ಮೈಸೂರು: ನನ್ನ ನಾಮಪತ್ರ ಅಪೂರ್ಣ ಮತ್ತು ದೋಷ ಪೂರಿತ ಎಂದು ಕೆಲವರು ಅನಗತ್ಯ ಗೊಂದಲ ಸೃಷ್ಟಿಸಿದ್ದರು ಎಂದು ಮೈಸೂರು-ಕೊಡಗು ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಇಂದು ಮಧ್ಯಾಹ್ನ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ನಾಮಪತ್ರಗಳಲ್ಲಿ ಸಣ್ಣಪುಟ್ಟ ಕ್ಲರಿಕಲ್ ಮಿಸ್ಟೇಕ್ ಇದೆ ಎಂದು ತಿಳಿಸಿದ ಕಾರಣ ನಾನು ಚುನಾವಣಾ ಧಿಕಾರಿ ಬಳಿ ಬಂದು ಅಗತ್ಯ ಮಾಹಿತಿ ನೀಡಿದ್ದೇನೆ ಎಂದರು. ಅವುಗಳು ಸಣ್ಣಪುಟ್ಟ ಕ್ಲರಿಕಲ್ ಮಿಸ್ಟೇಕ್‍ಗಳೇ ಹೊರತು, ನಾಮಪತ್ರ ತಿರಸ್ಕರಿಸುವಷ್ಟು…
ದಕ್ಷಿಣ ಭಾರತದಲ್ಲೇ ಉದ್ಯಮಶೀಲತೆಗೆ ಮೈಸೂರು ಅತ್ಯುತ್ತಮ ನಗರ
March 28, 2019ಮೈಸೂರು: ದಕ್ಷಿಣ ಭಾರತದಲ್ಲಿ ಉದ್ಯಮಶೀಲತೆಗೆ ಮೈಸೂರು ಅತ್ಯುತ್ತಮ ನಗರ ಎಂದು ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆ ಯರ್ ಅಭಿಪ್ರಾಯಪಟ್ಟರು. ನಗರದ ಖಾಸಗಿ ಹೋಟೆಲ್‍ನಲ್ಲಿ ಐಎಂಐಕೆ ಬುಧವಾರ ಆಯೋಜಿಸಿದ್ದ `ನಾಯಕತ್ವ 4.0’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ದಕ್ಷಿಣ ಭಾರತದಲ್ಲಿ ಉದ್ಯಮ ಶೀಲತೆಗೆ ಅತ್ಯುತ್ತಮ ನಗರ. ಈಗಾಗಲೇ ಮೈಸೂರಿನ ಹೆಸರಿನಲ್ಲೇ ಸಾಕಷ್ಟು ಸಂಸ್ಥೆ ಗಳು, ಉದ್ಯಮಗಳು ಕಾರ್ಯನಿರ್ವ ಹಿಸುತ್ತಿವೆ. ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸ್ಟೀಲ್, ಮೈಸೂರು ಸಿಲ್ಕ್, ಮೈಸೂರು ಶುಗರ್ ಹೀಗೆ ವಿವಿಧ ಉದ್ಯಮಗಳು…
ಪ್ರಶಸ್ತಿ ಪುರಸ್ಕøತ ಪ್ರೊ.ಸರ್ವಮಂಗಳ, ಮೈಮ್ ರಮೇಶ್‍ಗೆ ಸನ್ಮಾನ
March 28, 2019ಮೈಸೂರು: ವಿಶ್ವ ರಂಗಭೂಮಿ ದಿನದ ಅಂಗವಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರೊ.ಚ. ಸರ್ವಮಂಗಳ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಹಿರಿಯ ಕಲಾವಿದ ಮೈಮ್ ರಮೇಶ್ ಅವರನ್ನು ಬುಧವಾರ ಸನ್ಮಾನಿಸಲಾಯಿತು. ಮೈಸೂರು ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ವತಿಯಿಂದ ಆಯೋಜಿಸಿದ್ದ ವಿಶ್ವರಂಗ ಭೂಮಿ ದಿನಾಚರಣೆ ಅಂಗವಾಗಿ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು. ಪ್ರೊ.ಚ.ಸರ್ವಮಂಗಳ ಮಾತನಾಡಿ, ನನಗೆ ಸಮಾಜದಲ್ಲಿ ಮುಕ್ತ ಮನಸಿನಿಂದ ಮಾತನಾಡುವುದನ್ನು ರಂಗಭೂಮಿ ಕಲಿಸಿ ಕೊಟ್ಟಿದೆ ಹಾಗೂ ನನ್ನ…
