ಮೈಸೂರು: ಕೋಮು ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸಲು ಕರ್ನಾ ಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಅಹಿಂದ ಸಂಘಟನೆಗಳ ಒಕ್ಕೂಟ ಮುಂದಾಗಿದ್ದು, ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಹಿಂದುಳಿದ ವರ್ಗಗಳ ಸಮರ್ಥ ಅಭ್ಯರ್ಥಿಗೆ ಟಿಕೆಟ್ ನೀಡಲು ಜೆಡಿಎಸ್ ಸಹಕಾರ ನೀಡಬೇಕು ಎಂದು ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಒತ್ತಾಯಿಸಿದರು. ಮೈಸೂರಿನ ಮಯೂರ ಹೊಯ್ಸಳ ಹೋಟೆಲ್‍ನಲ್ಲಿ ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಹೊಂದಾಣಿಕೆ ಸ್ವಾಗತಾರ್ಹ. ಮೈಸೂರು-ಕೊಡಗು…
ರೈಲ್ವೆ ನೌಕರರ ಸಂಘ ಪ್ರತಿಭಟನೆ
March 10, 2019ಮೈಸೂರು: ಸಂವಿಧಾನದ 117ನೇ ತಿದ್ದುಪಡಿ ವಿಧೇಯಕ ಅಂಗೀ ಕರಿಸಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೈಸೂರು ನೈರುತ್ಯ ರೈಲ್ವೆಯ ಅಖಿಲ ಭಾರತ ಪರಿಶಿಷ್ಟ ಜಾತಿ ಮತ್ತು ಪಂಗಡ ರೈಲ್ವೆ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನೈರುತ್ಯ ರೈಲ್ವೆಯ ವಿಭಾಗೀಯ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಎಸ್‍ಸಿ-ಎಸ್‍ಟಿ ನೌಕರರ ಹಿತಕಾಯುವ ದೃಷ್ಟಿಯಲ್ಲಿ 117ನೇ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ನೀಡಲು ಕೇಂದ್ರ ಸರ್ಕಾರ ಮುಂದಾ ಗಬೇಕು ಎಂದು ಒತ್ತಾಯಿಸಿದರು. ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ…
ಮೈಸೂರಲ್ಲಿ ಶುಭಂನ ಮೂರು ಹೊಸ ಮಳಿಗೆ ಉದ್ಘಾಟನೆ
March 10, 2019ಮೈಸೂರು: ಮೈಸೂರಿನ ಬೋಗಾದಿ, ಚಾಮುಂಡಿಪುರಂ ಮತ್ತು ವಿವಿ ಮೊಹಲ್ಲಾದಲ್ಲಿ ಶುಭಂ ಎಲೆಕ್ಟ್ರಾನಿಕ್ ಶಾಪ್‍ಗಳನ್ನು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಇಂದು ಉದ್ಘಾಟಿಸಿದರು. ಮೈಸೂರು ಸೇರಿದಂತೆ ಕರ್ನಾಟಕ ದಲ್ಲಿ ಈಗಾಗಲೇ 14 ಸ್ಟೋರ್‍ಗಳೂ ಸೇರಿ ಒಟ್ಟು 17 ಸ್ಟೋರ್‍ಗಳನ್ನು ಹೊಂದಿ ದಂತಾಗಿದೆ. ಶುಭಂ ತನ್ನ 17 ಸ್ಟೋರ್ ಗಳಲ್ಲೂ ಎಟಿಎಂ ಸೇವೆಯೊಂದಿಗೆ ಉತ್ಪನ್ನಗಳನ್ನು ಮಾರಾಟ ಮಾಡು ತ್ತಿದ್ದು, ಗ್ರಾಹಕರಿಗೆ 2-3 ವರ್ಷಗಳವರೆಗೆ ಉತ್ಪನ್ನಗಳಿಗೆ ಖಾತರಿ ನೀಡುತ್ತಿದೆ. ಅಲ್ಲದೆ, ಯಾವುದೇ ಉತ್ಪನ್ನಗಳ ಖರೀದಿಗೆ ಖಚಿತವಾದ ಉಡುಗೊರೆಗಳೊಂದಿಗೆ ಚಿನ್ನ ಮತ್ತು ಬೆಳ್ಳಿ…
ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
