ವಿಶ್ವ ಭೂ ದಿನ ಅರ್ಥಪೂರ್ಣ ಆಚರಣೆಗೆ ನಿರ್ಧಾರ
ಮೈಸೂರು

ವಿಶ್ವ ಭೂ ದಿನ ಅರ್ಥಪೂರ್ಣ ಆಚರಣೆಗೆ ನಿರ್ಧಾರ

April 14, 2019

ಹಾಸನ: ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ನಡೆದ ವಿಶ್ವ ಭೂ ದಿನ ಆಚರಣೆಯ ಪೂರ್ವ ಭಾವಿ ಸಭೆಯಲ್ಲಿ ಜಿಲ್ಲೆಯಾದ್ಯಂತ ಏ. 22ರಂದು ವಿಶ್ವ ಭೂ ದಿನವನ್ನು ಅರ್ಥ ಪೂರ್ಣ ಆಚರಿಸಲು ನಿರ್ಧರಿಸಲಾಯಿತು.

ಅಂದು ಭೂಮಿ, ಪರಿಸರ, ನೀರಿನ ಮಹತ್ವ ಗಳನ್ನು ಸಾರುವಂತಹ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾ ಯಿತು. ಅದೇ ರೀತಿ ಖಾಸಗಿ ವಾಹನ ಗಳನ್ನು ಬಳಸದೆ ಪರಿಸರಕ್ಕೆ ವಿಶೇಷ ಕೊಡುಗೆ ನೀಡುವ ರಚನಾತ್ಮಕ ಪ್ರಯಾ ಣಕ್ಕೆ ಸಹಕಾರ ನೀಡಬೇಕು ಎಂದು ಕೋರಲು ನಿರ್ಧರಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯ ಪ್ರಕಾಶ್ ಅವರ ವಿಶೇಷ ಕಾಳಜಿಯಿಂದ ನಡೆದ ಈ ಸಭೆಯಲ್ಲಿ ಹಸಿರು ಭೂಮಿ ಪ್ರತಿಷ್ಠಾಪನ ಪ್ರತಿನಿಧಿಗಳು-ಪದಾಧಿಕಾರಿ ಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮು ಖರು ಹಾಜರಿದ್ದು ವಿಶ್ವ ಭೂ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿ ನಲ್ಲಿ ಹಲವು ಸಲಹೆಗಳನ್ನು ನೀಡಿ ಮನವಿ ಗಳನ್ನು ಮಾಡಿದರು.

ಇವುಗಳನ್ನು ಆಲಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಪರಿಸರ ಸಂರಕ್ಷಣೆಗೆ ಈ ಕಾರ್ಯ ಅತ್ಯಂತ ತುರ್ತು ಅಗತ್ಯ ಎಂಬುದನ್ನು ಎಲ್ಲರೂ ಮನ ಗಂಡು ತಮ್ಮ ಜವಾಬ್ದಾರಿಗಳನ್ನು ಪ್ರದ ರ್ಶಿಸಬೇಕಿದ್ದು, ಇದೊಂದು ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದರು.

