ಇನ್ಫೋಸಿಸ್ ಡಿಸಿಯಲ್ಲಿ ಮಹಿಳಾ ದಿನಾಚರಣೆ
ಮೈಸೂರು

ಇನ್ಫೋಸಿಸ್ ಡಿಸಿಯಲ್ಲಿ ಮಹಿಳಾ ದಿನಾಚರಣೆ

March 28, 2019

ಮೈಸೂರು: ಮಹಿಳಾ ದಿನಾಚರಣೆಯ ಅಂಗವಾಗಿ ಇನ್ಫೋಸಿಸ್ ಮಹಿಳಾ ಉದ್ಯೋಗಿಗಳು ನೀಡಿರುವ ಕೊಡುಗೆಗಳನ್ನು ಶ್ಲಾಘಿಸುವ ಉದ್ದೇಶ ದಿಂದ  ಇನ್ಫೋಸಿಸ್ ಮೈಸೂರು ಡೆವ ಲಪ್‍ಮೆಂಟ್ (ಡಿಸಿ) ನಾನಾ ಕಾರ್ಯ ಕ್ರಮಗಳನ್ನು ಆಯೋಜಿಸಿತ್ತು. ಇನ್ಫೋಸಿಸ್ ಡೈವರ್ಸಿಟಿ ಆ್ಯಂಡ್ ಇನ್ ಕ್ಲೂಷನ್(ಡಿ ಆ್ಯಂಡ್ ಇ) ತಂಡವು ಯುನೈಟೆಡ್ ನೇಷನ್ಸ್ ಸಂಸ್ಥೆಯ 2019ರ ಘೋಷಣೆಯಾಗಿರುವ ‘ಥಿಂಕ್ ಈಕ್ವಲ್, ಬಿಲ್ಡ್ ಚೇಂಜ್, ಇನ್ನೋವೇಟ್ ಫಾರ್ ಚೇಂಜ್’ ಅನ್ನು ಅಳವಡಿಸಿಕೊಂಡಿದೆ. ಈ ಘೋಷಣೆಯು ಮಹಿಳೆಯೊಬ್ಬರ ಸಾಧನೆಯ ಹಾದಿಯನ್ನು ಬಿಂಬಿಸುವ ಜತೆಗೆ ಅವರ ಯೋಚನೆ ಹಾಗೂ ಸಾಧ್ಯಾಸಾಧ್ಯತೆಗಳನ್ನು ಜಾಗತಿಕ ಬದಲಾವಣೆಯಲ್ಲಿ ಹೇಗೆ ಪಾತ್ರ ವಹಿಸಿದೆ ಎಂಬುದನ್ನು ಗುರುತಿಸುತ್ತಿದೆ. ಇದರ ಅಂಗವಾಗಿ ಮೈಸೂರು ಡಿಸಿಯು ‘ಭವಿಷ್ಯದ ಸಮಾಜಗಳನ್ನು ರೂಪಿಸಬಹು ದಾದ ನಾವಿನ್ಯಗಳು’ ಎಂಬ ವಿಷಯದ ಕುರಿತು ಹ್ಯಾಕಥಾನ್ ಆಯೋಜಿಸಲಾಗಿತ್ತು. ಈ ಹ್ಯಾಕಥಾನ್‍ನಲ್ಲಿ ಮೈಸೂರು ಡಿಸಿಯ ಸುಮಾರು 24 ತಂಡಗಳು ಭಾಗವಹಿಸಿದ್ದವು. ಅದೇ ರೀತಿ ಡಿ ಐ ತಂಡವು ‘ಥಿಂಕ್ ಈಕ್ವಲ್, ಬಿಲ್ಡ್ ಚೇಂಜ್, ಇನ್ನೋವೇಟ್ ಫಾರ್ ಚೇಂಜ್’ ಎಂಬ ಘೋಷವಾಕ್ಯವನ್ನು ಆಧರಿಸಿ ವಿಚಾರಗೋಷ್ಠಿಯನ್ನು ಆಯೋ ಜಿಸಿತ್ತು. ಇದರಲ್ಲಿ ಪಾಲ್ಗೊಂಡ ಸಂವಾದಿ ಗಳು, ಬದಲಾವಣೆಯಲ್ಲಿ ಮಹಿಳೆಯರ ಪಾತ್ರದ ಕುರಿತು ಸ್ವಯಂ ಅರಿವು ಹೊಂದುವ ಅಗತ್ಯದ ಕುರಿತು ಚರ್ಚೆ ನಡೆಸಿದರು.

Translate »