ಚುನಾವಣೆ ಹಿನ್ನೆಲೆ: ಮೈಸೂರು ಜೈಲು ಮೇಲೆ ಪೊಲೀಸರ ದಿಢೀರ್ ದಾಳಿ ಖೈದಿಗಳ ಬಳಿ 1900 ರೂ. ನಗದು ಪತ್ತೆ
ಮೈಸೂರು

ಚುನಾವಣೆ ಹಿನ್ನೆಲೆ: ಮೈಸೂರು ಜೈಲು ಮೇಲೆ ಪೊಲೀಸರ ದಿಢೀರ್ ದಾಳಿ ಖೈದಿಗಳ ಬಳಿ 1900 ರೂ. ನಗದು ಪತ್ತೆ

April 16, 2019

ಮೈಸೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮೀಷ್ನರ್ ಕೆ.ಟಿ. ಬಾಲಕೃಷ್ಣ, ಡಿಸಿಪಿ ಎಂ. ಮುತ್ತುರಾಜ್ ನೇತೃತ್ವದಲ್ಲಿ ಇಂದು ಮೈಸೂರಿನ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ, ಪರಿಶೀಲಿಸಿದರು.

ಜೈಲುವಾಸಿಗಳು ಹಾಗೂ ಬ್ಯಾರಕ್‍ಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ 1,900 ರೂ. ನಗದು ಪತ್ತೆಯಾಗಿದ್ದು, ಆ ಸಂಬಂಧ ತೀವ್ರ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈಲಿನಲ್ಲಿರುವ ರೌಡಿಗಳು, ಸಮಾಜಘಾತುಕ ವ್ಯಕ್ತಿಗಳು ಕಾರಾಗೃಹದಿಂದಲೇ ಮೊಬೈಲ್ ಫೋನ್ ಮೂಲಕ ಮತದಾರರ ಮೇಲೆ ಪ್ರಭಾವ ಸಾಧ್ಯತೆ ಇರುವುದರಿಂದ, ಬಂಧಿಗಳು ಅಕ್ರಮವಾಗಿ ಮಾದಕ ವಸ್ತುಗಳು ಹಾಗೂ ಆಯುಧಗಳನ್ನು ಹೊಂದಿರುವ ಬಗ್ಗೆ ಸಂಶಯವಿದ್ದ ಕಾರಣ ಪೊಲೀಸರು ದಾಳಿ ನಡೆಸಿ ಪರಿಶೀಲನೆ ಮಾಡಿದರು.

Translate »