Tag: Mysuru

ಕಾಚಿಗುಡ-ಬೆಂಗಳೂರು ಸಿಟಿ ಎಕ್ಸ್‍ಪ್ರೆಸ್ ಮೈಸೂರಿಗೆ ವಿಸ್ತರಣೆ
ಮೈಸೂರು

ಕಾಚಿಗುಡ-ಬೆಂಗಳೂರು ಸಿಟಿ ಎಕ್ಸ್‍ಪ್ರೆಸ್ ಮೈಸೂರಿಗೆ ವಿಸ್ತರಣೆ

March 1, 2019

ಮೈಸೂರು: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಪ್ರಯ ತ್ನದ ಫಲವಾಗಿ ಮತ್ತೊಂದು ಅತೀ ವೇಗದ ರೈಲು ಮೈಸೂರಿಗೆ ದಕ್ಕಿದಂತಾಗಿದೆ. ಇದು ವರೆಗೂ ಕಾಚಿಗುಡ-ಬೆಂಗ ಳೂರು ಸಿಟಿ ರೈಲ್ವೆ ನಿಲ್ದಾಣ ದವರೆಗೂ ಸಂಚರಿಸುತ್ತಿದ್ದ ಡೈಲಿ ಎಕ್ಸ್‍ಪ್ರೆಸ್ ರೈಲು ಇನ್ನು ಮುಂದೆ ಮೈಸೂರಿನಿಂದ ಸಂಚರಿಸಲಿದೆ. ಪ್ರವಾಸಿ ತಾಣ ಹಾಗೂ ಸಾಂಸ್ಕೃತಿಕ ರಾಜಧಾನಿಯೂ ಆದ ಮೈಸೂರಿಗೆ ಪ್ರವಾಸಿಗರು, ಉದ್ಯೋಗಿಗಳು, ವಿದ್ಯಾರ್ಥಿಗಳು, ವಾಣಿಜ್ಯ ವಹಿವಾಟು ನಡೆಸುವವರು ಅಧಿಕ ಸಂಖ್ಯೆಯಲ್ಲಿ ಪ್ರತಿನಿತ್ಯ ಮೈಸೂರು ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಾರೆ. ಇವರಿಗೆ ಅನುಕೂಲ ಕಲ್ಪಿಸಲು ಸಮರ್ಪಕ…

ಬಂಡೀಪುರ `ಕಿಡಿ’ಗೇಡಿ ಬಂಧನ
ಮೈಸೂರು

ಬಂಡೀಪುರ `ಕಿಡಿ’ಗೇಡಿ ಬಂಧನ

March 1, 2019

ಮೈಸೂರು: ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬೆಂಕಿ ಇಟ್ಟಿದ್ದ ಪ್ರಮುಖ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಕಳ್ಳೀಪುರ ನಿವಾಸಿ ನಾಗಲಿಂಗೇಗೌಡ ಅವರ ಪುತ್ರ ಅರುಣ್ ಕುಮಾರ್‍ನನ್ನು ಬಂಧಿಸಿ, ನ್ಯಾಯಾ ಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಫೆ.22ರಂದು ರಾತ್ರಿ ಬೆಂಕಿ ಇಟ್ಟು ತಲೆಮರೆಸಿಕೊಂಡಿದ್ದ ಈತ, ಸಮೀಪದ ಗ್ರಾಮವೊಂದರ ಸಂಬಂಧಿಕರ ಮನೆಯಲ್ಲಿದ್ದ. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಬೆಳಿಗ್ಗೆ ಆರೋಪಿಯನ್ನು ಬಂಧಿಸಿದ್ದಾರೆ. ಈತ ಗೋಪಾಲಸ್ವಾಮಿ ಬೆಟ್ಟದ…

ಹೆಚ್.ಡಿ.ಕುಮಾರಸ್ವಾಮಿ ಕೇವಲ  ಮೂರ್ನಾಲ್ಕು ಜಿಲ್ಲೆಗೆ ಮುಖ್ಯಮಂತ್ರಿ
ಮೈಸೂರು

ಹೆಚ್.ಡಿ.ಕುಮಾರಸ್ವಾಮಿ ಕೇವಲ ಮೂರ್ನಾಲ್ಕು ಜಿಲ್ಲೆಗೆ ಮುಖ್ಯಮಂತ್ರಿ

March 1, 2019

ಮೈಸೂರು: ರಾಜ್ಯ ದಲ್ಲಿ ಸಮ್ಮಿಶ್ರ ಸರ್ಕಾರ ಇದ್ದು ಇಲ್ಲದಂ ತಿದ್ದು, ಹೆಚ್.ಡಿ.ಕುಮಾರಸ್ವಾಮಿ ಕೇವಲ ಮೂರ್ನಾಲ್ಕು ಜಿಲ್ಲೆಗೆ ಮಾತ್ರ ಮುಖ್ಯ ಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಶಾಸಕ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ಮೈಸೂರಿನ ಜೆ.ಕೆ.ಮೈದಾನದ ಮೈಸೂರು ಮೆಡಿಕಲ್ ಕಾಲೇಜು ಅಮೃತೋತ್ಸವ ಭವನದಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಸಂವಾದ `ಮೇರಾ ಬೂತ್ ಸಬ್ ಸೇ ಮಜಬೂತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಸಮ್ಮಿಶ್ರ ಸರ್ಕಾರದಿಂದ ಅಭಿವೃದ್ಧಿ ಸಾಧÀ್ಯವಿಲ್ಲ. ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಜನತೆಗೆ ತಿಳಿಯದಾಗಿದೆ….