March 10, 2019ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇ ಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಗಳಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿದರು. ನಂಜನಗೂಡು ರಸ್ತೆಯಿಂದ ಗೆಜ್ಜಗಳ್ಳಿ-ಮಂಡಕಳ್ಳಿ ಮಾರ್ಗವಾಗಿ ರಿಂಗ್ ರಸ್ತೆಗೆ ಸೇರುವ 2 ಕೋಟಿ ರೂ. ವೆಚ್ಚದ ರಸ್ತೆ, ಮೈಸೂರು ತಾಲೂಕು, ಎಂ.ಎಂ. ರಸ್ತೆಯಿಂದ ದಡದಹಳ್ಳಿ, ಬ್ಯಾತಹಳ್ಳಿ ಮಾರ್ಗ ದೊಡ್ಡ ಕಾನ್ಯ ರಸ್ತೆ ಅಭಿವೃದ್ಧಿಯ 5 ಕೋಟಿ ರೂ. ಕಾಮಗಾರಿಗೆ ಸಚಿವರು ಚಾಲನೆ ನೀಡಿದರು. ಕಡಕೊಳ-ಜಯಪುರ ರಸ್ತೆ (60 ಲಕ್ಷ…
ಮಕ್ಕಳಿಗೆ ಶಾಲೆಯಲ್ಲಿ ಅಕ್ಷರ, ಮನೆಯಲ್ಲಿ ಸಂಸ್ಕøತಿ ಕಲಿಸಿದರೆ ಅವರು ಸಂಸ್ಕಾರವಂತರಾಗುತ್ತಾರೆ
March 10, 2019ಮೈಸೂರು: ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಅಕ್ಷರ ಕಲಿಸಿದರೆ, ಗುರು ಹಿರಿಯರಿಗೆ ಗೌರವ ಕೊಡುವ ಸಂಸ್ಕøತಿ ಯನ್ನು ಪೋಷಕರು ಮನೆಯಲ್ಲಿ ಕಲಿ ಸುವ ಮೂಲಕ ಮಕ್ಕಳನ್ನು ಸಂಸ್ಕಾರವಂತ ರನ್ನಾಗಿ ಬೆಳೆಸಬೇಕು ಎಂದು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯ ವಿಕಿರಣ ಆಂಕಾಲಜಿ ತಜ್ಞರಾದ ಡಾ.ಎಂ.ಎಸ್. ವಿಶ್ವೇಶ್ವರ ಅವರು ಕರೆ ನೀಡಿದರು. ಕೌಟಿಲ್ಯ ವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಯುಕೆಜಿ ಮಕ್ಕಳ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ನೀಡುವುದು ಸವಾಲಿನ…
ರಸ್ತೆ ಬದಿ ವ್ಯಾಪಾರಿಗಳಿಗೆ ಕೊಡೆ ವಿತರಿಸಿದ ಶಾಸಕ ರಾಮದಾಸ್
March 10, 2019ಮೈಸೂರು: ಮೈಸೂರಿನ ಕೆಆರ್ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕಮಲ ಜ್ಯೋತಿ ಕಾರ್ಯಕ್ರಮಕ್ಕೆ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಭಾರತಾಂಬೆ ಚಿತ್ರಪಟಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಮೈಸೂರಿನ ನಾದಬ್ರಹ್ಮ ಸಂಗೀತ ಸಭಾದ ಎದುರು ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಸ್.ಎ.ರಾಮದಾಸ್, ನೆರೆದಿದ್ದ ಎಲ್ಲಾ ಮಹಿಳೆಯರಿಗೂ ಮಹಿಳಾ ದಿನಾಚರಣೆ ಶುಭಾಶಯ ಕೋರಿದರು. ಇದೇ ಸಂದರ್ಭದಲ್ಲಿ ನಂಜುಮಳಿಗೆ ಬಳಿ ಬೀದಿಬದಿ ವ್ಯಾಪಾರ ಮಾಡುವ 50ಕ್ಕೂ ಹೆಚ್ಚು…
ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಖಂಡಿಸಿ ರೈತರ ಪ್ರತಿಭಟನೆ
March 10, 2019ಮೈಸೂರು: ರಾಜ್ಯ ಸರ್ಕಾರ 2013ರ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ರೈತ ಸಮುದಾಯಕ್ಕೆ ಮಾರಕವಾದ ಈ ತಿದ್ದುಪಡಿಯಿಂದ ಕೂಡಲೇ ಹಿಂದೆ ಸರಿಯಬೇಕು ಎಂದು ಆಗ್ರಹಿಸಿ ಸ್ವರಾಜ್ ಇಂಡಿಯಾ, ದಲಿತ ಸಂಘರ್ಷ ಸಮಿತಿ (ದಸಂಸ) ಮತ್ತು ಕರ್ನಾಟಕ ರಾಜ್ಯ ರೈತ ಸಂಘ-ಹಸಿರುಸೇನೆಯ ಮೈಸೂರು ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಎಂಜಿ ರಸ್ತೆಯ ತರಕಾರಿ ಮಾರುಕಟ್ಟೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, 2013ರಲ್ಲಿ ಅಂದಿನ ಯುಪಿಎ ಸರ್ಕಾರ ಅನುಷ್ಠಾನಗೊಳಿಸಿದ ಭೂ ಸ್ವಾಧೀನ ಕಾಯ್ದೆಗೆ ವ್ಯತಿರಿಕ್ತವಾದ…
ರಾಜಕೀಯದಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಬೇಕಿದೆ
March 10, 2019ಮೈಸೂರು: ಎಂಥದ್ದೇ ಸಂದರ್ಭ ಬಂದರೂ ದಿಟ್ಟ ನಿಲುವು ಕೈಗೊಳ್ಳುವ ಸಾಮಥ್ರ್ಯ ಮಹಿಳೆಯ ರಿಗಿದ್ದು, ಜನಸಂಖ್ಯೆಗೆ ಅನುಗುಣವಾಗಿ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ.50ರಷ್ಟು ಮೀಸಲಾತಿ ನೀಡಬೇಕು ಎಂದು ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕುವೆಂಪುನಗರದ ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಪತ್ನಿ, ಸಹೋದರಿ, ತಾಯಿಯಾಗಿ, ಮನೆಯಿಂದ ಹೊರಗೆ ಬಂದಾಗ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಿಯಾಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಮಹಿಳೆ…
ಚಾಮುಂಡಿಬೆಟ್ಟಕ್ಕೆ ದುಷ್ಕರ್ಮಿಗಳಿಂದ ಬೆಂಕಿ
March 9, 2019ಮೈಸೂರು: ಚಾಮುಂಡಿಬೆಟ್ಟದಲ್ಲಿ ದುಷ್ಕರ್ಮಿಗಳು ಹಾಕಿದ ಬೆಂಕಿ ನಂದಿಸುವ ಸಂದರ್ಭದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿರು ವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಿಡಿಗೇಡಿಗಳ ದುಷ್ಕೃತ್ಯದಿಂದಾಗಿ ಚಾಮುಂಡಿ ಬೆಟ್ಟದ ನೂರಾರು ಎಕರೆ ಕುರುಚಲು ಕಾಡಿಗೆ ಬೆಂಕಿ ವ್ಯಾಪಿಸಿದ್ದಲ್ಲದೆ, ದಟ್ಟ ಹೊಗೆ ಆವರಿಸಿತ್ತು. ಅಗ್ನಿ ಶಾಮಕ, ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ಸ್ವಯಂ ಸೇವಕರೂ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ್ರರು. ಈ ವೇಳೆ ಬಂಡೆಯೊಂದರ ಪಕ್ಕದಲ್ಲಿ ಅರೆಬೆಂದ ಸ್ಥಿತಿಯಲ್ಲಿದ್ದ ಮಹಿಳೆಯ ಶವ ಪತ್ತೆಯಾಗಿದೆ. ಮೊದಲು ನೋಡಿದ ಸ್ವಯಂ ಸೇವಕರು, ಗಾಬರಿಯಿಂದ ಓಡಿ…
ಮೈಸೂರು ಜಿಪಂ 436 ಕೋಟಿ ರೂ. ಬಜೆಟ್
March 9, 2019ಮೈಸೂರು: 2019-20ನೇ ಸಾಲಿಗೆ ಮೈಸೂರು ಜಿಲ್ಲಾ ಪಂಚಾಯ್ತಿಯು 435.91 ಕೋಟಿ ರೂಗಳ ಆಯ-ವ್ಯಯ ಮಂಡಿಸಿದೆ. ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣ ದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ತುರ್ತು ಸಭೆಯಲ್ಲಿ ಅಧ್ಯಕ್ಷೆ ಬಿ.ಸಿ.ಪರಿಮಳ ಶ್ಯಾಂ ಅವರು ಬಜೆಟ್ ಮಂಡನೆ ಮಾಡಿದ್ದು, 2019-20ನೇ ಸಾಲಿಗೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದ ನಂತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು. ವಿವಿಧ ಕಾರ್ಯಕ್ರಮಗಳಡಿ ಪ್ರಸಕ್ತ ಸಾಲಿನಲ್ಲಿ 1.302 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದು, ಜಿಲ್ಲಾ ಪಂಚಾಯ್ತಿ ವೇತನ ಬಾಬ್ತು 127 ಕೋಟಿ ರೂ…