ವಿದ್ಯುತ್ ತಂತಿ ತುಂಡಾಗಿ ಬಿದ್ದು ಬೇಸಾಯ ನಿರತ ರೈತ ಬಲಿ
ಮೈಸೂರು

ವಿದ್ಯುತ್ ತಂತಿ ತುಂಡಾಗಿ ಬಿದ್ದು ಬೇಸಾಯ ನಿರತ ರೈತ ಬಲಿ

April 16, 2019

ಮೈಸೂರು: ವಿದ್ಯುತ್ ತಂತಿ ತುಂಡಾಗಿ ಬಿದ್ದು ಬೇಸಾಯ ನಿರತ ರೈತರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮೈಸೂರು ತಾಲೂಕಿನ ಎಳೆ ಗೌಡನಹುಂಡಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಎಳೆಗೌಡನಹುಂಡಿ ಗ್ರಾಮದ ಲೇ.ಎಲೆಗೌಡರ ಮಗ ಗವಿಸಿದ್ದೇಗೌಡ(50) ಉಳುಮೆ ಮಾಡುವಾಗ ವಿದ್ಯುತ್ ತಂತಿ ಮೈ ಮೇಲೆ ಬಿದ್ದು ಮೃತಪಟ್ಟವರು. ಇಂದು ಬೆಳಿಗ್ಗೆ ರಂಗಸಮುದ್ರ ನಿವಾಸಿ ಮುಸ್ತಾಜ್ ಬೈಜ್ ಎಂಬುವರ ಕಬ್ಬು ಬಿತ್ತನೆ ಮಾಡಿದ್ದ ಗದ್ದೆಯಲ್ಲಿ ಕುಂಟೆ(ಉಳುಮೆ) ಹೊಡೆಯಲು ಆರಂಭಿಸಿದ ಕೆಲವೇ ನಿಮಿಷದಲ್ಲಿ ವಿದ್ಯುತ್ ತಂತಿ ತುಂಡಾಗಿ ಅವರ ಮೇಲೆ ಬಿದ್ದಿದೆ. ಇದರಿಂದ ಗಾಬರಿ ಗೊಂಡ 2 ಎತ್ತುಗಳು ಓಡಿ ಹೋಗಿ ಜೀವ ಉಳಿಸಿ ಕೊಂಡಿವೆ. ಆದರೆ ಗವಿ ಸಿದ್ದೇಗೌಡ ಅವರಿಗೆ ವಿದ್ಯುತ್ ತಂತಿ ಸುತ್ತಿಕೊಂಡಿದ್ದರಿಂದ ಒದ್ದಾಡಿ ಸ್ಥಳದಲ್ಲಿಯೇ ಸಾವನ್ನ ಪ್ಪಿದ್ದಾರೆ. ಅಕ್ಕಪಕ್ಕದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರು ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ತುಂಬಲ ದಲ್ಲಿರುವ ಚೆಸ್ಕಾಂ ಉಪ ವಿಭಾಗಕ್ಕೆ ಕರೆ ಮಾಡಿದ್ದಾರೆ. ಆದರೆ ಸಿಬ್ಬಂದಿ ಕರೆ ಸ್ವೀಕರಿಸಲಿಲ್ಲ. ಒಂದು ವೇಳೆ ತಕ್ಷಣ ಕ್ರಮ ಕೈಗೊಂಡಿದ್ದರೆ ಬಡ ರೈತನ ಜೀವ ಉಳಿಸಬಹುದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಅಭಿಪ್ರಾಯಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ, ಚೆಸ್ಕಾಂ ಸಿಬ್ಬಂದಿ ನಿರ್ಲ ಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಮೃತರಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೊಲ-ಗದ್ದೆಗಳಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಬನ್ನೂರು ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿ ದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರ ರಿಗೆ ದೇಹ ಒಪ್ಪಿಸಿದರು.

ಚೆಸ್ಕಾಂ ಸಿಬ್ಬಂದಿಗಳೇ ನಿರ್ಲಕ್ಷಿಸಬೇಡಿ: ಇಂದು ಬೆಳಿಗ್ಗೆ ನಡೆದ ವಿದ್ಯುತ್ ಅವಘಡ ಒಂದೇ ವಾರದಲ್ಲಿ ನಾಲ್ಕನೇ ಪ್ರಕರಣವಾಗಿದೆ. ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಯಲ್ಲಿ ಕಳೆದ 2 ವಾರದಿಂದ ನಾಲ್ವರು ವಿದ್ಯುತ್ ತಂತಿ ತುಂಡಾಗಿ ಬಿದ್ದು ಸಾವನ್ನಪ್ಪಿದ್ದಾರೆ. ಗ್ರಾಮೀಣ ಪ್ರದೇಶ ದಲ್ಲಿ ವಿದ್ಯುತ್ ತಂತಿ ಜೋತಾಡುತ್ತಿರುವ ಬಗ್ಗೆ ದೂರು ಗಳು ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೇಸಿಗೆ ಬೇಗೆಗೆ ಕೆಲವು ವಿದ್ಯುತ್ ತಂತಿಗಳು ಜೋತು ಬಿದ್ದಿರು ತ್ತವೆ. ಕೆಲವೆಡೆ ವಿದ್ಯುತ್ ತಂತಿಗಳು ದುರ್ಬಲವಾಗಿರು ತ್ತದೆ. ಮತ್ತಷ್ಟು ಅಮಾಯಕರು ಬಲಿಯಾಗುವ ಮುನ್ನ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Translate »