ಹೊಸಕೋಟೆ ಗ್ರಾಪಂ ಅಧ್ಯಕ್ಷೆ ವಿರುದ್ಧದ ಅವಿಶ್ವಾಸಕ್ಕೆ ಹಿನ್ನಡೆ
ಮೈಸೂರು

ಹೊಸಕೋಟೆ ಗ್ರಾಪಂ ಅಧ್ಯಕ್ಷೆ ವಿರುದ್ಧದ ಅವಿಶ್ವಾಸಕ್ಕೆ ಹಿನ್ನಡೆ

March 27, 2019

ಚುಂಚನಕಟ್ಟೆ: ಕೆ.ಆರ್.ನಗರ ತಾಲೂಕಿನಲ್ಲಿ ತೀವ್ರ ಕೂತುಹಲಕ್ಕೆ ಕಾರಣವಾಗಿದ್ದ ಹೊಸಕೋಟೆ ಗ್ರಾಪಂ ಅಧ್ಯಕ್ಷೆ ವಿರುದ್ಧ ಇಂದು ಸದಸ್ಯರು ಮಂಡಿಸಬೇಕಿದ್ದ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಗಿದೆ.

ಹೊಸಕೋಟೆ ಗ್ರಾಪಂ ಅಧ್ಯಕ್ಷೆ ಮಂಜುಳಾ ನಾಗರಾಜು ವಿರುದ್ಧ 10 ಮಂದಿ ಸದಸ್ಯರು ಅವಿಶ್ವಾಸ ನಿರ್ಣಯ ಪತ್ರಕ್ಕೆ ಸಹಿ ಹಾಕಿ ದಿನಾಂಕ ಹಾಗೂ ಸಭೆ ನಿಗದಿಗೆ ಹುಣಸೂರು ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯಗೆ ಸಲ್ಲಿಸಿದ್ದರು. ಅದರಂತೆ ಇಂದು ಗ್ರಾಪಂ ಸಭೆ ಕರೆಯಲಾಗಿತ್ತು. ಆದರೆ ಸಭೆಯಲ್ಲಿ ಅವಿಶ್ವಾಸ ಮಂಡಿಸಲು ನಿರ್ಧರಿಸಿದ್ದ 10 ಮಂದಿ ಸದಸ್ಯರಲ್ಲಿ ಬಿ.ಎನ್.ಕೃಷ್ಣೇಗೌಡ, ಸುನಂದಾ, ಮಧು, ಸಿದ್ದರಾಮೇಗೌಡ, ಹೇಮಲತಾ, ಮಹದೇವಯ್ಯ ಭಾಗವಹಿಸಿದ್ದರು. ಉಳಿದ ನಾಲ್ವರು ಸದಸ್ಯರಾದ ಕಮಲಮ್ಮ, ರತ್ನಮ್ಮ, ಶಿವಕುಮಾರ್, ರಂಜಿತಾ ಗೈರಾಗಿದ್ದರು.

ಇದರಿಂದ ಸಭೆ ನಡೆಸಲು ಕೋರಂ ಇಲ್ಲದ ಕಾರಣ ಉಪವಿಭಾಗಾಧಿಕಾರಿಗಳು ಒಂದು ಗಂಟೆಗಳ ಕಾಲ ಸಭೆ ಮುಂದೂಡಿದರು. ಆದರೂ ಬಳಿಕ ನಡೆದ ಸಭೆಗೆ ನಿಗದಿತ ಸದಸ್ಯರು ಬಾರದ ಹಿನೆÀ್ನಲೆ ಉಪವಿಭಾಗಾಧಿಕಾರಿಗಳು ಸಭೆಯನ್ನು ವಿಸರ್ಜಿಸಿದರು. ಆ ಮೂಲಕ ಅವಿಶ್ವಾಸಕ್ಕೆ ಸೋಲು ಉಂಟಾಯಿತು. ಅವಿಸ್ವಾಸ ಗೊತ್ತುವಳಿಗೆ ಸೋಲು ಉಂಟಾಗುತ್ತಿದ್ದಂತಯೇ ಗ್ರಾಪಂ ಅಧ್ಯಕ್ಷೆ ಮಂಜುಳಾ ನಾಗರಾಜು ಗ್ರಾಪಂ ಅವರಣದಲ್ಲಿ ಬೆಂಬಲಿಗರೊಂದಿಗೆ ಸಂಭ್ರಮಿಸಿದರು. ಈ ವೇಳೆ ಮಾಜಿ ಅಧ್ಯಕ್ಷ ಹರಿಚಿಂದಬರ್, ಗ್ರಾಪಂ ಮಾಜಿ ಅಧ್ಯಕ್ಷ ಸಚಿನ್, ಮುಖಂಡರಾದÀ ನವೀನ್ ರಾಜೇಅರಸ್, ಹರೀಶ್, ಶಿವಕುಮಾರ್, ಪಾಪಣ್ಣ ಸೇರಿದಂತೆ ಇನ್ನಿತರರಿದ್ದರು.

Translate »