Tag: Mysuru

ಮೈಸೂರು ಮೈತ್ರಿ ಅಭ್ಯರ್ಥಿ ದೇವೇಗೌಡರೋ ಇಲ್ಲ ನಿಖಿಲ್ ನಿಲ್ತಾರೋ…
ಮೈಸೂರು

ಮೈಸೂರು ಮೈತ್ರಿ ಅಭ್ಯರ್ಥಿ ದೇವೇಗೌಡರೋ ಇಲ್ಲ ನಿಖಿಲ್ ನಿಲ್ತಾರೋ…

March 2, 2019

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್‍ಕುಮಾರ್ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಎಂಬುದು ಇಂದು ಮೈಸೂರಿನಲ್ಲಿ ಬಹಿರಂಗವಾಗಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸುವಾರಿ ಸಚಿವ ಜಿ.ಟಿ.ದೇವೇಗೌಡರು ಮಾತನಾಡಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ನೀವೇ ಸ್ಪರ್ಧಿಸಬೇಕೆಂದು ವರಿಷ್ಠರಾದ ಹೆಚ್.ಡಿ.ದೇವೇಗೌಡ ಅವರನ್ನು ಮನವಿ ಮಾಡಿಕೊಂಡೆವು. ಅದೇನೇ ಇರಲಿ ಯಾರೇ ಅಭ್ಯರ್ಥಿಯಾದರೂ ದೇವೇಗೌಡರು ಹಾಗೂ ಕುಮಾರಸ್ವಾಮಿ…

ನಿಷ್ಪಕ್ಷಪಾತ ವರದಿ ಮಾಡಿ: ಪತ್ರಕರ್ತರಿಗೆ ಸಿಎಂ ಸಲಹೆ
ಮೈಸೂರು

ನಿಷ್ಪಕ್ಷಪಾತ ವರದಿ ಮಾಡಿ: ಪತ್ರಕರ್ತರಿಗೆ ಸಿಎಂ ಸಲಹೆ

March 2, 2019

ಸುತ್ತೂರು: ಸರ್ಕಾರದ ಆಡಳಿತ ವೈಖರಿ, ನೀತಿ-ನಿರೂಪಣೆ ಗಳನ್ನು ಜನರಿಗೆ ಮುಟ್ಟಿಸುವಲ್ಲಿ ಪತ್ರ ಕರ್ತರು ನಿಷ್ಪಕ್ಷಪಾತವಾಗಿ ಕೆಲಸ ಮಾಡ ಬೇಕೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಸಲಹೆ ನೀಡಿದ್ದಾರೆ. ಮೈಸೂರು ಜಿಲ್ಲೆಯ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಇಂದು ಆರಂಭವಾದ ಎರಡು ದಿನಗಳ ಪತ್ರಕರ್ತರ 34ನೇ ರಾಜ್ಯ ಸಮ್ಮೇ ಳನದಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಮಾಧ್ಯಮಗಳು ಅತ್ಯಂತ ಜವಾ ಬ್ದಾರಿಯುತವಾಗಿ ಕಾರ್ಯ ನಿರ್ವಹಿ ಸುವ ಮೂಲಕ ಸರ್ಕಾರ ಹಮ್ಮಿ ಕೊಳ್ಳುವ ಜನಪರ ಕೆಲಸಗಳನ್ನು ನಾಡಿನ ಕಟ್ಟ ಕಡೆಯ ವ್ಯಕ್ತಿಗೆ…

