ಪ್ರಶಸ್ತಿ ಪುರಸ್ಕøತ ಪ್ರೊ.ಸರ್ವಮಂಗಳ, ಮೈಮ್ ರಮೇಶ್‍ಗೆ ಸನ್ಮಾನ
ಮೈಸೂರು

ಪ್ರಶಸ್ತಿ ಪುರಸ್ಕøತ ಪ್ರೊ.ಸರ್ವಮಂಗಳ, ಮೈಮ್ ರಮೇಶ್‍ಗೆ ಸನ್ಮಾನ

March 28, 2019

ಮೈಸೂರು: ವಿಶ್ವ ರಂಗಭೂಮಿ ದಿನದ ಅಂಗವಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರೊ.ಚ. ಸರ್ವಮಂಗಳ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಹಿರಿಯ ಕಲಾವಿದ ಮೈಮ್ ರಮೇಶ್ ಅವರನ್ನು ಬುಧವಾರ ಸನ್ಮಾನಿಸಲಾಯಿತು.

ಮೈಸೂರು ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ವತಿಯಿಂದ ಆಯೋಜಿಸಿದ್ದ ವಿಶ್ವರಂಗ ಭೂಮಿ ದಿನಾಚರಣೆ ಅಂಗವಾಗಿ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು.
ಪ್ರೊ.ಚ.ಸರ್ವಮಂಗಳ ಮಾತನಾಡಿ, ನನಗೆ ಸಮಾಜದಲ್ಲಿ ಮುಕ್ತ ಮನಸಿನಿಂದ ಮಾತನಾಡುವುದನ್ನು ರಂಗಭೂಮಿ ಕಲಿಸಿ ಕೊಟ್ಟಿದೆ ಹಾಗೂ ನನ್ನ ವ್ಯಕ್ತಿತ್ವ ರೂಪಿಸಿತು. ನಾನು ಚಿಕ್ಕ ವಯಸ್ಸಿನಲ್ಲಿ ಕಲಿಕೆಯ ಹಸಿವು ಹೊಂದಿದ್ದೆ. ಅದಕ್ಕೆ ಮನೆಯಲ್ಲಿ ಅಡೆತಡೆಗಳಿದ್ದವು. ಹಾಗಾಗಿ ಟ್ಯೂಷನ್‍ಗೆ ಹೋಗುತ್ತೇನೆಂದು ಮನೆಯ ವರಿಗೆ ಸುಳ್ಳು ಹೇಳಿ ನಾಟಕ ಅಭ್ಯಾಸಕ್ಕೆ ಹೋಗುತ್ತಿದ್ದೆ. ಅದಕ್ಕೆ ನನ್ನ ತಾಯಿ ಮತ್ತು ಅಜ್ಜಿ ಸಹಕಾರಿಯಾಗಿದ್ದರು ಎಂದು ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಂಡರು.

ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ರಂಗಭೂಮಿ, ಸಾಹಿತ್ಯ, ಕಲೆಯಲ್ಲಿ ನಿರಂತರ ಸೃಜನ ಶೀಲತೆ ಇದೆ. ಸರಿಪಡಿಸಲಾಗದ ಸಮಾಜ ವನ್ನು ತಿದ್ದಲು ಸೃಜನಶೀಲ ವ್ಯಕ್ತಿತ್ವದವರು ಎಂದಿಗೂ ಬಿಸಿಯಾಗಿರುತ್ತಾರೆ. ಮೈಸೂರು, ಪುಣೆಯಲ್ಲಿ ರಂಗಭೂಮಿ ಚಟುವಟಿಕೆ ಕ್ರಿಯಾಶೀಲವಾಗಿದೆ. ಹೀಗೆ ಮುಂದು ವರಿಯಲಿ ಎಂದು ಆಶಯ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮೈಮ್‍ರಮೇಶ್, ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳ ವಿರುದ್ಧ ರಂಗಭೂಮಿ ಜನ್ಮ ತಾಳಿದೆ. ಕಳೆದ 45 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ನನ್ನಲ್ಲಿ ಗುರು-ಶಿಷ್ಯ ಸಂಬಂಧ, ಮಾನವೀಯ ಮೌಲ್ಯಗಳು, ಹೋರಾಟದ ಮನೋಭಾವ ಕಲಿಸಿತು ಎಂದರು.

ಈ ವೇಳೆ ಶೀಲಾ ಕುಮಾರಿ ಅವರು ವಿಶ್ವ ರಂಗಭೂಮಿ ಸಂದೇಶ ಓದಿದರು. ವೇದಿಕೆಯಲ್ಲಿ ಅಧ್ಯಕ್ಷ ಎಚ್.ಎಸ್.ಸುರೇಶ್ ಬಾಬು ಇದ್ದರು.

Translate »