Tag: Mysuru

ಅಹಿಂದವನ್ನು ಕಡೆಗಣಿಸಿದ ಬಿಜೆಪಿಗೆ ಮತ ಹಾಕದಿರುವಂತೆ ಹಿಂದುಳಿದ ಜಾತಿಗಳ ಒಕ್ಕೂಟದ ಮನವಿ
ಮೈಸೂರು

ಅಹಿಂದವನ್ನು ಕಡೆಗಣಿಸಿದ ಬಿಜೆಪಿಗೆ ಮತ ಹಾಕದಿರುವಂತೆ ಹಿಂದುಳಿದ ಜಾತಿಗಳ ಒಕ್ಕೂಟದ ಮನವಿ

April 14, 2019

ಮೈಸೂರು: ಕಳೆದ ಐದು ವರ್ಷಗಳ ಆಡಳಿತ ಅವಧಿಯಲ್ಲಿ ಹಿಂದುಳಿದವರು, ಅಲ್ಪಸಂಖ್ಯಾ ತರು, ದಲಿತರನ್ನು ಕಡೆಗಣಿಸಿ, ಕೇವಲ ಮೇಲ್ವರ್ಗ ದವರಿಗೆ ಮಣೆ ಹಾಕಿರುವ ಬಿಜೆಪಿಗೆ ಮತ ನೀಡದಿರುವಂತೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಮನವಿ ಮಾಡಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯದ ಯಾವೊಂದು ಲೋಕಸಭಾ ಕ್ಷೇತ್ರದಲ್ಲೂ ಹಿಂದುಳಿದ ವರ್ಗದ ಒಬ್ಬರಿಗೂ ಅವಕಾಶ ನೀಡಿಲ್ಲ. ಯಾವುದೇ ಆಶ್ವಾಸನೆಗಳನ್ನೂ ಈಡೇರಿಸಿಲ್ಲ. ಅಲ್ಲದೆ ಮೇಲ್ವರ್ಗದವರಿಗೆ ಶೇ.10 ಮೀಸಲಾತಿ ಘೋಷಿಸಿ ಹಿಂದುಳಿದ ವರ್ಗಗಳನ್ನು ವಂಚಿಸಿದೆ….

ಚಾಮುಂಡೇಶ್ವರಿಯಲ್ಲಿ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಬಿರುಸಿನ ಪ್ರಚಾರ
ಮೈಸೂರು

ಚಾಮುಂಡೇಶ್ವರಿಯಲ್ಲಿ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಬಿರುಸಿನ ಪ್ರಚಾರ

April 14, 2019

ಮೈಸೂರು: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಶನಿವಾರ ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮತ ಯಾಚಿಸಿದರು. ಜೆಡಿಎಸ್ ಭದ್ರಕೋಟೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಪ್ರತಿನಿಧಿಸುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದ ಬೋಗಾದಿ, ದಾಸನಕೊಪ್ಪಲು, ಮರಟಿಕ್ಯಾತನಹಳ್ಳಿ, ಗಣಗರಹುಂಡಿ, ಸಾಹುಕಾರ್ ಹುಂಡಿ, ಬಸವನಪುರ, ಬೆಳವಾಡಿ ಸೇರಿದಂತೆ 18 ಗ್ರಾಮಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರೊಂ ದಿಗೆ ರೋಡ್ ಶೋ ನಡೆಸಿ, ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಮಾತ ನಾಡಿ,…

