ರಾಜಕೀಯದಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಬೇಕಿದೆ
ಮೈಸೂರು

ರಾಜಕೀಯದಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಬೇಕಿದೆ

March 10, 2019

ಮೈಸೂರು: ಎಂಥದ್ದೇ ಸಂದರ್ಭ ಬಂದರೂ ದಿಟ್ಟ ನಿಲುವು ಕೈಗೊಳ್ಳುವ ಸಾಮಥ್ರ್ಯ ಮಹಿಳೆಯ ರಿಗಿದ್ದು, ಜನಸಂಖ್ಯೆಗೆ ಅನುಗುಣವಾಗಿ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ.50ರಷ್ಟು ಮೀಸಲಾತಿ ನೀಡಬೇಕು ಎಂದು ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಕುವೆಂಪುನಗರದ ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಪತ್ನಿ, ಸಹೋದರಿ, ತಾಯಿಯಾಗಿ, ಮನೆಯಿಂದ ಹೊರಗೆ ಬಂದಾಗ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಿಯಾಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಮಹಿಳೆ ಗಮನ ಸೆಳೆಯುತ್ತಿ ದ್ದಾಳೆ. ಹಲವು ಸವಾಲುಗಳನ್ನು ಮೆಟ್ಟಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಗೈಯ್ಯು ತ್ತಿರುವುದು ಒಳ್ಳೆಯ ಬೆಳವಣಿಗೆ. ಮೆಟ್ರೋ ನಗರ ಸೇರಿದಂತೆ ಎಲ್ಲೆಡೆ ಮಹಿಳೆಗೆ ಸಮಾನತೆ ದೊರಕುತ್ತಿದ್ದರೂ ರಾಜಕೀಯ ವಾಗಿ ಮಹಿಳಾ ಶಕ್ತಿ ಕೊರತೆ ಎದುರಿಸು ತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ದಲ್ಲಿ ಶೇ.19ರಷ್ಟು ಸ್ಥಾನಮಾನ ಮಹಿಳೆ ಯರಿಗೆ ಸಿಕ್ಕಿದೆ. ಜನಸಂಖ್ಯೆಗೆ ಅನುಗುಣ ವಾಗಿ ಶೇ.50ರಷ್ಟು ಮಹಿಳಾ ಮೀಸಲಾತಿ ನೀಡಬೇಕಾಗಿದೆ ಎಂದರು.

ಎಲ್ಲರಂತೆ ಮಹಿಳೆಯರಲ್ಲಿಯೂ ನ್ಯೂನತೆಗಳಿವೆ. ಆದರೆ ಯಾವುದೇ ನ್ಯೂನತೆ ಯನ್ನು ತೋರ್ಪಡಿಸಿಕೊಳ್ಳದೆ ಸಾಧನೆ ಮಾಡುವ ದಿಕ್ಕಿನತ್ತ ಗಮನ ಕೇಂದ್ರೀಕ ರಿಸಬೇಕು.

ಮಹಿಳೆಯರು ದೈಹಿಕ ಸೌಂದ ರ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಇದರಿಂದಲೇ ಹಲವು ಸಮಸ್ಯೆ ಹಾಗೂ ಸವಾಲುಗಳು ಎದುರಾಗುತ್ತವೆ. ಈ ನಿಟ್ಟಿ ನಲ್ಲಿ ವಾಸ್ತವವಾಗಿ ದೈಹಿಕ ಸೌಂದ ರ್ಯದ ಬಗ್ಗೆ ಹೆಚ್ಚು ಗಮನಹರಿಸದೆ ತಮ್ಮ ಮುಂದಿರುವ ಗುರಿಯತ್ತ ದಾಪು ಗಾಲು ಹಾಕುವಂತೆ ಸಲಹೆ ನೀಡಿದರು.