ಬಂಡೀಪುರಕ್ಕೆ ಭಾರೀ ಹಾನಿಯೇನೂ ಆಗಿಲ್ಲ
ಮೈಸೂರು

ಬಂಡೀಪುರಕ್ಕೆ ಭಾರೀ ಹಾನಿಯೇನೂ ಆಗಿಲ್ಲ

March 1, 2019

ಮೈಸೂರು: ಕಿಡಿ ಗೇಡಿಗಳು ಹಚ್ಚಿದ ಕಿಡಿಗೆ ಹೊತ್ತಿ ಉರಿದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸ್ಥಿತಿ ಸುಧಾರಿಸುತ್ತಿದೆ. ಆದರೆ ವನ್ಯಜೀವಿಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಬಂಡೀಪುರ ಹುಲಿ ಯೋಜನೆ ನೂತನ ನಿರ್ದೇಶಕ ಟಿ.ಬಾಲಚಂದ್ರ ಸ್ಪಷ್ಟಪಡಿಸಿದ್ದಾರೆ. ಬೆಂಕಿ ದುರ್ಘಟನೆಯಿಂದಾಗಿ ಈ ಹಿಂದೆ ಪ್ರಭಾರ ನಿರ್ದೇಶಕರಾಗಿದ್ದ ಅಂಬಾಡಿ ಮಾದವ್ ಅವರ ಸ್ಥಾನಕ್ಕೆ ಬಂಡೀಪುರ ಹುಲಿ ಯೋಜನೆಗೆ ಪೂರ್ಣ ಪ್ರಮಾಣದ ನಿರ್ದೇಶಕರನ್ನಾಗಿ ಸರ್ಕಾರ ಟಿ.ಬಾಲಚಂದ್ರ ಅವರನ್ನು ನಿಯೋಜಿಸಿದೆ. ಅಧಿಕಾರ ಸ್ವೀಕರಿಸಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ ಹೊಸ ನಿರ್ದೇಶಕರು, ಬೇಸಿಗೆ ಇನ್ನೂ 70 ದಿನ…

ಓಲಾ, ರ್ಯಾಪಿಡೋ ಬಾಡಿಗೆ ಬೈಕ್‍ಗಳಿಗೆ ಆರ್‍ಟಿಓ ಕಡಿವಾಣ
ಮೈಸೂರು

ಓಲಾ, ರ್ಯಾಪಿಡೋ ಬಾಡಿಗೆ ಬೈಕ್‍ಗಳಿಗೆ ಆರ್‍ಟಿಓ ಕಡಿವಾಣ

March 1, 2019

ಮೈಸೂರು: ಸಾರಿಗೆ ಇಲಾಖೆ ಅಧಿಕಾರಿಗಳು ಓಲಾ ಮತ್ತು ರ್ಯಾಪಿಡೋ ಹೆಸರಿನಲ್ಲಿ ಬಾಡಿಗೆಗೆ ಓಡಿಸಲಾಗುತ್ತಿದ್ದ ಬಿಳಿ ಬಣ್ಣದ ಸಂಖ್ಯಾ ಫಲಕ ಹೊಂದಿದ್ದ ಬೈಕ್‍ಗಳ ವಿರುದ್ಧ ಕಾರ್ಯಾ ಚರಣೆ ನಡೆಸಿ, ವಶಪಡಿಸಿಕೊಂಡಿದ್ದಾರೆ. ಅವರಿಗೆ 2 ಸಾವಿರ ರೂ.ವರೆಗೂ ದಂಡ ವಿಧಿಸಿದ್ದಾರೆ. ರಾಜ್ಯ ಸಾರಿಗೆ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಇಂತಹ ಬೈಕ್ ಟ್ಯಾಕ್ಸಿಗಳ ವಿರುದ್ಧ ಮೈಸೂರು ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಉಪ ಸಾರಿಗೆ ಆಯುಕ್ತ (ಪಶ್ಚಿಮ)ರು ಪತ್ರಿಕಾ ಪ್ರಕಟಣೆ ನೀಡಿ, ಓಲಾ ಮತ್ತು ರ್ಯಾಪಿಡೋ ಕಂಪನಿಗಳು ನಡೆಸು…

