬ್ಬರು ರಾಷ್ಟ್ರಪ್ರೇಮದ ಮಹತ್ವ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿ ದರು. ವೇದಿಕೆಯಲ್ಲಿ ಮುಕ್ತ ವಿವಿ ಪ್ರಾಧ್ಯಾ ಪಕ ಡಾ.ಶೆಲ್ವ ಪಿಳ್ಳೆ ಅಯ್ಯಂಗಾರ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಸೇರಿದಂತೆ ಇತರರಿದ್ದರು.

Translate »