ಪೊಲೀಸ್ ವಾಹನ, ಆಂಬುಲೆನ್ಸ್ ತೀವ್ರ ತಪಾಸಣೆ
ಮೈಸೂರು

ಪೊಲೀಸ್ ವಾಹನ, ಆಂಬುಲೆನ್ಸ್ ತೀವ್ರ ತಪಾಸಣೆ

April 14, 2019

ಮೈಸೂರು: ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನಕ್ಕಾಗಿ ಭಾರತ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮ ವಹಿಸಿದೆ. ಚುನಾವಣಾ ದಿನ ಸಮೀಪಿಸು ತ್ತಿರುವಂತೆಯೇ ಹೈವೋಲ್ಟೇಜ್ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಮುಖ್ಯಮಂತ್ರಿ ಪುತ್ರ ಮತ್ತು ಪಕ್ಷೇತರ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಿ ಬೆಂಗಳೂರು, ಮೈಸೂರು, ನಾಗಮಂಗಲ ಕಡೆಯಿಂದ ಸಂಪರ್ಕ ಕಲ್ಪಿಸುವ ಎಲ್ಲಾ ಹೆದ್ದಾರಿಗಳ ಸ್ಟ್ಯಾಟಿಕ್ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಕೆಎಸ್‍ಆರ್‍ಟಿಸಿ ಬಸ್ಸುಗಳು, ವಿವಿಧ ಸರ್ಕಾರಿ ಅಧಿಕಾರಿಗಳ ವಾಹನಗಳು, ರೋಗಿಗಳನ್ನು ಕರೆದೊಯ್ಯುವ…

ರಂಗಾಯಣ: ಚಿಣ್ಣರ ಮೇಳಕ್ಕೆ ಚಾಲನೆ
ಮೈಸೂರು

ರಂಗಾಯಣ: ಚಿಣ್ಣರ ಮೇಳಕ್ಕೆ ಚಾಲನೆ

April 14, 2019

ಮೈಸೂರು: ರಂಗಾಯಣದ ವನರಂಗದಲ್ಲಿ ಚಿಣ್ಣರಿಗೆ `ರಂಗಸಂಗೀತ ದೀಕ್ಷೆ’ ನೀಡಿ, ಗಿಡಕ್ಕೆ ನೀರು ಹಾಕುವ ಮೂಲಕ ಈ ಬಾರಿಯ ಚಿಣ್ಣರ ಮೇಳ-2019ಕ್ಕೆ ಚಾಲನೆ ನೀಡಲಾಯಿತು. ಇಂದಿನಿಂದ ಮೇ 8 ರವರೆಗೆ ಚಿಣ್ಣರ ಮೇಳ ನಡೆಯಲಿದ್ದು, ಶ್ರೀ ಜಯ ಚಾಮರಾಜೇಂದ್ರ ಒಡೆಯರ್ ರಚಿತ `ಕಾಯೇ ಶ್ರೀ ಗೌರಿ’, ಬಿಎಂಶ್ರೀ ರಚಿತ `ಕರುಣಾಳು ಬಾ ಬೆಳಕೆ’, ಪುರಂದರ ದಾಸರ `ಲೊಳ ಲೊಟ್ಟೆ’ ಗೀತೆ ಹಾಡು ವುದರ ಮೂಲಕ ಹಿರಿಯ ಕಲಾವಿದ ರಾಮಚಂದ್ರ ಹಡಪದ ರಂಗಸಂಗೀತ ದೀಕ್ಷೆ ನೀಡಿದರೆ, ಅಸ್ಸಾಂ ಚಲನಚಿತ್ರ ನಿರ್ದೇಶಕ…

ಚಂದ್ರಯಾನ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿ ಡಾ.ಎಸ್.ಕೆ.ಶಿವಕುಮಾರ್ ನಿಧನ
ಮೈಸೂರು

ಚಂದ್ರಯಾನ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿ ಡಾ.ಎಸ್.ಕೆ.ಶಿವಕುಮಾರ್ ನಿಧನ

April 14, 2019

ಬೆಂಗಳೂರು: ಭಾರತ ಬಾಹ್ಯಾ ಕಾಶ ಸಂಶೋಧನಾ ಸಂಸ್ಥೆ – ಇಸ್ರೋದ ಮಹ ತ್ವದ ಚಂದ್ರಯಾನ ಯೋಜನೆಯಲ್ಲಿ ಭಾಗವಹಿಸಿ ಖ್ಯಾತರಾಗಿದ್ದ ಬಾಹ್ಯಾಕಾಶ ವಿಜ್ಞಾನಿ ಡಾ.ಎಸ್.ಕೆ.ಶಿವಕುಮಾರ್(65) ಶನಿವಾರ ನಿಧನರಾದರು. ಕಳೆದ 10 ದಿನ ಗಳಿಂದ ಅನಾರೋಗ್ಯಕ್ಕೀಡಾಗಿ ಬೆಂಗಳೂ ರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದ ಶಿವಕುಮಾರ್ ಚಿಕಿತ್ಸೆ ಫಲಕಾರಿಯಾ ಗದೆ ಅಸುನೀಗಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷರಾಗಿದ್ದ ಶಿವಕುಮಾರ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಮೈಸೂರು ಮೂಲದ ಶಿವಕುಮಾರ್ ಚಂದ್ರಯಾನ ಯೋಜನೆಯಲ್ಲಿ ಚಂದ್ರ ಯಾನ-1ಗೆ…

