ದಕ್ಷಿಣ ಭಾರತದಲ್ಲೇ ಉದ್ಯಮಶೀಲತೆಗೆ ಮೈಸೂರು ಅತ್ಯುತ್ತಮ ನಗರ
ಮೈಸೂರು

ದಕ್ಷಿಣ ಭಾರತದಲ್ಲೇ ಉದ್ಯಮಶೀಲತೆಗೆ ಮೈಸೂರು ಅತ್ಯುತ್ತಮ ನಗರ

March 28, 2019

ಮೈಸೂರು: ದಕ್ಷಿಣ ಭಾರತದಲ್ಲಿ ಉದ್ಯಮಶೀಲತೆಗೆ ಮೈಸೂರು ಅತ್ಯುತ್ತಮ ನಗರ ಎಂದು ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆ ಯರ್ ಅಭಿಪ್ರಾಯಪಟ್ಟರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಐಎಂಐಕೆ ಬುಧವಾರ ಆಯೋಜಿಸಿದ್ದ `ನಾಯಕತ್ವ 4.0’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ದಕ್ಷಿಣ ಭಾರತದಲ್ಲಿ ಉದ್ಯಮ ಶೀಲತೆಗೆ ಅತ್ಯುತ್ತಮ ನಗರ. ಈಗಾಗಲೇ ಮೈಸೂರಿನ ಹೆಸರಿನಲ್ಲೇ ಸಾಕಷ್ಟು ಸಂಸ್ಥೆ ಗಳು, ಉದ್ಯಮಗಳು ಕಾರ್ಯನಿರ್ವ ಹಿಸುತ್ತಿವೆ. ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸ್ಟೀಲ್, ಮೈಸೂರು ಸಿಲ್ಕ್, ಮೈಸೂರು ಶುಗರ್ ಹೀಗೆ ವಿವಿಧ ಉದ್ಯಮಗಳು ಮೈಸೂರನ್ನು ಜಾಗತಿಕ ವಾಗಿ ಗುರುತಿಸುವಂತೆ ಮಾಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಧುನಿಕ ಯುಗದಲ್ಲಿ ಜಾಗತಿಕ ಪ್ರಜೆ ಯಾಗಿ ಯೋಚಿಸಿದರೂ ಮೈಸೂರು ನಮ್ಮಲ್ಲಿ ಒಂದು ಪರಂಪರೆಯನ್ನು ಮೂಡಿಸಿದೆ. ರಾಜವಂಶದ ಜವಾಬ್ದಾರಿ ಹೊತ್ತ ಕಳೆದ 4 ವರ್ಷಗಳಲ್ಲಿ ಈ ಪರಂ ಪರೆಯ ಕುರಿತು ನಾನು ಹೆಚ್ಚು ಹೆಚ್ಚು ತಿಳಿದುಕೊಳ್ಳುವಂತಾಗಿದೆ. ಇಂತಹ ವಿಚಾರ ಗೋಷ್ಠಿ ಹಾಗೂ ಸಮಾರಂಭ ಗಳು ನಮ್ಮಲ್ಲಿ ಹೆಚ್ಚಿನ ನಾಯಕತ್ವ ಗುಣ ಗಳು, ಜವಾಬ್ದಾರಿಗಳನ್ನು ಮೂಡಿಸಲು ಸಹಕಾರಿಯಾಗಬೇಕು ಎಂದು ಹೇಳಿದರು.

ಸಿಐಐ ಮೈಸೂರು ಅಧ್ಯಕ್ಷರಾದ ಭಾಸ್ಕರ್ ಕಳಲೆ ಮಾತನಾಡಿ, ನಾಯಕತ್ವದ ಮೊದಲ ಪಾಠ ಎಂದರೆ, ಯಾರೊ ಬ್ಬರಿಗೂ ಅವರ ಕೆಲಸವನ್ನು ಹೇಳಿಕೊಟ್ಟು ಮಾಡಿಸದೆ, ಅವರ ಪಾಡಿಗೆ ಕೆಲಸ ಮಾಡಲು ಬಿಡಬೇಕು. ಒಬ್ಬ ನಾಯಕನಾದವನು ಬೇರೆಯವರಿಗೆ ಯಾವ ಕೆಲಸ ಮಾಡಬೇ ಕೆಂದು ತಿಳಿಸಬೇಕೇ ಹೊರತು ಹೇಗೆ ಮಾಡಬೇಕೆಂದು ತಿಳಿಸುವುದಲ್ಲ ಎಂದರು.

ಒಬ್ಬ ನಾಯಕನಾದವನು ತಾಂತ್ರಿಕ ವಾಗಿ ಸಮರ್ಥ, ಆಡಳಿತಾತ್ಮಕವಾಗಿ ದಕ್ಷ ಹಾಗೂ ಪರಿಕಲ್ಪನೆಯಲ್ಲಿ ಸ್ಪಷ್ಟವಾಗಿರ ಬೇಕು. ಜತೆಗೆ ಒಂದು ದೃಷ್ಟಿಕೋನವನ್ನು ಹೊಂದಿದ್ದು, ಸಂಸ್ಥೆಯು ತನಗಿಂತ ಉನ್ನತವಾದದ್ದು ಎಂದು ಅರಿತಿರಬೇಕು. ಹಾಗೆಯೇ ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಮತ್ತು ನಿಮಗಿಂತ ಹೆಚ್ಚು ತಿಳಿದ ವರೊಡಗಿನ ಒಡನಾಟ ನಮ್ಮನ್ನು ಉತ್ತಮ ನಾಯಕನನ್ನಾಗಿಸುತ್ತದೆ ಎಂದರು.

ಕೋಜಿಕೋಡ್ ಐಐಎಂ ನಿರ್ದೇಶಕ ಪ್ರೊ.ದೇಬ್‍ಶಿಷ್ ಚಟರ್ಜಿ ನಾಯಕತ್ವ ಕುರಿತು ಮಾತನಾಡಿ, ಇಂದಿನ ಯುಗ ದಲ್ಲಿ ಎಲ್ಲರಿಗೂ ಸುಲಭವಾಗಿ ಮಾಹಿತಿ ಸಿಗುತ್ತದೆ. ಆದರೆ, ಆ ಮಾಹಿತಿಯನ್ನು ನಿಮ್ಮ ಬುದ್ಧಿವಂತಿಕೆಯನ್ನು ಉಪಯೋ ಗಿಸಿ ಎಲ್ಲರಿಗಿಂತ ವಿಭಿನ್ನ ರೀತಿಯಲ್ಲಿ ಉಪಯೋಗಿಸಿ ಯಶಸ್ಸು ಸಾಧಿಸಬೇಕು. ಅಂಥ ಗುಣಗಳನ್ನು ಹೊಂದಿರುವ ನಾಯಕರು ಬೇಕು. ಅಂತಹ ಗುಣ ಇಂದಿನ ನಾಯಕತ್ವದ ಬೇಡಿಕೆಯಾಗಿದೆ ಎಂದು ಹೇಳಿದರು.

Translate »