ಕೆಲವರು ಸೃಷ್ಟಿಸಿದ್ದ ಗೊಂದಲ: ಸಿ.ಹೆಚ್.ವಿಜಯಶಂಕರ್
ಮೈಸೂರು

ಕೆಲವರು ಸೃಷ್ಟಿಸಿದ್ದ ಗೊಂದಲ: ಸಿ.ಹೆಚ್.ವಿಜಯಶಂಕರ್

March 28, 2019

ಮೈಸೂರು: ನನ್ನ ನಾಮಪತ್ರ ಅಪೂರ್ಣ ಮತ್ತು ದೋಷ ಪೂರಿತ ಎಂದು ಕೆಲವರು ಅನಗತ್ಯ ಗೊಂದಲ ಸೃಷ್ಟಿಸಿದ್ದರು ಎಂದು ಮೈಸೂರು-ಕೊಡಗು ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಇಂದು ಮಧ್ಯಾಹ್ನ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ನಾಮಪತ್ರಗಳಲ್ಲಿ ಸಣ್ಣಪುಟ್ಟ ಕ್ಲರಿಕಲ್ ಮಿಸ್ಟೇಕ್ ಇದೆ ಎಂದು ತಿಳಿಸಿದ ಕಾರಣ ನಾನು ಚುನಾವಣಾ ಧಿಕಾರಿ ಬಳಿ ಬಂದು ಅಗತ್ಯ ಮಾಹಿತಿ ನೀಡಿದ್ದೇನೆ ಎಂದರು.

ಅವುಗಳು ಸಣ್ಣಪುಟ್ಟ ಕ್ಲರಿಕಲ್ ಮಿಸ್ಟೇಕ್‍ಗಳೇ ಹೊರತು, ನಾಮಪತ್ರ ತಿರಸ್ಕರಿಸುವಷ್ಟು ಗಂಭೀರ ತಪ್ಪುಗಳಲ್ಲ ಎಂಬುದು ನನ್ನ ಅಭಿಪ್ರಾಯ ಎಂದ ಅವರು, ನಾವು ಪಾರದರ್ಶಕವಾಗಿ ಚುನಾವಣೆ ಕೆಲಸ ಮಾಡುತ್ತಿದ್ದೇವೆ ಎಂದರು.

ಕೆಲವರು ಉದ್ದೇಶಪೂರ್ವಕವಾಗಿ ನನ್ನ ನಾಮಪತ್ರದಲ್ಲಿ ಭಾರೀ ದೋಷವಿರು ವುದರಿಂದ ತಿರಸ್ಕøತಗೊಳ್ಳುತ್ತದೆ ಎಂದು ಸುಳ್ಳು ವದಂತಿ ಹಬ್ಬಿಸಿದ್ದಾರಷ್ಟೆ. ನಾಮ ಪತ್ರಗಳನ್ನು ಕ್ರಮಬದ್ಧವೋ-ತಿರಸ್ಕøತವೋ ಎಂಬುದನ್ನು ಚುನಾವಣಾಧಿಕಾರಿಗಳು ಘೋಷಿಸುತ್ತಾರೆ ಎಂದು ವಿಜಯಶಂಕರ್ ನುಡಿದರು.

ಮೈತ್ರಿ ಧರ್ಮ ಪಾಲನೆ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದೆ. ಲೋಕಸಭಾ ಚುನಾವಣೆಯಲ್ಲಿ ಮಾಡಿಕೊಂಡಿರುವ ಮೈತ್ರಿಯಂತೆ ಎರಡೂ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಪಕ್ಷದ ವರಿಷ್ಠರ ಸೂಚನೆಯಂತೆ ಧರ್ಮ ಪಾಲನೆ ಮಾಡುತ್ತಾರೆ ಎಂದೂ ವಿಜಯಶಂಕರ್ ನುಡಿದರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಚುನಾವಣೆಯಲ್ಲಿ ತಮ್ಮ ಪರ ಪ್ರಚಾರಕ್ಕೆ ಬರುತ್ತಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಹ ಪ್ರಚಾರಕ್ಕೆ ಬರುತ್ತಾರೆ ಎಂದ ಅವರು, ನಮ್ಮ ಒಗ್ಗಟ್ಟನ್ನು ಕಂಡು ತಡೆಯ ಲಾಗದವರು ಅಪಪ್ರಚಾರ ಮಾಡಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

Translate »