ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಬ್ರಾಹ್ಮಣರು ಆಗದಿದ್ದರೂ ಕರ್ಮ ದಲ್ಲೇ ಅವರು ಬ್ರಾಹ್ಮಣರು. ಈ ಚುನಾವಣೆಯಲ್ಲಿ ಸರಳ ವ್ಯಕ್ತಿತ್ವದ ವಿಜಯಶಂಕರ್ ಅವರನ್ನು ನಮ್ಮ ಸಮಾಜದ ಮುಖಂಡರು ಬೆಂಬಲಿಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನವಿ ಮಾಡಿದರು. ಚಾಮುಂಡಿಪುರಂನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಸೋಮವಾರ ಆಯೋಜಿಸಿದ್ದ ಬ್ರಾಹ್ಮಣರ ಸಭೆಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣರೆಂದರೆ ಬಿಜೆಪಿಗೆ ಮತ ಹಾಕುತ್ತಾರೆ ಎಂಬ ಭಾವನೆ ಇದೆ. ಆದರೆ, ಬ್ರಾಹ್ಮಣರು ಬಿಜೆಪಿಗೆ ಮೀಸಲು ಅನ್ನುವುದು ಸುಳ್ಳು. ಚುನಾವಣೆಗಳಲ್ಲಿ ನಮ್ಮ…
ಪ್ರತಾಪ್ ಸಿಂಹ ಪರ ಶಾಸಕ ನಾಗೇಂದ್ರ ಬಿರುಸಿನ ಪ್ರಚಾರ
April 16, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಶಾಸಕ ಎಲ್.ನಾಗೇಂದ್ರ ಮೈಸೂರಿನ ಕುಂಬಾರ ಕೊಪ್ಪಲಿನಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಕುಂಬಾರಕೊಪ್ಪಲಿನಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಅವರು, ಮೈಸೂರಿನ ಪ್ರಮುಖ ವಾರ್ಡ್‍ಗಳಲ್ಲಿ ಕುಂಬಾರಕೊಪ್ಪಲು ಒಂದಾಗಿದೆ. ಪ್ರಚಾರದ ವೇಳೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಇಲ್ಲಿನ ಮತದಾರರು ತಮಗಿರುವ ಸಮಸ್ಯೆಗಳನ್ನು ಹೇಳುತ್ತಿದ್ದಾರೆ. ಚುನಾವಣೆಯ…
ಬ್ರಾಹ್ಮಣ ಸಮುದಾಯ ಕಡ್ಡಾಯ ಮತದಾನ ಜಾಗೃತಿ ಸಭೆ
April 16, 2019ಮೈಸೂರು: ಮಹಾತ್ಮ ಗಾಂಧೀಜಿ ನೇತೃತ್ವದ 1947ರ ಸ್ವಾತಂತ್ರ್ಯ ಹೋರಾಟ ಸಫಲವಾಗಬೇಕಾ ದರೆ, ಪ್ರಜಾಪ್ರಭುತ್ವದ ಮಹಾಹಬ್ಬವಾದ ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು 98 ವರ್ಷದ ವಿಪ್ರ ಮುಖಂಡ ವೇಣುಗೋಪಾಲ್ ಮನವಿ ಮಾಡಿದರು. ಮೈಸೂರಿನ ಅಗ್ರಹಾರದ ರಾಜೇಂದ್ರ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮೈಸೂರು ಘಟಕದ ವತಿ ಯಿಂದ ಆಯೋಜಿಸಿದ್ದ 17ನೇ ಲೋಕ ಸಭಾ ಚುನಾವಣೆಯಲ್ಲಿ ಬ್ರಾಹ್ಮಣ ಸಮು ದಾಯ ಕಡ್ಡಾಯವಾಗಿ ಮತದಾನ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಾನು, ಸ್ವಾತಂತ್ರ್ಯ ಬಂದ ನಂತರ ನಡೆದ ಎಲ್ಲಾ…
ವಿದ್ಯುತ್ ತಂತಿ ತುಂಡಾಗಿ ಬಿದ್ದು ಬೇಸಾಯ ನಿರತ ರೈತ ಬಲಿ
April 16, 2019ಮೈಸೂರು: ವಿದ್ಯುತ್ ತಂತಿ ತುಂಡಾಗಿ ಬಿದ್ದು ಬೇಸಾಯ ನಿರತ ರೈತರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮೈಸೂರು ತಾಲೂಕಿನ ಎಳೆ ಗೌಡನಹುಂಡಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಎಳೆಗೌಡನಹುಂಡಿ ಗ್ರಾಮದ ಲೇ.ಎಲೆಗೌಡರ ಮಗ ಗವಿಸಿದ್ದೇಗೌಡ(50) ಉಳುಮೆ ಮಾಡುವಾಗ ವಿದ್ಯುತ್ ತಂತಿ ಮೈ ಮೇಲೆ ಬಿದ್ದು ಮೃತಪಟ್ಟವರು. ಇಂದು ಬೆಳಿಗ್ಗೆ ರಂಗಸಮುದ್ರ ನಿವಾಸಿ ಮುಸ್ತಾಜ್ ಬೈಜ್ ಎಂಬುವರ ಕಬ್ಬು ಬಿತ್ತನೆ ಮಾಡಿದ್ದ ಗದ್ದೆಯಲ್ಲಿ ಕುಂಟೆ(ಉಳುಮೆ) ಹೊಡೆಯಲು ಆರಂಭಿಸಿದ ಕೆಲವೇ ನಿಮಿಷದಲ್ಲಿ ವಿದ್ಯುತ್ ತಂತಿ ತುಂಡಾಗಿ ಅವರ ಮೇಲೆ ಬಿದ್ದಿದೆ. ಇದರಿಂದ…
ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ ಎಂದಿದ್ದೇನೆಯೇ ಹೊರತು ಬೇರೆಡೆ ನಿಲ್ಲಲ್ಲ ಎಂದು ಹೇಳಿಲ್ಲ
April 16, 2019ಮೈಸೂರು: ನಾನು ಕೇವಲ ಚಾಮುಂಡೇಶ್ವರಿಯಲ್ಲಿ ಮಾತ್ರ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದ್ದೇನೆಯೇ ಹೊರತು, ಬೇರೆ ಕಡೆ ನಿಲ್ಲೋದಿಲ್ಲ ಎಂದು ಹೇಳಿದ್ದೇನೆಯೇ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸುಳಿವು ನೀಡಿದ್ದಾರೆ. ಮೈಸೂರಿನ ತಮ್ಮ ನಿವಾಸದಲ್ಲಿ ಸೋಮ ವಾರ ಮಾಧ್ಯಮದವರೊಂದಿಗೆ ಮಾತನಾ ಡಿದ ಅವರು, ಚುನಾವಣೆಗೆ ಇನ್ನೂ ನಾಲ್ಕು ವರ್ಷ ಬಾಕಿ ಇದೆ. ಮುಂದೆ ನೋಡೋಣ. ನನಗೂ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಋಣ ಮುಗಿದಿದೆ ಎಂದು ತಿಳಿಸಿದರು. ಲೋಕಸಭಾ ಚುನಾವಣೆಯಲ್ಲಿ ಮೈತ್ರಿಗೆ…
ಸೇವಾ ವ್ಯವಸ್ಥೆಗಳಿಗೆ ನಮೋ ಹೆಸರಿನ ವೈಭವೀಕರಣ
April 16, 2019ಮೈಸೂರು: ದೇಶದ ಎಲ್ಲಾ ಸಂಸ್ಥೆಗಳನ್ನೂ ನಮೋಗೆ ಬಳಸಿ ಕೊಳ್ಳಲಾಗುತ್ತಿದ್ದು, ನಮೋ ಟಿವಿ, ನಮೋ ಆ್ಯಪ್, ನಮೋ ಸೇನೆ, ನಮೋ ಸಿಬಿಐ, ನಮೋ ಆರ್‍ಬಿಐ ಮಾಡುತ್ತಿದ್ದಾರೆ. ದೇಶದ ಇಡೀ ವ್ಯವಸ್ಥೆಯನ್ನೇ ನಮೋ ಹೆಸರಿನಲ್ಲಿ ವೈಭವೀಕರಿಸಲಾಗುತ್ತಿದೆ ಎಂದು ಹಿರಿಯ ರಾಜಕಾರಣಿ, ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಇಂದಿಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದರು. ದೇಶದ ಸೈನ್ಯವನ್ನೂ ರಾಜಕೀಯಕ್ಕೆ ಸೇರಿಸಿದ್ದಾರೆ. ಈ ರೀತಿ ಹಿಂದೆ ಯಾವ ಪ್ರಧಾನಿಯೂ ಮಾಡಿರಲಿಲ್ಲ. ಬಾಲಾ ಕೋಟ್ ಹುತಾತ್ಮರಿಗೆ ಮತ ನೀಡಿ ಎಂದು ನಾಲ್ಕು ದಿನದ ಹಿಂದೆ ಮತ ಕೇಳಿದ್ದಾರೆ….
ಮೋದಿ ವಿರುದ್ಧ ಆರ್‍ಎಸ್‍ಡಿ ಟೀಕಾ ಪ್ರಹಾರ
April 16, 2019ಮೈಸೂರು: ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ದೇಶದ ಪ್ರಜಾಪ್ರಭು ತ್ವಕ್ಕೆ ಗಂಡಾಂತರ ಎದುರಾಗಿದ್ದು, ಪ್ರಸಕ್ತ ಲೋಕಸಭಾ ಚುನಾ ವಣೆಯಲ್ಲಿ ಬಿಜೆಪಿ ಮುಕ್ತಗೊಳಿಸಬೇಕಿದೆ ಎಂದು ರಾಷ್ಟ್ರ ಸೇವಾ ದಳದ (ಆರ್‍ಎಸ್‍ಡಿ) ಅಧ್ಯಕ್ಷ ಡಾ. ಸುರೇಶ್ ಖೈರ್ನರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‍ಎಸ್‍ಡಿ ಸುಮಾರು 75 ವರ್ಷ ಗಳ ಇತಿಹಾಸ ಹೊಂದಿದ್ದು, ಇದೊಂದು ರಾಜಕೀಯೇತರ ಸೇವಾ ಸಂಘಟನೆ. ಈವರೆಗೂ ಯಾವುದೇ ರಾಜಕೀಯ ಪಕ್ಷ ಗಳ ಪರವಾಗಿ ಸಂಘಟನೆ ಪ್ರಚಾರ ಮಾಡಿಲ್ಲ….