ರಂಗಭೂಮಿಯತ್ತ ಐಟಿ, ಬಿಟಿ ಉದ್ಯೋಗಿಗಳು ಆಕರ್ಷಿತ
March 28, 2019ಮೈಸೂರು: ಇತ್ತೀಚೆಗೆ ಐಟಿ, ಬಿಟಿಯಲ್ಲಿ ಒಳ್ಳೆಯ ಉದ್ಯೋಗದಲ್ಲಿರುವವರೂ ಕೂಡ ರಂಗ ಭೂಮಿಯತ್ತ ಮುಖ ಮಾಡುತ್ತಿರುವುದು ಹೆಮ್ಮೆ ಹಾಗೂ ಸಂತಸದ ವಿಷಯ ಎಂದು ಹಿರಿಯ ರಂಗಕರ್ಮಿ ಶ್ರೀಪಾದ ಭಟ್ ಇಂದಿಲ್ಲಿ ಹೇಳಿದರು. ಮೈಸೂರಿನ ರಂಗಾಯಣದ ಭೂಮಿ ಗೀತದಲ್ಲಿ ಬುಧವಾರ ವಿಶ್ವ ರಂಗಭೂಮಿ ದಿನಾಚರಣೆ ಮತ್ತು ಭಾರತೀಯ ರಂಗ ಶಿಕ್ಷಣ ಕೇಂದ್ರದ ವಾರ್ಷಿಕ ನಾಟಕೋತ್ಸವ ದಲ್ಲಿ ಪಾಲ್ಗೊಂಡು ಅವರು ಮಾತನಾಡಿ ದರು. ಯಾವುದೇ ಒಬ್ಬ ವ್ಯಕ್ತಿ ನೋವಿನಲ್ಲಿ ದ್ದಾಗ ಆತನ ಜೊತೆಗೆ ನಿಂತರೆ ಆತ ನಮಗೆ ಬಂಧುವಾಗಿ ಬಿಡುತ್ತಾನೆ. ನೋವು…
ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವುದು ಅವಶ್ಯ
March 28, 2019ಮೈಸೂರು: ಬೆಳೆ ಯುತ್ತಿರುವ ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದು ಕೊಳ್ಳುವುದು ಅತ್ಯಗತ್ಯ ಎಂದು ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್.ಆರ್.ನಿರಂಜನ ಅಭಿಪ್ರಾಯಪಟ್ಟರು. ಮೈಸೂರಿನ ಯುವರಾಜ ಕಾಲೇಜಿನ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂ ಡಿದ್ದ ಕಾಲೇಜಿನ 2018-19ನೇ ಸಾಲಿನ ಜ್ಞಾನವಾಹಿನಿ ಪಠ್ಯೇತರ ಚಟುವಟಿಕೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕ್ರೀಡಾ ದಿನಾಚರಣೆ ಸಮಾರೋಪ ಸಮಾ ರಂಭದಲ್ಲಿ ಅವರು ಮಾತನಾಡಿದರು. ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಇಂದು ಗುಣಮಟ್ಟದ ಶಿಕ್ಷಣ ನೀಡಬೇಕೆಂಬುದಕ್ಕೆ ಒತ್ತು ನೀಡಲಾಗುತ್ತಿದೆ. ಪ್ರಸ್ತುತ…
ಸಮುದಾಯ ಭಾಷೆಗಳ ಪುನರುಜ್ಜೀವನಕ್ಕೆ ಒತ್ತು ನೀಡಿ
