ಬಸ್‍ಗೆ ಲಾರಿ ಡಿಕ್ಕಿ
ಮೈಸೂರು

ಬಸ್‍ಗೆ ಲಾರಿ ಡಿಕ್ಕಿ

April 14, 2019

ಮೈಸೂರು: ಕೆಎಸ್‍ಆರ್‍ಟಿಸಿ ಬಸ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್ ಜಖಂಗೊಂಡಿರುವ ಘಟನೆ ಬನ್ನೂರು ರಿಂಗ್ ರಸ್ತೆಯ ದೇವೇಗೌಡ ವೃತ್ತದಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಮೈಸೂರಿನಿಂದ ಮಳವಳ್ಳಿಗೆ ಹೋಗುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಬನ್ನೂರು ರಿಂಗ್ ರಸ್ತೆ ದೇವೇಗೌಡ ವೃತ್ತದ ಬಳಿ ಕೊಲಂ ಬಿಯಾ ಏಷಿಯಾ ಆಸ್ಪತ್ರೆ ಕಡೆಯಿಂದ ಬಂದ ಕಂಟೇನರ್ ಲಾರಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಹಾನಿಯಾಗಿಲ್ಲ. ಬಸ್‍ನ ಹಿಂಭಾಗ ಜಖಂಗೊಂಡಿದೆ. ಈ ಸಂಬಂಧ ಸಿದ್ದಾರ್ಥನಗರ ಸಂಚಾರ ಠಾಣೆಯಲ್ಲಿ ದೂರು ನೀಡಿದ್ದಾರೆ.

Translate »