ರಂಗಭೂಮಿಯತ್ತ ಐಟಿ, ಬಿಟಿ ಉದ್ಯೋಗಿಗಳು ಆಕರ್ಷಿತ
ಮೈಸೂರು

ರಂಗಭೂಮಿಯತ್ತ ಐಟಿ, ಬಿಟಿ ಉದ್ಯೋಗಿಗಳು ಆಕರ್ಷಿತ

March 28, 2019

ಮೈಸೂರು: ಇತ್ತೀಚೆಗೆ ಐಟಿ, ಬಿಟಿಯಲ್ಲಿ ಒಳ್ಳೆಯ ಉದ್ಯೋಗದಲ್ಲಿರುವವರೂ ಕೂಡ ರಂಗ ಭೂಮಿಯತ್ತ ಮುಖ ಮಾಡುತ್ತಿರುವುದು ಹೆಮ್ಮೆ ಹಾಗೂ ಸಂತಸದ ವಿಷಯ ಎಂದು ಹಿರಿಯ ರಂಗಕರ್ಮಿ ಶ್ರೀಪಾದ ಭಟ್ ಇಂದಿಲ್ಲಿ ಹೇಳಿದರು.

ಮೈಸೂರಿನ ರಂಗಾಯಣದ ಭೂಮಿ ಗೀತದಲ್ಲಿ ಬುಧವಾರ ವಿಶ್ವ ರಂಗಭೂಮಿ ದಿನಾಚರಣೆ ಮತ್ತು ಭಾರತೀಯ ರಂಗ ಶಿಕ್ಷಣ ಕೇಂದ್ರದ ವಾರ್ಷಿಕ ನಾಟಕೋತ್ಸವ ದಲ್ಲಿ ಪಾಲ್ಗೊಂಡು ಅವರು ಮಾತನಾಡಿ ದರು. ಯಾವುದೇ ಒಬ್ಬ ವ್ಯಕ್ತಿ ನೋವಿನಲ್ಲಿ ದ್ದಾಗ ಆತನ ಜೊತೆಗೆ ನಿಂತರೆ ಆತ ನಮಗೆ ಬಂಧುವಾಗಿ ಬಿಡುತ್ತಾನೆ. ನೋವು ಅನುಭವಿಸುವವರನ್ನು ಆದರಿಸುವುದನ್ನು ತಿಳಿಸುತ್ತದೆ. ಧಾರಣಾ ಸಾಮಥ್ರ್ಯವನ್ನು ರಂಗ ಶಿಕ್ಷಣ ನೀಡಬೇಕು. ಇಲ್ಲದಿದ್ದರೆ ಕಲಿತರೂ ಅದು ವ್ಯರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ರಂಗಕರ್ಮಿ ಶಶಿಧರ್ ಭಾರಿ ಘಾಟ್ ಮಾತನಾಡಿ, ಪ್ರಸ್ತುತ ರಂಗ ಜಗತ್ತಿ ನಲ್ಲಿ ಸಾಕಷ್ಟು ರಂಗಶಾಲೆಗಳಿವೆ. ನೂರು ವಿದ್ಯಾರ್ಥಿಗಳು ರಂಗಶಿಕ್ಷಣ ಪಡೆದು ಹೊರ ಬರುತ್ತಿದ್ದಾರೆ. ರಂಗಭೂಮಿಯಲ್ಲಿ ಆಸಕ್ತಿ ಇಟ್ಟುಕೊಂಡು ಬರಬೇಕಿತ್ತು. ಶಿಕ್ಷಣ ಇಲಾಖೆಯಲ್ಲಿ ಕೆಲಸ ಕೂಡ ಸಿಗುತ್ತಿತ್ತು. ಆಗ ನನಗೆ ರಂಗಶಿಕ್ಷಣ ಯಾಕೆ ಪಡೆಯು ತ್ತಾರೆಂಬ ಪರಿಕಲ್ಪನೆಯೂ ಇರಲಿಲ್ಲ. ಕ್ರಮೇಣ ಎಲ್ಲವೂ ಅರ್ಥವಾಗುತ್ತಾ ಹೋಯಿತು. ನನ್ನ ಅವಕಾಶವನ್ನು ನಾನು ಹೇಗೆ ಹುಡುಕಿಕೊಳ್ಳುತ್ತೇನೆ ಎನ್ನುವುದು ಮುಖ್ಯವಾಯಿತು ಎಂದು ಹೇಳಿದರು.

ಪೀಳಿಗೆಯಿಂದ ಪೀಳಿಗೆಗೆ ಆಲೋಚನಾ ಕ್ರಮ ಬೇರೆ. ಪ್ರತಿಭೆಗಳ ರೀತಿ, ನೀತಿ ಬೇರೆ. ಒಬ್ಬರಿಗೊಬ್ಬರು ಮಾದರಿಯಾಗ ಬಹುದು, ಆಗದೆಯೂ ಇರಬಹುದು. ಇಲ್ಲಿ ಬದುಕಿನ ಪ್ರಶ್ನೆ ಕೂಡ ಬರುತ್ತದೆ. ರಂಗಭೂಮಿಯಲ್ಲಿಯೇ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ. ರಂಗಭೂಮಿಯನ್ನೇ ನನ್ನ ಜೀವನವಾಗಿ ತೆಗೆದುಕೊಳ್ಳುತ್ತೇನೆ ಎಂದು ಅದನ್ನು ಆಚರಣೆಗೆ ತಂದವರೂ ಇದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಭಾರತೀಯ ರಂಗ ಶಿಕ್ಷಣದ ಮುಖ್ಯಸ್ಥ ಎಸ್. ರಾಮನಾಥ್, ಬೆಂಗಳೂರು ರಂಗ ನಿರ್ದೇ ಶಕ ಚನ್ನಕೇಶವ, ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

Translate »