March 28, 2019ಮೈಸೂರು: ಸಮುದಾಯ ಭಾಷೆಗಳ ಪುನರುಜ್ಜೀವನಗೊಳಿಸುವತ್ತ ಸಂಶೋಧನಾ ವಿದ್ಯಾರ್ಥಿಗಳು ದೃಷ್ಟಿ ಹರಿಸಬೇಕು ಎಂದು ನವದೆಹಲಿ ಜೆಎನ್‍ಯುನ ಪ್ರಾಧ್ಯಾಪಕ ಪೆÇ್ರ.ಪ್ರಮೋದ್‍ಕುಮಾರ್ ಪಾಂಡೆ ಸಲಹೆ ನೀಡಿದರು. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ಸಭಾಂ ಗಣದಲ್ಲಿ ಬುಧವಾರ `ಭಾಷೆಯ ಪುನರುಜ್ಜೀವನದ ಬಗ್ಗೆ ಸಮುದಾಯಗಳ ಜತೆ ಕೆಲಸ ನಿರ್ವಹಣೆ’ ಕುರಿತ ಐದು ದಿನಗಳ ಕಮ್ಮಟಕ್ಕೆ ಚಾಲನೆ ನೀಡಿ ಮಾತನಾಡಿ ದರು. ಪ್ರತಿಯೊಬ್ಬರಿಗೂ ಭಾಷೆ ಮುಖ್ಯ. ಪ್ರತಿಯೊಂದು ಸಮುದಾಯಕ್ಕೂ ಅವರದ್ದೇ ಆದ ಭಾಷೆ ಇರುತ್ತದೆ. ಆದರೆ ಇಂದು ಕೆಲವು ಸಮುದಾಯಗಳೇ ಮಾಯ ವಾಗುತ್ತಿವೆ. ಸ್ಥಳದಿಂದ ಸ್ಥಳಕ್ಕೆ…
ಇನ್ಫೋಸಿಸ್ ಡಿಸಿಯಲ್ಲಿ ಮಹಿಳಾ ದಿನಾಚರಣೆ
March 28, 2019ಮೈಸೂರು: ಮಹಿಳಾ ದಿನಾಚರಣೆಯ ಅಂಗವಾಗಿ ಇನ್ಫೋಸಿಸ್ ಮಹಿಳಾ ಉದ್ಯೋಗಿಗಳು ನೀಡಿರುವ ಕೊಡುಗೆಗಳನ್ನು ಶ್ಲಾಘಿಸುವ ಉದ್ದೇಶ ದಿಂದ ಇನ್ಫೋಸಿಸ್ ಮೈಸೂರು ಡೆವ ಲಪ್‍ಮೆಂಟ್ (ಡಿಸಿ) ನಾನಾ ಕಾರ್ಯ ಕ್ರಮಗಳನ್ನು ಆಯೋಜಿಸಿತ್ತು. ಇನ್ಫೋಸಿಸ್ ಡೈವರ್ಸಿಟಿ ಆ್ಯಂಡ್ ಇನ್ ಕ್ಲೂಷನ್(ಡಿ ಆ್ಯಂಡ್ ಇ) ತಂಡವು ಯುನೈಟೆಡ್ ನೇಷನ್ಸ್ ಸಂಸ್ಥೆಯ 2019ರ ಘೋಷಣೆಯಾಗಿರುವ ‘ಥಿಂಕ್ ಈಕ್ವಲ್, ಬಿಲ್ಡ್ ಚೇಂಜ್, ಇನ್ನೋವೇಟ್ ಫಾರ್ ಚೇಂಜ್’ ಅನ್ನು ಅಳವಡಿಸಿಕೊಂಡಿದೆ. ಈ ಘೋಷಣೆಯು ಮಹಿಳೆಯೊಬ್ಬರ ಸಾಧನೆಯ ಹಾದಿಯನ್ನು ಬಿಂಬಿಸುವ ಜತೆಗೆ ಅವರ ಯೋಚನೆ ಹಾಗೂ ಸಾಧ್ಯಾಸಾಧ್ಯತೆಗಳನ್ನು ಜಾಗತಿಕ…
ಕಾಳಮ್ಮನಕೊಪ್ಪಲು ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ಎಚ್ಚರಿಕೆ
March 27, 2019ಮನವೊಲಿಸುವಲ್ಲಿ ತಾಲೂಕು ಆಡಳಿತ ವಿಫಲ, ಆಧಿಕಾರಿಗಳೊಂದಿಗೆ ವಾಗ್ವಾದ ಭೇರ್ಯ: ಕೆ.ಆರ್.ನಗರ ತಾಲೂಕು ಗಡಿ ಗ್ರಾಮ ಕಾಳಮ್ಮನಕೊಪ್ಪಲು ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ಹಿನ್ನೆಲೆ ಎಚ್ಚೆತ್ತ ತಾಲೂಕು ಆಡಳಿತ ಗ್ರಾಮಕ್ಕೆ ತೆರಳಿ ಮನವೊಲಿಕೆಗೆ ಯತ್ನಿಸಿ ನಡೆಸಿದ ಗ್ರಾಮಸ್ಥರ ಸಭೆ ವಿಫಲವಾಯಿತಲ್ಲದೆ, ಆಧಿಕಾರಿಗಳೊಂದಿಗೆ ವಾಗ್ವಾದ ಏರ್ಪಟ್ಟಿತು. ಸಾಲಿಗ್ರಾಮ ಸಾಲಿಗ್ರಾಮ ಸಮೀಪವಿರುವ ಕಾಳಮ್ಮನಕೊಪ್ಪಲು ಗ್ರಾಮವು ಹತ್ತಾರು ವರ್ಷದಿಂದ ಮೂಲಸೌರ್ಕಗಳಿಂದ ವಂಚಿತವಾಗಿದ್ದು, ಸರ್ಕಾರ ಕೇವಲ ಭರವಸೆ ನೀಡುತ್ತಿದೆಯೇ ಹೊರತು ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿರುವ…
