ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ ಎಂದಿದ್ದೇನೆಯೇ ಹೊರತು ಬೇರೆಡೆ ನಿಲ್ಲಲ್ಲ ಎಂದು ಹೇಳಿಲ್ಲ
ಮೈಸೂರು

ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ ಎಂದಿದ್ದೇನೆಯೇ ಹೊರತು ಬೇರೆಡೆ ನಿಲ್ಲಲ್ಲ ಎಂದು ಹೇಳಿಲ್ಲ

April 16, 2019

ಮೈಸೂರು: ನಾನು ಕೇವಲ ಚಾಮುಂಡೇಶ್ವರಿಯಲ್ಲಿ ಮಾತ್ರ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದ್ದೇನೆಯೇ ಹೊರತು, ಬೇರೆ ಕಡೆ ನಿಲ್ಲೋದಿಲ್ಲ ಎಂದು ಹೇಳಿದ್ದೇನೆಯೇ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸುಳಿವು ನೀಡಿದ್ದಾರೆ.

ಮೈಸೂರಿನ ತಮ್ಮ ನಿವಾಸದಲ್ಲಿ ಸೋಮ ವಾರ ಮಾಧ್ಯಮದವರೊಂದಿಗೆ ಮಾತನಾ ಡಿದ ಅವರು, ಚುನಾವಣೆಗೆ ಇನ್ನೂ ನಾಲ್ಕು ವರ್ಷ ಬಾಕಿ ಇದೆ. ಮುಂದೆ ನೋಡೋಣ. ನನಗೂ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಋಣ ಮುಗಿದಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿಗೆ ಸೋಲುಂಟಾದರೆ ಸರ್ಕಾರ ಉಳಿಯುತ್ತ ದೆಯೇ ಎಂಬ ಪ್ರಶ್ನೆಗೆ ಮೈತ್ರಿ ಪಕ್ಷಕ್ಕೆ ಸೋಲಾದರೆ, ಸರ್ಕಾರವನ್ನು ಬಿಜೆಪಿ ಅಸ್ಥಿರಗೊಳಿಸಬಹುದು ಎಂದು ನಾನು ಹೇಳಿದ್ದೇನೆ. ಏಕೆಂದರೆ ಮೈತ್ರಿ ಸರ್ಕಾರ ವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ಸದಾ ಮಾಡುತ್ತಲೇ ಇದೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಸರ್ಕಾರ ಬೀಳಿಸುವುದಾಗಿ ಯಡಿ ಯೂರಪ್ಪ ಮೊದಲಿನಿಂದಲೂ ಹೇಳಿ ಕೊಂಡೇ ಬರುತ್ತಿದ್ದಾರೆ. ಸರ್ಕಾರ ಬೀಳಿ ಸಲು ಸಾಧ್ಯವಾಯಿತೇ ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪ ಒಬ್ಬರೇ ನಾಯ ಕರಲ್ಲ. ಯಾವುದೇ ತತ್ವ, ಸಿದ್ಧಾಂತವಿಲ್ಲದ ಬಿಜೆಪಿಯವರಿಗೆ ನೈತಿಕತೆ ಇದೆಯೇ ಎಂದೂ ಪ್ರಶ್ನಿಸಿದರು. ಐಟಿ ಕಚೇರಿ ಎದುರು ನಡೆದ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ನನಗೂ ಐಟಿಯಿಂದ ನೋಟೀಸ್ ಬಂದಿದೆ. ಈಗಾಗಲೇ ಅದಕ್ಕೆ ಉತ್ತರ ಕೊಟ್ಟಿ ದ್ದೇನೆ. ನಾನು ಚುನಾವಣೆಯ ಒತ್ತಡದಲ್ಲಿ ದ್ದೇನೆ. ಹೀಗಾಗಿ ಉತ್ತರ ನೀಡಲು 15 ದಿನ ಬೇಕು ಎಂದು ಉತ್ತರಿಸಿದ್ದೇನೆ ಎಂದರು.