ಪ್ರಜಾತಂತ್ರ ಉಳಿಸುವ ಮಾಧ್ಯಮ
ಮೈಸೂರು

ಪ್ರಜಾತಂತ್ರ ಉಳಿಸುವ ಮಾಧ್ಯಮ

March 2, 2019

ಸುತ್ತೂರು: ಪ್ರಜಾ ತಂತ್ರವನ್ನು ಉಳಿಸುವ ಸಾಮಥ್ರ್ಯ ಮಾಧ್ಯಮ ರಂಗದ ಕೈಯ್ಯಲ್ಲಿದೆ ಎಂದು ಶಾಸಕ ಎ.ಹೆಚ್. ವಿಶ್ವನಾಥ್ ಅವರು ಇಂದಿಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆರಂಭವಾದ ಪತ್ರಕರ್ತರ 34ನೇ ರಾಜ್ಯ ಸಮ್ಮೇಳನದ ಅಂಗವಾಗಿ ನಡೆದ ಗೋಷ್ಠಿ ಯಲ್ಲಿ ಪಾಲ್ಗೊಂಡು `ಮಾಧ್ಯಮ ಮತ್ತು ರಾಜಕಾರಣ’ ವಿಷಯ ಕುರಿತು ಮಾತ ನಾಡುತ್ತಿದ್ದ ಅವರು, ಈಗ ಮಾಧ್ಯಮ ವನ್ನು ಸಂಶಯದಿಂದ ನೋಡುವಂತಾ ಗಿದೆ. ಹಿಂದೆ ಹಿರಿಯರು ಪತ್ರಿಕಾ ಧರ್ಮ ಕಾಪಾಡುತ್ತಿದ್ದರು. ರಾಜಕಾರಣಿಗಳು ಮತ್ತು ಪತ್ರಿಕಾ ಮಾಧ್ಯಮ ಧರ್ಮ ಪರಿ ಪಾಲನೆಯನ್ನು…

ಕರ್ನಾಟಕ, ಕೇರಳ ವಾಕ್-ಶ್ರವಣ ಸಂಸ್ಥೆಗಳ 300 ವಿದ್ಯಾರ್ಥಿಗಳು ಭಾಗಿ
ಮೈಸೂರು

ಕರ್ನಾಟಕ, ಕೇರಳ ವಾಕ್-ಶ್ರವಣ ಸಂಸ್ಥೆಗಳ 300 ವಿದ್ಯಾರ್ಥಿಗಳು ಭಾಗಿ

March 2, 2019

ಮೈಸೂರು: ಜೆಎಸ್‍ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ `ಸಂವೇದನಾ ಸಾಮಥ್ರ್ಯ, ಕೇಳುವಿಕೆ ಮತ್ತು ಮಾತು-ಭಾಷೆಯ ಪ್ರಕ್ರಿಯೆ’ ವಿಷಯ ಕುರಿತ ಎರಡು ದಿನದ ರಾಷ್ಟ್ರೀಯ ಸಮ್ಮೇಳನಕ್ಕೆ ಶುಕ್ರ ವಾರ ಮೈಸೂರಿನ ರಾಜೇಂದ್ರ ಭವನದಲ್ಲಿ ಚಾಲನೆ ದೊರೆಯಿತು. ಮೈಸೂರು ಜೆಎಸ್‍ಎಸ್ ವಾಕ್-ಶ್ರವಣ ಸಂಸ್ಥೆ, ಧಾರವಾಡ ಜೆಎಸ್‍ಎಸ್ ವಾಕ್-ಶ್ರವಣ ಸಂಸ್ಥೆ, ಕೇರಳದ ಐಕಾನ್ ಮತ್ತು ಅಮೃತ ವಾಕ್-ಶ್ರವಣ ಸಂಸ್ಥೆಗಳ ಒಟ್ಟು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಮೆದುಳಿನ ಕ್ರಿಯೆಯು ಮಾತು, ಭಾಷೆ ಹಾಗೂ ಕೇಳು ವಿಕೆಯ ಪ್ರಕ್ರಿಯೆಗಳ ಮೇಲೆ, ಹೇಗೆ…

ವಿದ್ಯಾವರ್ಧಕದಲ್ಲಿ `ವಿಧ್ವತ್-2ಕೆ19’ ಚಾಲನೆ
ಮೈಸೂರು

ವಿದ್ಯಾವರ್ಧಕದಲ್ಲಿ `ವಿಧ್ವತ್-2ಕೆ19’ ಚಾಲನೆ

March 2, 2019

ಮೈಸೂರು: ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಮಟ್ಟದ ವಾಣಿಜ್ಯ ಮತ್ತು ನಿರ್ವಹಣೆ ಉತ್ಸವ `ವಿಧ್ವತ್’ಗೆ ಶುಕ್ರವಾರ ಚಾಲನೆ ದೊರೆಯಿತು. ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ 12ನೇ ವರ್ಷದ ಅಂತರ ಕಾಲೇಜು ವಿಧ್ವತ್ ಉತ್ಸವ ಇದಾಗಿದೆ. ಕಾಲೇಜಿನ ಪಿ.ಎಂ.ಚಿಕ್ಕಬೋರಯ್ಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ `ವಿಧ್ವತ್-2ಕೆ19’ಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಾನೂ ಇದೇ ಕಾಲೇಜು ವಿದ್ಯಾರ್ಥಿ. ಕಾಲೇಜಿನ ದಿನಗಳು ಮತ್ತೆ ನೆನಪಾಗುತ್ತಿವೆ. ಆಗ ವಾಣಿಜ್ಯ ಮತ್ತು ನಿರ್ವ ಹಣೆಗೆ ಸಂಬಂಧಿಸಿದ…