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ 22 ‘ಸಖಿ’ ಮತಗಟ್ಟೆಗಳು
April 16, 2019ಮೈಸೂರು: ಮಹಿಳಾ ಮತದಾರರು ಹೆಚ್ಚಾಗಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 22 ‘ಸಖಿ’ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮೈಸೂರು ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 2ರಂತೆ 12 ಸಖಿ ಮತಗಟ್ಟೆ ಗಳು, ಕೊಡಗಿನ 2 ಕ್ಷೇತ್ರಗಳಲ್ಲಿ ತಲಾ 5ರಂತೆ 10 ಸಖಿ ಮತಗಟ್ಟೆಗಳನ್ನು ಸ್ಥಾಪಿಸ ಲಾಗಿದ್ದು, ಅಲ್ಲಿ ಮಹಿಳಾ ಸಿಬ್ಬಂದಿಗಳೇ ಮತದಾನ ಪ್ರಕ್ರಿಯೆಯಲ್ಲಿ ನಿರತರಾಗಿರುತ್ತಾರೆ ಎಂದು ಜಿಪಂ ಸಿಇಓ ಕೆ.ಜ್ಯೋತಿ ತಿಳಿಸಿದ್ದಾರೆ. ಅದೇ ರೀತಿ ಪಿರಿಯಾಪಟ್ಟಣ, ಹುಣಸೂರು, ವಿರಾಜಪೇಟೆ ಮತ್ತು ಮಡಿಕೇರಿಗಳಲ್ಲಿ ಬುಡಕಟ್ಟು ಮತಗಟ್ಟೆಗಳನ್ನು ಸ್ಥಾಪಿಸಿ ಅಲ್ಲಿ…
ಚುನಾವಣೆ ಹಿನ್ನೆಲೆ: ಮೈಸೂರು ಜೈಲು ಮೇಲೆ ಪೊಲೀಸರ ದಿಢೀರ್ ದಾಳಿ ಖೈದಿಗಳ ಬಳಿ 1900 ರೂ. ನಗದು ಪತ್ತೆ
April 16, 2019ಮೈಸೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮೀಷ್ನರ್ ಕೆ.ಟಿ. ಬಾಲಕೃಷ್ಣ, ಡಿಸಿಪಿ ಎಂ. ಮುತ್ತುರಾಜ್ ನೇತೃತ್ವದಲ್ಲಿ ಇಂದು ಮೈಸೂರಿನ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ, ಪರಿಶೀಲಿಸಿದರು. ಜೈಲುವಾಸಿಗಳು ಹಾಗೂ ಬ್ಯಾರಕ್‍ಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ 1,900 ರೂ. ನಗದು ಪತ್ತೆಯಾಗಿದ್ದು, ಆ ಸಂಬಂಧ ತೀವ್ರ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈಲಿನಲ್ಲಿರುವ ರೌಡಿಗಳು, ಸಮಾಜಘಾತುಕ ವ್ಯಕ್ತಿಗಳು ಕಾರಾಗೃಹದಿಂದಲೇ ಮೊಬೈಲ್ ಫೋನ್ ಮೂಲಕ ಮತದಾರರ ಮೇಲೆ ಪ್ರಭಾವ ಸಾಧ್ಯತೆ ಇರುವುದರಿಂದ, ಬಂಧಿಗಳು…
ಮೈತ್ರಿ ಅಭ್ಯರ್ಥಿಗಳ ಬೆಂಬಲಿಸಲು ನಾಯಕ ಸಮುದಾಯಕ್ಕೆ ಮನವಿ
April 16, 2019ಮೈಸೂರು: ಮೈಸೂರು-ಕೊಡಗು ಹಾಗೂ ಚಾಮರಾಜನಗರ ಲೋಕ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ನಾಯಕ ಸಮುದಾಯ ಬೆಂಬಲ ನೀಡಬೇಕೆಂದು ಶಾಸಕ ಅನಿಲ್ ಚಿಕ್ಕಮಾದು ಮನವಿ ಮಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು-ಕೊಡಗು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸಿ.ಹೆಚ್ ವಿಜಯಶಂಕರ್ ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಆರ್.ಧ್ರುವನಾರಾಯಣ್ ಅವರಿಗೆ ನಾಯಕ ಸಮುದಾಯ ಬೆಂಬಲ ನೀಡಬೇಕೆಂದು ಕೋರಿದರು. ನಾಯಕ ಜನಾಂಗದ ಪರ್ಯಾಯ ಪದಗಳಾದ ಪರಿವಾರ ಮತ್ತು ತಳವಾರವನ್ನು ಪರಿಶಿಷ್ಟ ಪಂಗಡಕ್ಕೆ ಈಗಾಗಲೇ ಸೇರಿಸಿದ್ದೇವೆ…