ಮೈಸೂರಿನೆಲ್ಲೆಡೆ ರಾಮನಾಮ ಸ್ಮರಣೆ
ಮೈಸೂರು

ಮೈಸೂರಿನೆಲ್ಲೆಡೆ ರಾಮನಾಮ ಸ್ಮರಣೆ

April 14, 2019

ಮೈಸೂರು: `ಶ್ರೀ ರಾಮ ನವ ಮಿಯ ದಿವಸ ರಾವi ನಾಮಾಮೃತವೇ ಪಾನಕ’ ಎಂಬ ಕವಿ ಗೋಪಾಲಕೃಷ್ಣ ಅಡಿಗರ ಪದ್ಯದ ಸಾಲುಗಳನ್ನು ನೆನಪಿಸುವಂತೆ ಮೈಸೂರಿನಲ್ಲಿ ಶನಿವಾರ ರಾಮನವಮಿ ಸಂಭ್ರಮ ಕಳೆಕಟ್ಟಿತ್ತು. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ನಡೆಯುವ ಶ್ರೀರಾಮನವಮಿ ಅಂಗ ವಾಗಿ ಬೆಳಿಗ್ಗೆಯಿಂದಲೇ ಶ್ರೀರಾಮ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳ ಜೊತೆಗೆ ಸಂಗೀತೋತ್ಸವ, ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಅಲ್ಲಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾ ಯಿತು. ಅರಮನೆ ಕೋಟೆ ಉತ್ತರ ಬಾಗಿಲು ಶ್ರೀರಾಮ…

ಆಟೋಲೀವ್ ಖಾಸಗಿ ಕಂಪನಿಯ ನೌಕರರಿಗೆ ನೈತಿಕ ಮತದಾನ ಜಾಗೃತಿ
ಮೈಸೂರು

ಆಟೋಲೀವ್ ಖಾಸಗಿ ಕಂಪನಿಯ ನೌಕರರಿಗೆ ನೈತಿಕ ಮತದಾನ ಜಾಗೃತಿ

April 14, 2019

ಮೈಸೂರು: ಏಪ್ರಿಲ್ 18 ರಂದು ನಡೆಯಲಿರುವ ಲೋಕಸಭಾ ಚುನಾ ವಣೆಯಲ್ಲಿ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ನೈತಿಕ ಚುನಾ ವಣೆಗೆ ಬೆಂಬಲಿಸಿ ಮತದಾನ ಮಾಡು ವಂತೆ ಕಡಕೊಳ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿರುವ ಆಟೋಲೀವ್ ಖಾಸಗಿ ಕಂಪನಿಯ ನೌಕರರಿಗೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕೃಷ್ಣ ತಿಳಿಸಿದರು. ಮೈಸೂರು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಕಡಕೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಟೋ ಲೀವ್ ಖಾಸಗಿ ಕಂಪನಿಯ ಸುಮಾರು 200ಕ್ಕೂ ಹೆಚ್ಚು ನೌಕರರಿಗೆ ಚುನಾವಣಾ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಇವಿಎಂ…

ವಿವಿಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಜೆಎಸ್‍ಎಸ್ ಸಂಸ್ಥೆಗೆ 34ನೇ ಸ್ಥಾನ
ಮೈಸೂರು

ವಿವಿಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಜೆಎಸ್‍ಎಸ್ ಸಂಸ್ಥೆಗೆ 34ನೇ ಸ್ಥಾನ