ಸ್ಪಾ, ಮನೆಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ  ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ
ಮೈಸೂರು

ಸ್ಪಾ, ಮನೆಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ

March 2, 2019

ಮೈಸೂರು: ಮೈಸೂರು ಸಿಸಿಬಿ ಪೊಲೀಸರು ನರಸಿಂಹರಾಜ ಠಾಣೆ ವ್ಯಾಪ್ತಿ ಯಲ್ಲಿ ವೇಶ್ಯಾವಾಣಿಕೆ ನಡೆಸುತ್ತಿದ್ದ ಆರೋಪದ ಮೇಲೆ ಎನ್.ಆರ್.ಮೊಹಲ್ಲಾದ ಶ್ರೀಲತಾ ಅಲಿಯಾಸ್ ಶಕೀಲ ಎಂಬ ಮಹಿಳೆಯನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಎನ್.ಆರ್.ಮೊಹಲ್ಲಾ ಶಿವಾಜಿ ರಸ್ತೆ 2ನೇ ಕ್ರಾಸ್, ರಜಪೂತ್ ಬ್ಲಾಕ್‍ನ ಮನೆಯೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, 2600 ರೂ. ನಗದು, ಒಂದು ಮೊಬೈಲ್ ಅಮಾನತು ಪಡಿಸಿಕೊಂಡು ಮಹಿಳೆಯನ್ನು ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಮೈಸೂರಿನ ವಿಜಯನಗರ, ವಿ.ವಿ. ಪುರಂ ಮತ್ತು ನರಸಿಂಹರಾಜ…

ಗ್ರಾಪಂ ವ್ಯಾಪ್ತಿಯಲ್ಲಿ ಶೂನ್ಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮೈಸೂರು ತಾಪಂ ನಿರ್ಧಾರ
ಮೈಸೂರು

ಗ್ರಾಪಂ ವ್ಯಾಪ್ತಿಯಲ್ಲಿ ಶೂನ್ಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮೈಸೂರು ತಾಪಂ ನಿರ್ಧಾರ

March 2, 2019

ಮೈಸೂರು: ಗ್ರಾಮ ಪಂಚಾಯತಿ ವ್ಯಾಪ್ತಿಯ 9 ಕಡೆಗಳಲ್ಲಿ ಶೂನ್ಯ ತ್ಯಾಜ್ಯ ಸಂಸ್ಕರಣಾ ಘಟಕ ಆರಂಭಿಸಲು ತಾಲೂಕು ಪಂಚಾಯತಿ ಚಿಂತಿಸಿದ್ದು, ಶೀಘ್ರವೇ ಚಾಮುಂಡಿಬೆಟ್ಟ ಮತ್ತು ಹೊಸಹುಂಡಿಯಲ್ಲಿ ಆರಂಭವಾಗಲಿದೆ. ಮೈಸೂರು ತಾಲೂಕು ಪಂಚಾಯತ್ ತನ್ನ ವ್ಯಾಪ್ತಿಗೆ ಬರುವ ರಿಂಗ್‍ರಸ್ತೆ ಸುತ್ತಮುತ್ತ ಲಿನ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿಯ ಜತೆಗೆ ಶೂನ್ಯ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದೆ. ಸ್ವಚ್ಛ ನಗರಿ ಬಿರುದು ಪಡೆದಿರುವ ಮೈಸೂರು ನಗರ ವನ್ನು ಮಾತ್ರ ಸ್ವಚ್ಛವಾಗಿಟ್ಟುಕೊಂಡು ಹೊರವಲ ಯವವನ್ನು ನಿರ್ಲಕ್ಷಿಸಿದೆ ಎಂದು ಹೊಸ…

ಇಂದು ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣದ ನೂತನ ಕಟ್ಟಡಗಳ ಉದ್ಘಾಟನೆ
ಮೈಸೂರು