ಸಾರ್ವಜನಿಕ ಸಹಭಾಗಿತ್ವ ಮತ್ತು ದೈನಂದಿನ ಜೀವನದಲ್ಲಿ ಸಕಾರಾತ್ಮಕ ಕ್ರಮಗಳ ಅಳವಡಿಕೆಯಿಂದ ಮಾತ್ರ ಪರಿ ಸರದ ಮಾಲಿನ್ಯ ಹಾನಿ ನಿಯಂತ್ರಣ ಮಾಡ ಬಹುದು. ಪ್ಲಾಸಿಕ್ ಮಾರಾಟ ನಿಷೇಧದ ಜೊತೆಯಲ್ಲಿ ಬಳಕೆಯೂ ಸಂಪೂರ್ಣ ನಿಲ್ಲಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯ ಪ್ರಕಾಶ್ ಮಾತನಾಡಿ, ಚುನಾವಣಾ ಕಾರ್ಯ ಒತ್ತಡದ ನಡುವೆಯೂ ಪರಿಸರದ ಮೇಲೆ ವಿಶೇಷ ಕಾಳಜಿಯಿಂದಾಗಿ ಸಭೆ ಆಯೋ ಜಿಸಲಾಗಿದೆ. ಎಲ್ಲಾ ಸಂಘ ಸಂಸ್ಥೆಗಳ ಸಹ ಕಾರ ಪಡೆದು ಪರಿಸರ ಮಾಲಿನ್ಯ ನಿಯಂ ತ್ರಣ, ಜಲ ಸಂರಕ್ಷಣೆ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಜಿಲ್ಲೆಯ ಕೆರೆಗಳ ಪುನಶ್ಚೇತನ ಹಾಗೂ ವೈಯಕ್ತಿಕ ಸ್ವಚ್ಛತೆಗಳ, ಸಮುದಾಯಗಳ ಸ್ವಚ್ಛತೆಗಳ ಅರಿವು ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮುಂದಿನ ದಿನ ಗಳಲ್ಲಿ ಹಮ್ಮಿಕೊಳ್ಳಬೇಕಿದೆ. ಪ್ರತಿಯೊಬ್ಬ ನಾಗರಿಕನಿಗೆ ಈ ಬಗ್ಗೆ ಜಾಗೃತಿ ಮೂಡಿಸ ಬೇಕಿದೆ ಎಂದರು.

ಹಸಿರು ಭೂಮಿ ಪ್ರತಿಷ್ಠಾನದ ಪ್ರತಿ ನಿಧಿಗಳಾದ ಆರ್.ಪಿ.ವೆಂಕಟೇಶ್‍ಮೂರ್ತಿ, ಎಸ್.ಪಿ.ರಾಜೀವ್‍ಗೌಡ, ಎಸ್.ಎಸ್. ಪಾಷ, ಮುದ್ದೇಗೌಡ, ರೂಪಹಾಸನ್, ವಕೀಲರ ಸಂಘದ ಅಧ್ಯಕ್ಷ ಜೆ.ಪಿ.ಶಂಕರ್, ಅಹಮದ್ ಹಗರೆ, ಡಾ.ಭಾರತಿರಾಜ್ ಶೇಖರ್, ಸ್ವತಂತ್ರ ಹೋರಾಟಗಾರರಾದ ಹೆಚ್.ಎಂ.ಶಿವಣ್ಣ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಏ.22 ರಂದು ಎಲರೂ ತಮ್ಮ ಖಾಸಗಿ ವಾಹನಗಳಿಗೆ ರಜೆ ನೀಡಿ ಸಾರ್ವಜನಿಕ ವಾಹನಗಳನ್ನೇ ಬಳಸಬೇಕು. ಸರ್ಕಾರಿ ವಾಹನಗಳನ್ನು ಮಿತವಾಗಿ ಬಳಸಬೇಕು. ಪ್ಲಾಸ್ಟಿಕ್ ಸಂಪೂರ್ಣ ನಿಷೇಧವಾಗಬೇಕು. ಕೆರೆಗಳ ಪುನಶ್ಚೇತನಕ್ಕೆ ಪರಿಣಾಮಕಾರಿ ಪ್ರಯತ್ನಗಳಾಗಬೇಕು. ಏ.22ರಂದು ವಿಶ್ವ ಭೂ ದಿನವನ್ನು ಹೆಚ್ಚು ಜಾಗೃತಿ ಮೂಡಿ ಸುವ ಸ್ವರೂಪದಲ್ಲಿ ಆಯೋಜಿಸಬೇಕು ಎಂದು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮನವಿ ಮಾಡಿದ್ದಾರೆ.

ವಿಶ್ವ ಭೂ ದಿನಾಚರಣೆ ದಿನದಂದು ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಪಾಲ್ಗೊಳ್ಳುವಂತಾಗ ಬೇಕು. ಸರ್ಕಾರ ಹಾಗೂ ಸಂಘ ಸಂಸ್ಥೆ ಗಳ ಸಹಯೋಗದೊಂದಿಗೆ ನಿರಂತರ ಚಟುವಟಿಕೆಗಳು ಅಭಿಯಾನದ ಸ್ವ ರೂಪದಲ್ಲಿ ನಡೆಯಬೇಕು ಎಂದು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕೋರಿದರು.

Translate »