ಸಮಾಜದಲ್ಲಿ ಪುರುಷರಷ್ಟೇ ಸಮಾನ ವಾಗಿ ಮಹಿಳೆಯರು ಕೊಡುಗೆ ನೀಡಿ ದ್ದಾರೆ. ಮಕ್ಕಳ ಪಾಲನೆ, ಪೋಷಣೆ, ಶಿಕ್ಷಣ, ಮನೆ ನಿರ್ವಹಣೆ ಹೊಣೆಗಾರಿಕೆಯನ್ನು ಅಚ್ಚು ಕಟ್ಟಾಗಿ ನಿಭಾಯಿಸುವ ಶಕ್ತಿ ಮಹಿಳೆಯ ರಿಗೆ ಮಾತ್ರವಿದೆ. ಏಕಕಾಲದಲ್ಲಿ ಬಹು ವಿಧದ ಜವಾಬ್ದಾರಿ ನಿರ್ವಹಿಸುತ್ತಾಳೆ. ಪ್ರತಿದಿನ ಬೆಳಿಗ್ಗೆ ಎದ್ದು ಮನೆ ಸ್ವಚ್ಛ ಮಾಡಿ, ಮಕ್ಕಳಿಗೆ ಉಪಹಾರ ವ್ಯವಸ್ಥೆ ಮಾಡಿದ ನಂತರ ಕಚೇರಿಗೆ ಹೋಗಬೇಕಾಗಿದೆ. ಕೇವಲ ಎರಡು ಕೈ ಸಾಲದಾಗಿದ್ದು, ಏಕಕಾಲಕ್ಕೆ ಹತ್ತಾರು ಕೈ ಇರುವಂತೆ ಕೆಲಸ ಮಾಡುವ ವಿಶೇಷ ಶಕ್ತಿ ಮಹಿಳೆಯರಿಗೆ ಇದೆ. ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಪ್ರಾಬಲ್ಯ ಮೆರೆಯುತ್ತಿದ್ದಾರೆ. ಪೈಲಟ್ ಆಗಿಯೂ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನಡೆಸುವ ಸಾಮಥ್ರ್ಯ ಮಹಿಳೆಯರಿಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಹಿಳಾ ಭಗೀರಥ ಖ್ಯಾತಿಯ ಉತ್ತರ ಕರ್ನಾಟಕದ ಮಹಿಳೆ ಗೌರಮ್ಮ ಚಂದ್ರಶೇಖರ್ ನಾಯಕ್ ಮಾತನಾಡಿ, ನಮ್ಮಲ್ಲಿರುವ ಒಂದು ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡಲು ನೀರಿನ ಅವಶ್ಯಕತೆ ನೀಗಿಸಲು ಬಾವಿ ಕೊರೆಯಲಾರಂಭಿಸಿದೆ. ಆ ವೇಳೆ ನನಗೆ ನೀರು ಪಡೆಯಲೇಬೇಕೆಂಬ ಹಠ ವಿತ್ತು. ಅದಕ್ಕಾಗಿ ಬಾವಿ ತೋಡಿದೆ. ಇದೀಗ ನಮ್ಮ ಹೊಲದಲ್ಲಿ ಕೃಷಿ ಚಟು ವಟಿಕೆ ಮಾಡುವುದಕ್ಕೆ ನೀರು ಬಳಸಿ ಕೊಂಡು, ಊರಿನ ಜನರಿಗೂ ನೀರು ನೀಡುತ್ತಿದ್ದೇನೆ. ಪ್ರಸ್ತುತ ಬಾವಿಯನ್ನು ನೋಡಿದಾಗ ಅದನ್ನು ನಾನೇನಾ ಕೊರೆದಿದ್ದು ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ಮಹಿಳಾ ದಿನದ ಅಂಗವಾಗಿ ಗೌರಮ್ಮ ಚಂದ್ರಶೇಖರ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಕೆ.ಎಸ್.ಸುರೇಶ್, ಪ್ರಾಂಶುಪಾಲ ಡಾ.ಎಸ್.ನಟರಾಜು ಉಪಸ್ಥಿತರಿದ್ದರು.

Translate »