ಹೊಸಕೋಟೆ ಗ್ರಾಪಂ ಅಧ್ಯಕ್ಷೆ ವಿರುದ್ಧದ ಅವಿಶ್ವಾಸಕ್ಕೆ ಹಿನ್ನಡೆ
March 27, 2019ಚುಂಚನಕಟ್ಟೆ: ಕೆ.ಆರ್.ನಗರ ತಾಲೂಕಿನಲ್ಲಿ ತೀವ್ರ ಕೂತುಹಲಕ್ಕೆ ಕಾರಣವಾಗಿದ್ದ ಹೊಸಕೋಟೆ ಗ್ರಾಪಂ ಅಧ್ಯಕ್ಷೆ ವಿರುದ್ಧ ಇಂದು ಸದಸ್ಯರು ಮಂಡಿಸಬೇಕಿದ್ದ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಗಿದೆ. ಹೊಸಕೋಟೆ ಗ್ರಾಪಂ ಅಧ್ಯಕ್ಷೆ ಮಂಜುಳಾ ನಾಗರಾಜು ವಿರುದ್ಧ 10 ಮಂದಿ ಸದಸ್ಯರು ಅವಿಶ್ವಾಸ ನಿರ್ಣಯ ಪತ್ರಕ್ಕೆ ಸಹಿ ಹಾಕಿ ದಿನಾಂಕ ಹಾಗೂ ಸಭೆ ನಿಗದಿಗೆ ಹುಣಸೂರು ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯಗೆ ಸಲ್ಲಿಸಿದ್ದರು. ಅದರಂತೆ ಇಂದು ಗ್ರಾಪಂ ಸಭೆ ಕರೆಯಲಾಗಿತ್ತು. ಆದರೆ ಸಭೆಯಲ್ಲಿ ಅವಿಶ್ವಾಸ ಮಂಡಿಸಲು ನಿರ್ಧರಿಸಿದ್ದ 10 ಮಂದಿ ಸದಸ್ಯರಲ್ಲಿ ಬಿ.ಎನ್.ಕೃಷ್ಣೇಗೌಡ, ಸುನಂದಾ, ಮಧು, ಸಿದ್ದರಾಮೇಗೌಡ,…
ತಲಕಾಡು ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರ ಸಭೆ
March 27, 2019ವಿ.ಶ್ರೀನಿವಾಸ್ ಪ್ರಸಾದ್ ವಿರುದ್ಧ ಕೈ ಮುಖಂಡರ ಕಿಡಿ ತಿ.ನರಸೀಪುರ: ಪ್ರಸಕ್ತ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿನ ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್‍ರನ್ನು ಸೋಲಿಸಲು ನಾನೇ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದಿರುವ ಮಾಜಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ವಿರುದ್ಧ ಕೈ ಮುಖಂಡರು ಕಿಡಿಕಾರಿದರು. ತಾಲೂಕಿನ ತಲಕಾಡು ಗ್ರಾಮದಲ್ಲಿರುವ ನಾಯಕರ ಸಮುದಾಯ ಭವನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಧ್ರುವನನ್ನು ಸೋಲಿಸುತ್ತೇನೆ ಅಂದಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರ ನಡೆಯನ್ನು ತೀವ್ರವಾಗಿ ಖಂಡಿಸಿದ ಬನ್ನೂರಿನ ಮಾಜಿ…