ಸಮುದಾಯ ಭಾಷೆಗಳ ಪುನರುಜ್ಜೀವನಕ್ಕೆ ಒತ್ತು ನೀಡಿ
ಮೈಸೂರು

ಸಮುದಾಯ ಭಾಷೆಗಳ ಪುನರುಜ್ಜೀವನಕ್ಕೆ ಒತ್ತು ನೀಡಿ

March 28, 2019

ಮೈಸೂರು: ಸಮುದಾಯ ಭಾಷೆಗಳ ಪುನರುಜ್ಜೀವನಗೊಳಿಸುವತ್ತ ಸಂಶೋಧನಾ ವಿದ್ಯಾರ್ಥಿಗಳು ದೃಷ್ಟಿ ಹರಿಸಬೇಕು ಎಂದು ನವದೆಹಲಿ ಜೆಎನ್‍ಯುನ ಪ್ರಾಧ್ಯಾಪಕ ಪೆÇ್ರ.ಪ್ರಮೋದ್‍ಕುಮಾರ್ ಪಾಂಡೆ ಸಲಹೆ ನೀಡಿದರು.

ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ಸಭಾಂ ಗಣದಲ್ಲಿ ಬುಧವಾರ `ಭಾಷೆಯ ಪುನರುಜ್ಜೀವನದ ಬಗ್ಗೆ ಸಮುದಾಯಗಳ ಜತೆ ಕೆಲಸ ನಿರ್ವಹಣೆ’ ಕುರಿತ ಐದು ದಿನಗಳ ಕಮ್ಮಟಕ್ಕೆ ಚಾಲನೆ ನೀಡಿ ಮಾತನಾಡಿ ದರು. ಪ್ರತಿಯೊಬ್ಬರಿಗೂ ಭಾಷೆ ಮುಖ್ಯ. ಪ್ರತಿಯೊಂದು ಸಮುದಾಯಕ್ಕೂ ಅವರದ್ದೇ ಆದ ಭಾಷೆ ಇರುತ್ತದೆ. ಆದರೆ ಇಂದು ಕೆಲವು ಸಮುದಾಯಗಳೇ ಮಾಯ ವಾಗುತ್ತಿವೆ. ಸ್ಥಳದಿಂದ ಸ್ಥಳಕ್ಕೆ ಮನುಷ್ಯನ ಆಚಾರ-ವಿಚಾರ, ಸಂಪ್ರದಾಯಗಳು ಭಿನ್ನವಾಗಿರುತ್ತವೆ. ಅದು ಸಮುದಾಯದಲ್ಲೂ ಕಂಡು ಬರುತ್ತದೆ ಎಂದರು.

ಇಂದು ಬೆಳೆದಿರುವ ಭಾಷಾ ತಂತ್ರಜ್ಞಾನವನ್ನು ಸಮ ರ್ಪಕವಾಗಿ ಬೆಳೆಸಿಕೊಳ್ಳಬೇಕು. ಭಾಷೆಗಳ ಮೇಲೆ ಸಂಶೋ ಧನೆ ನಡೆಸಿದರೆ ಒಳ್ಳೆಯದೇ, ಭಾಷೆಗಳ ಮೇಲೆ ನಡೆಸುತ್ತ ಅದರಲ್ಲಿಯೇ ಸಮುದಾಯವನ್ನೂ ತರುತ್ತಾರೆ. ಸಮು ದಾಯದ ಮೇಲೆ ಸಂಶೋಧನೆ ನಡೆಸುತ್ತಾ ಅವರ ಭಾಷೆಗಳ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಲಂಡನ್ ವಿವಿ ಪೆÇ್ರ.ಪೀಟರ್ ಆಸ್ಟೀನ್, ಸಿಐಐಎಲ್‍ನ ಪೆÇ್ರ.ಉಮಾರಾಣಿ ಪಪ್ಪುಸ್ವಾಮಿ, ಸಂಯೋಜಕ ಸುಜೋಯ್ ಸರ್ಕಾರ್, ನಿರ್ದೇಶಕ ಪೆÇ್ರ.ಡಿ.ಜಿ.ರಾವ್ ಇನ್ನಿತರರು ಉಪಸ್ಥಿತರಿದ್ದರು.

ಮಹಿಳಾ ಸಬಲೀಕರಣದ ಥೀಮ್ ಅನ್ನು ಗಣನೆಯಲ್ಲಿಟ್ಟುಕೊಂಡು, ಸ್ಥಳೀಯ ಮಹಿಳಾ ಉದ್ಯಮಿಗಳು ಸ್ಥಾಪಿಸಿರುವಂಥ ಫ್ಲೀ ಮಾರ್ಕೆಟ್‍ಗೂ ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈ ಸಂಭ್ರಮಾಚರಣೆ ಯಲ್ಲಿ ಇನ್ಫೋಸಿಯನ್ ತಂಡ ಸೇರಿದಂತೆ ವಿವಿಧ ತಂಡಗಳು ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನೀಡಿದವು.

Translate »