ಇಂದು ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣದ ನೂತನ ಕಟ್ಟಡಗಳ ಉದ್ಘಾಟನೆ

March 2, 2019

ಮೈಸೂರು: ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಂಜನಗೂಡು ತಾಲೂಕಿನ ಮುಳ್ಳೂರಿನಲ್ಲಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲಾ ಸಂಕೀರ್ಣದ ನೂತನ ಕಟ್ಟಡಗಳ ಹಾಗೂ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಸೇರಿದ ವಿವಿಧ ಕಟ್ಟಡಗಳ ಉದ್ಘಾಟನಾ ಸಮಾರಂಭವು ಮಾ.2ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಕಾರ್ಯಕ್ರಮ ಉದ್ಘಾಟಿಸುವರು, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಕಟ್ಟಡಗಳ…

ಮಹಾ ಶಿವರಾತ್ರಿ ಹಿನ್ನೆಲೆ, ಪೊಲೀಸ್ ಆಯುಕ್ತರಿಂದ ಸಲಹೆ-ಸೂಚನೆ
ಮೈಸೂರು

ಮಹಾ ಶಿವರಾತ್ರಿ ಹಿನ್ನೆಲೆ, ಪೊಲೀಸ್ ಆಯುಕ್ತರಿಂದ ಸಲಹೆ-ಸೂಚನೆ

March 2, 2019

ಮೈಸೂರು: ಮಾ.4ರಂದು ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಮಹಾ ಶಿವರಾತ್ರಿ ಸಂದರ್ಭದಲ್ಲಿ ಕೆಲವು ಯುವಕರು ಅನಾವಶ್ಯಕವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ತಿರುಗಾಡುತ್ತಾ, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಹೆಂಗಸರು, ಮಕ್ಕಳು, ವೃದ್ಧರನ್ನು ಕೀಟಲೆ ಮಾಡುವುದು, ಸಾರ್ವಜನಿಕರ ಶಾಂತಿ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವವರ ಹಾಗೂ ಕಾನೂನು ಬಾಹಿರ ಕಾರ್ಯಗಳಲ್ಲಿ ತೊಡಗುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ರಾತ್ರಿ ಜಾಗರಣೆ ಸಮಯದಲ್ಲಿ ಮನೆಗಳ ಮುಂದೆ ಹೂ…

ಭಯೋತ್ಪಾದಕರು ಎಲ್ಲೇ ಅಡಗಿದ್ದರೂ ಸಂಹಾರ ಮಾಡದೇ ಬಿಡಲ್ಲ…
ಮೈಸೂರು

ಭಯೋತ್ಪಾದಕರು ಎಲ್ಲೇ ಅಡಗಿದ್ದರೂ ಸಂಹಾರ ಮಾಡದೇ ಬಿಡಲ್ಲ…

March 1, 2019

ನವದೆಹಲಿ: ಭದ್ರತೆ ವಿಚಾರದಲ್ಲಿ ರಾಜಿಯೇ ಇಲ್ಲ. ಭಯೋತ್ಪಾದಕರು ಎಲ್ಲೇ ಅಡಗಿದ್ದರೂ ಅವರನ್ನು ಸಂಹಾರ ಮಾಡಲು ಸಜ್ಜಾಗಿದ್ದೇವೆ ಎಂದು ಘೋಷಿಸಿದ ಭಾರತದ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರು, ಪಾಕ್‍ನ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕೆ ಸಾಕ್ಷ್ಯವನ್ನು ಪ್ರದರ್ಶಿಸಿದರು. ಭೂ ಸೇನೆಯ ಮೇಜರ್ ಜನರಲ್ ಸುರೇಂದ್ರ ಸಿಂಗ್, ವಾಯುಸೇನೆಯ ಏರ್ ವೈಸ್ ಮಾರ್ಷಲ್ ರವಿ ಕಪೂರ್ ಮತ್ತು ನೌಕಾಪಡೆಯ ಅಡ್ಮಿರಲ್ ಡಿ.ಎಸ್.ಗುಜ್ರಾಲ್ ಅವರುಗಳು ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನದ ಕ್ಷಿಪಣಿಯ ತುಣುಕನ್ನು ಪ್ರದರ್ಶಿಸುವ ಮೂಲಕ…

1 70 71 72 73 74 194
Translate »