ಮೋದಿ ವಿರುದ್ಧ ಆರ್‍ಎಸ್‍ಡಿ ಟೀಕಾ ಪ್ರಹಾರ
ಮೈಸೂರು

ಮೋದಿ ವಿರುದ್ಧ ಆರ್‍ಎಸ್‍ಡಿ ಟೀಕಾ ಪ್ರಹಾರ

April 16, 2019

ಮೈಸೂರು: ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ದೇಶದ ಪ್ರಜಾಪ್ರಭು ತ್ವಕ್ಕೆ ಗಂಡಾಂತರ ಎದುರಾಗಿದ್ದು, ಪ್ರಸಕ್ತ ಲೋಕಸಭಾ ಚುನಾ ವಣೆಯಲ್ಲಿ ಬಿಜೆಪಿ ಮುಕ್ತಗೊಳಿಸಬೇಕಿದೆ ಎಂದು ರಾಷ್ಟ್ರ ಸೇವಾ ದಳದ (ಆರ್‍ಎಸ್‍ಡಿ) ಅಧ್ಯಕ್ಷ ಡಾ. ಸುರೇಶ್ ಖೈರ್ನರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‍ಎಸ್‍ಡಿ ಸುಮಾರು 75 ವರ್ಷ ಗಳ ಇತಿಹಾಸ ಹೊಂದಿದ್ದು, ಇದೊಂದು ರಾಜಕೀಯೇತರ ಸೇವಾ ಸಂಘಟನೆ. ಈವರೆಗೂ ಯಾವುದೇ ರಾಜಕೀಯ ಪಕ್ಷ ಗಳ ಪರವಾಗಿ ಸಂಘಟನೆ ಪ್ರಚಾರ ಮಾಡಿಲ್ಲ. ಆದರೆ ಇದೇ ಮೊದಲ ಬಾರಿಗೆ ಸಂಘ ಟನೆ ಬೀದಿಗಿಳಿದು ಬಿಜೆಪಿ ಮುಕ್ತಗೊಳಿ ಸಲು ಹೋರಾಟ ನಡೆಸುತ್ತಿದೆ. ಇದಕ್ಕೆ ಕಾರಣ ಬಿಜೆಪಿ ಪಕ್ಷದ ಸರ್ವಾಧಿಕಾರ ನೀತಿಯಾಗಿದೆ ಎಂದು ಕಿಡಿಕಾರಿದರು.

ಕೇಂದ್ರದ ಬಿಜೆಪಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದೆ. ಸಾರ್ವ ಜನಿಕ ಉದ್ದಿಮೆಗಳ ಖಾಸಗೀಕರಣ ಮಾಡಿದೆ. ಕೃಷಿ ವಲಯಕ್ಕೆ ಯಾವುದೇ ಉತ್ತೇಜನ ನೀಡಿಲ್ಲ. ಅಧಿಕ ಮುಖಬೆಲೆಯ ನೋಟು ಅಪಮೌಲ್ಯೀಕರಣದಿಂದ ದೇಶದ ಆರ್ಥಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಯಿತು. ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸು ತ್ತೇವೆ ಎಂಬ ಭರವಸೆ ಹುಸಿಯಾಗಿದ್ದು, ಇರುವ ಉದ್ಯೋಗಗಳನ್ನು ಕಳೆದುಕೊಂಡು ಯುವ ಸಮುದಾಯ ನಿರುದ್ಯೋಗಕ್ಕೆ ತುತ್ತಾಗುತ್ತಿದೆ ಎಂದು ಆರೋಪಿಸಿದರು.

ಈಗಿನ ಚುನಾವಣಾ ಆಯೋಗ ನೀತಿ ಸಂಹಿತೆ ಉಲ್ಲಂಘಿಸಿದರೂ ನರೇಂದ್ರ ಮೋದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳು ತ್ತಿಲ್ಲ. ಪುಲ್ವಾಮ ದಾಳಿ ಬಗ್ಗೆ ಹಲವು ಸಂದೇಹಗಳಿದ್ದು, ಈ ಪ್ರಕರಣ ಸಂಬಂಧ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸೇವಾ ದಳದ ಮುಖಂಡ ಅಪ್ಪ ಸಾಹೇಬ್ ಹರನಾಳ್, ಮೈಸೂರು ನಗರ ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷ ಆರ್.ಗಿರೀಶ್, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರು, ಡೈರಿ ವೆಂಕಟೇಶ್, ಕಾರ್ಯದರ್ಶಿ ಆರ್.ಹೆಚ್. ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

Translate »