ಸೇವಾ ವ್ಯವಸ್ಥೆಗಳಿಗೆ ನಮೋ ಹೆಸರಿನ ವೈಭವೀಕರಣ
ಮೈಸೂರು

ಸೇವಾ ವ್ಯವಸ್ಥೆಗಳಿಗೆ ನಮೋ ಹೆಸರಿನ ವೈಭವೀಕರಣ

April 16, 2019

ಮೈಸೂರು: ದೇಶದ ಎಲ್ಲಾ ಸಂಸ್ಥೆಗಳನ್ನೂ ನಮೋಗೆ ಬಳಸಿ ಕೊಳ್ಳಲಾಗುತ್ತಿದ್ದು, ನಮೋ ಟಿವಿ, ನಮೋ ಆ್ಯಪ್, ನಮೋ ಸೇನೆ, ನಮೋ ಸಿಬಿಐ, ನಮೋ ಆರ್‍ಬಿಐ ಮಾಡುತ್ತಿದ್ದಾರೆ. ದೇಶದ ಇಡೀ ವ್ಯವಸ್ಥೆಯನ್ನೇ ನಮೋ ಹೆಸರಿನಲ್ಲಿ ವೈಭವೀಕರಿಸಲಾಗುತ್ತಿದೆ ಎಂದು ಹಿರಿಯ ರಾಜಕಾರಣಿ, ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಇಂದಿಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದರು.

ದೇಶದ ಸೈನ್ಯವನ್ನೂ ರಾಜಕೀಯಕ್ಕೆ ಸೇರಿಸಿದ್ದಾರೆ. ಈ ರೀತಿ ಹಿಂದೆ ಯಾವ ಪ್ರಧಾನಿಯೂ ಮಾಡಿರಲಿಲ್ಲ. ಬಾಲಾ ಕೋಟ್ ಹುತಾತ್ಮರಿಗೆ ಮತ ನೀಡಿ ಎಂದು ನಾಲ್ಕು ದಿನದ ಹಿಂದೆ ಮತ ಕೇಳಿದ್ದಾರೆ. ಇವೆಲ್ಲವನ್ನೂ ನೋಡಿ ಚುನಾ ವಣಾ ಆಯೋಗ ನಿದ್ದೆ ಮಾಡುತ್ತಿದೆಯೇ ಎಂದು ಆಕ್ಷೇಪಿಸಿದರು.

ಹೇಗಾದರೂ ಸರಿ, ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಉದ್ದೇಶ ಅವರದ್ದು, ಇದು ಬಹಳ ಅಪಾಯಕಾರಿ ನಡೆ ಎಂದು ಆತಂಕ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಯಾರನ್ನೂ ಕೇಳದೆ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಹಿರಿಯ ಸಚಿವರಿಗೂ ತಿಳಿಯದ ರೀತಿ ಯಲ್ಲಿ ನೋಟು ಅಮಾನ್ಯೀಕರಣ ಮಾಡಿ ದರು. ಆರ್‍ಬಿಐನಲ್ಲಿ ಚರ್ಚೆಯಾಗಿ ಶಿಫಾ ರಸು ಆಗಬೇಕು. ಬಳಿಕ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಬೇಕು. ಆದರೆ ನರೇಂದ್ರ ಮೋದಿ ಹಾಗೆ ಮಾಡಲಿಲ್ಲ. ಸ್ವಯಂ ಘೋಷಣೆ ಮಾಡಿದರು. ಇದು ಬಿಜೆಪಿ ಸರ್ಕಾರದ ಕಾರ್ಯವೈಖರಿ. ಇದೇನು ಸರ್ಕಾರವೇ? ಪ್ರಜಾಪ್ರಭು ತ್ವವೇ? ಎಂದು ಕಟುವಾಗಿ ಪ್ರಶ್ನಿಸಿದರು.

ಮೋದಿ ಕೊಡುಗೆ ಏನೂ ಇಲ್ಲ: 2014ರ ಬಿಜೆಪಿ ಪ್ರಣಾಳಿಕೆಯಲ್ಲಿ ದೇಶದ ಬೆಳ ವಣಿಗೆ, ಅಭಿವೃದ್ಧಿ, ಅಚ್ಛೇ ದಿನ್, ಸಬ್‍ಕಾ ಸಾತ್-ಸಬ್‍ಕಾ ವಿಕಾಸ್ ಎಂದೆಲ್ಲಾ ಇತ್ತು. ಅದ್ಯಾವುದೂ ಜಾರಿಯಾಗಲಿಲ್ಲ. ಐದು ವರ್ಷದ ನಂತರ ಈಗಿನ ಬಿಜೆಪಿ ಪ್ರಣಾಳಿಕೆಯಲ್ಲಿ ಅಂತಹ ಯಾವೊಂದು ಅಕ್ಷರವೂ ಇಲ್ಲ. ಕೃಷಿ ಮತ್ತು ಉದ್ಯೋಗ ಕ್ಷೇತ್ರಕ್ಕೆ ಏನು ಮಾಡಿದ್ದಾರೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರಕ್ಕೆ ಏನೇನೂ ಇಲ್ಲ. ಪ್ರಧಾನಮಂತ್ರಿ ನೀಡಿರುವ ಸಾಲಮನ್ನಾ ಭರವಸೆ ದೊಡ್ಡ ವಂಚನೆ. ರೈತರಿಗಾಗಿ ಏನು ಮಾಡಿದ್ದಾರೆ ಎಂದು ಪ್ರೊ.ಬಿಕೆಸಿ ಪ್ರಶ್ನಿಸಿದರು.

ಬಿಜೆಪಿ ಮತ್ತು ಮೋದಿ ನಕಲಿ ದೇಶ ಭಕ್ತರು: ದೇಶದಲ್ಲಿ ನಕ್ಸಲೈಟ್ ಚಟು ವಟಿಕೆಗಳು, ಭಯೋತ್ಪಾದನೆ ಇದೆ. ಆದರೆ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ. ಆದರೆ ಮೋದಿ ಮತ್ತು ಅಮಿತ್ ಶಾ ಇಡೀ ದೇಶದಲ್ಲಿ ಭಯೋ ತ್ಪಾದನೆ ಇದೆ ಎಂದು ವಿದೇಶದಲ್ಲೆಲ್ಲಾ ಹೇಳಿಕೊಂಡು ತಿರುಗುತ್ತಿದ್ದಾರೆ. ಜನರಿಗೆ ಭಯ, ಆತಂಕ ದೇಶಭಕ್ತರು ಎಂದು ಕರೆದು ಕೊಳ್ಳುವ ಇವರೆಲ್ಲರೂ ನಕಲಿ ದೇಶ ಭಕ್ತರು. ನಾವು, ನೀವುಗಳೇ ನಿಜವಾದ ದೇಶ ಭಕ್ತರು ಎಂದು ಬಿಜೆಪಿ ಮತ್ತು ಮೋದಿ ವಿರುದ್ಧ ಹರಿಹಾಯ್ದರು. ಗೋಷ್ಠಿ ಯಲ್ಲಿ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಮಾಜಿ ಮೇಯರ್ ಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು.

Translate »