ಕೆಳ ಮಟ್ಟಕ್ಕಿಳಿದ ಪ್ರಧಾನಿ ಮೋದಿ: ರಾಜ್ಯದ ಮೈತ್ರಿ ಸರ್ಕಾರ ಪರ್ಸೆಂಟೇಜ್ ಸರ್ಕಾರ ಎಂಬ ಮೋದಿ ಹೇಳಿಕೆಗೆ ಕಿಡಿಕಾರಿದ ಸಿದ್ದರಾಮಯ್ಯ, ಒಬ್ಬ ಪ್ರಧಾನಿಯಾಗಿ ಇಂತಹ ಹೇಳಿಕೆ ಕೊಡಬಾರದು. ಇದೊಂದು ಹುರುಳಿಲ್ಲದ ಆರೋಪ. ಮೋದಿ ಸರ್ಕಾರ ಶೇ.ನೂರರಷ್ಟು ಭ್ರಷ್ಟ ಸರ್ಕಾರ ಎಂದು ನಾನು ಆರೋಪ ಮಾಡುತ್ತೇನೆ. ನೀವ ದನ್ನು ಹಾಕುತ್ತೀರಾ ಎಂದು ಮಾಧ್ಯಮದವ ರನ್ನು ಪ್ರಶ್ನಿಸಿದ ಅವರು, ಒಬ್ಬ ಪ್ರಧಾನಿ ಈ ಮಟ್ಟಕ್ಕೆ ಇಳಿದು ಮಾತನಾಡಬಾರದು. ಅವರ ಬಳಿ ಇಂಟೆಲಿಜೆನ್ಸ್ ಸೇರಿದಂತೆ ಹಲವು ಇಲಾಖೆಗಳಿವೆ. ಇಂತಹ ಆರೋಪ ಮಾಡುವ ಮುನ್ನ ಯೋಚನೆ ಮಾಡ ಬೇಕಾಗುತ್ತದೆ ಎಂದು ಆಕ್ಷೇಪಿಸಿದರು.

ಕಳೆದ 5 ವರ್ಷದಲ್ಲಿ ಉದ್ವೇಗಗೊಳಿಸು ವಂತಹ ವಿಷಯಗಳನ್ನು ಬಿಟ್ಟರೆ ಬೇರೇ ನನ್ನೂ ಅವರು ಮಾತನಾಡಿಲ್ಲ. ರಾಹುಲ್ ಗಾಂಧಿ ವಯನಾಡಲ್ಲಿ ನಿಂತರೆ ಅಲ್ಲಿ ಅಲ್ಪ ಸಂಖ್ಯಾತರಿದ್ದಾರೆ ಅದಕ್ಕಾಗಿ ನಿಲ್ಲುತ್ತಿದ್ದಾರೆ ಎಂದು ಆರೋಪ ಮಾಡುತ್ತಾರೆ. ಇದು ಕೋಮು ಪ್ರಚೋದನೆ ಅಲ್ಲವೇ. ಇಂತಹ ಹೇಳಿಕೆಯನ್ನು ಪ್ರಧಾನಿ ಕೊಡಬಹುದೇ ಎಂದು ಆಕ್ರೋಶದಿಂದ ಪ್ರಶ್ನಿಸಿದರು.

ಲೋಕಸಭೆ ಚುನಾವಣೆಯ ಬಳಿಕ ನರೇಂದ್ರ ಮೋದಿ ಮನೆಗೆ ಹೋಗುತ್ತಾರೆ. ಅಮಿತ್ ಷಾಗೆ ಬೇಲ್ ಕ್ಯಾನ್ಸಲ್ ಆಗಿ ಪರೋಕ್ಷವಾಗಿ ಅವರು ಜೈಲಿಗೆ ಹೋಗು ತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

Translate »