April 14, 2019

ಮೈಸೂರು: ನ್ಯಾಷನಲ್ ಇನ್ಸ್‍ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ ವರ್ಕ್ (ಎನ್‍ಐಆರ್‍ಎಫ್) 2019ನೇ ಸಾಲಿಗೆ ನಡೆಸಿದ ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ದೇಶದ ಒಟ್ಟು 1479 ವಿಶ್ವ ವಿದ್ಯಾ ನಿಲಯಗಳ ಪೈಕಿ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ 34ನೇ ಸ್ಥಾನ ಗಳಿಸಿದೆ. ಭಾರತ ಸರ್ಕಾರದ ಮಾನವ ಸಂಪ ನ್ಮೂಲ ಅಭಿವೃದ್ಧಿ ಸಚಿವಾಲಯದ (ಎಂಹೆಚ್ ಆರ್‍ಡಿ) ಎನ್‍ಐಆರ್‍ಎಫ್‍ನ 2018ನೇ ರ್ಯಾಂಕಿಂಗ್ ಪಟ್ಟಿಯಲ್ಲಿ 37ನೇ ಸ್ಥಾನ ಪಡೆ ದಿದ್ದ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಜೆಎಸ್‍ಎಸ್ ಅಕಾಡೆಮಿ) ಈ…

ವಿಶ್ವ ಭೂ ದಿನ ಅರ್ಥಪೂರ್ಣ ಆಚರಣೆಗೆ ನಿರ್ಧಾರ
ಮೈಸೂರು

ವಿಶ್ವ ಭೂ ದಿನ ಅರ್ಥಪೂರ್ಣ ಆಚರಣೆಗೆ ನಿರ್ಧಾರ

April 14, 2019

ಹಾಸನ: ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ನಡೆದ ವಿಶ್ವ ಭೂ ದಿನ ಆಚರಣೆಯ ಪೂರ್ವ ಭಾವಿ ಸಭೆಯಲ್ಲಿ ಜಿಲ್ಲೆಯಾದ್ಯಂತ ಏ. 22ರಂದು ವಿಶ್ವ ಭೂ ದಿನವನ್ನು ಅರ್ಥ ಪೂರ್ಣ ಆಚರಿಸಲು ನಿರ್ಧರಿಸಲಾಯಿತು. ಅಂದು ಭೂಮಿ, ಪರಿಸರ, ನೀರಿನ ಮಹತ್ವ ಗಳನ್ನು ಸಾರುವಂತಹ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾ ಯಿತು. ಅದೇ ರೀತಿ ಖಾಸಗಿ ವಾಹನ ಗಳನ್ನು ಬಳಸದೆ ಪರಿಸರಕ್ಕೆ ವಿಶೇಷ ಕೊಡುಗೆ ನೀಡುವ ರಚನಾತ್ಮಕ ಪ್ರಯಾ ಣಕ್ಕೆ…

ಬಸ್‍ಗೆ ಲಾರಿ ಡಿಕ್ಕಿ
ಮೈಸೂರು

ಬಸ್‍ಗೆ ಲಾರಿ ಡಿಕ್ಕಿ

April 14, 2019

ಮೈಸೂರು: ಕೆಎಸ್‍ಆರ್‍ಟಿಸಿ ಬಸ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್ ಜಖಂಗೊಂಡಿರುವ ಘಟನೆ ಬನ್ನೂರು ರಿಂಗ್ ರಸ್ತೆಯ ದೇವೇಗೌಡ ವೃತ್ತದಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಮೈಸೂರಿನಿಂದ ಮಳವಳ್ಳಿಗೆ ಹೋಗುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಬನ್ನೂರು ರಿಂಗ್ ರಸ್ತೆ ದೇವೇಗೌಡ ವೃತ್ತದ ಬಳಿ ಕೊಲಂ ಬಿಯಾ ಏಷಿಯಾ ಆಸ್ಪತ್ರೆ ಕಡೆಯಿಂದ ಬಂದ ಕಂಟೇನರ್ ಲಾರಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಹಾನಿಯಾಗಿಲ್ಲ. ಬಸ್‍ನ ಹಿಂಭಾಗ ಜಖಂಗೊಂಡಿದೆ. ಈ ಸಂಬಂಧ ಸಿದ್ದಾರ್ಥನಗರ ಸಂಚಾರ ಠಾಣೆಯಲ್ಲಿ ದೂರು ನೀಡಿದ್ದಾರೆ.

1 24 25 26 27 28 194
Translate »