ಅಭಿನಂದನ್ ವೀಡಿಯೋ ಅಳಿಸಿ ಹಾಕುವಂತೆ ಯೂ-ಟ್ಯೂಬ್‍ಗೆ ಕೇಂದ್ರ ಸೂಚನೆ
ಮೈಸೂರು

ಅಭಿನಂದನ್ ವೀಡಿಯೋ ಅಳಿಸಿ ಹಾಕುವಂತೆ ಯೂ-ಟ್ಯೂಬ್‍ಗೆ ಕೇಂದ್ರ ಸೂಚನೆ

March 1, 2019

ಮೈಸೂರು: ಭಾರತೀಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತ ಮಾನ್ ಅವರಿಗೆ ಸಂಬಂಧಪಟ್ಟಂತೆ ಪಾಕಿಸ್ತಾನದಿಂದ ವೈರಲ್ ಮಾಡ ಲ್ಪಟ್ಟ 11 ವೀಡಿಯೋ ತುಣುಕುಗಳನ್ನು ಅಳಿಸಿಹಾಕುವಂತೆ ಯೂ-ಟ್ಯೂಬ್‍ಗೆ ಕೇಂದ್ರದ ಮಾಹಿತಿ ತಂತ್ರಜ್ಞಾನ (ಐಟಿ) ಇಲಾಖೆ ಸೂಚಿಸಿದೆ. ವಶಕ್ಕೆ ಪಡೆದ ಸೇನಾ ಯೋಧನ ಮೇಲೆ ಹಲ್ಲೆ ನಡೆಸುವುದು ಹಾಗೂ ಅವರನ್ನು ವಿಚಾರಣೆ ನಡೆಸುವುದು ಜಿನೀವಾ ಒಪ್ಪಂದಕ್ಕೆ ವಿರುದ್ಧ ವಾಗಿರುವ ಕಾರಣ ವೀಡಿಯೋ ತುಣುಕುಗಳನ್ನು ಅಳಿಸಿಹಾಕಬೇ ಕೆಂದು ಸೂಚಿಸಲಾಗಿದೆ. ಬುಧವಾರ ಭಾರತದ ಮಿಗ್-21 ಜೆಟ್ ವಿಮಾನ ಪತನಗೊಂಡ ನಂತರ ಅದರ ಪೈಲಟ್…

ಅಲ್ಪ ಅವಧಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ದಾಖಲೆ ಅಭಿವೃದ್ಧಿ
ಮೈಸೂರು

ಅಲ್ಪ ಅವಧಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ದಾಖಲೆ ಅಭಿವೃದ್ಧಿ

March 1, 2019

ಮೈಸೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಕೇವಲ 9 ತಿಂಗಳಾ ಗಿದೆ. ಈ ಅಲ್ಪ ಅವಧಿಯಲ್ಲೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭಾರೀ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತು ವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನಾಳೆ ಸಂಜೆ ಮೈಸೂರು ಮಹಾ ರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸ ಲಾಗಿರುವ ನಾಗರಿಕ ಸನ್ಮಾನ ಸಮಾರಂಭಕ್ಕೆ ನಿರ್ಮಾಣ ಮಾಡಲಾಗುತ್ತಿರುವ ವೇದಿಕೆ ಹಾಗೂ ಆಸನ ವ್ಯವಸ್ಥೆಗಳ ಪರಿಶೀಲನೆ ನಡೆ ಸಿದ…

ಬೂತ್ ಮಟ್ಟದ ಕಾರ್ಯಕರ್ತರು ತಲಾ 10 ಕುಟುಂಬ  ಸಂಪರ್ಕಿಸಿ, ಬಿಜೆಪಿ ಬೆಂಬಲಿಸಲು ಮನವೊಲಿಸಿ
ಮೈಸೂರು

ಬೂತ್ ಮಟ್ಟದ ಕಾರ್ಯಕರ್ತರು ತಲಾ 10 ಕುಟುಂಬ ಸಂಪರ್ಕಿಸಿ, ಬಿಜೆಪಿ ಬೆಂಬಲಿಸಲು ಮನವೊಲಿಸಿ

March 1, 2019

ಮೈಸೂರು: ಮುಂಬರುವ ಲೋಕ ಸಭಾ ಚುನಾವಣೆ ಬಿಜೆಪಿ ಕಾರ್ಯಕರ್ತರಿಗೆ ಅಗ್ನಿ ಪರೀಕ್ಷೆಯಂತಿದ್ದು, ಇಂದಿನಿಂದಲೇ ಬೂತ್‍ಮಟ್ಟದ ಕಾರ್ಯಕರ್ತರು ತಲಾ 10 ಕುಟುಂಬಗಳನ್ನು ಸಂಪರ್ಕಿಸಿ, ಮತದಾರರ ಮನ ಗೆಲ್ಲುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶದ 543 ಲೋಕಸಭಾ ಕ್ಷೇತ್ರ ವ್ಯಾಪ್ತಿಯ 4200 ವಿಧಾನ ಸಭಾ ಕ್ಷೇತ್ರದಲ್ಲಿ ಬೂತ್‍ಮಟ್ಟದಲ್ಲಿ ಕಾರ್ಯನಿರ್ವ ಹಿಸುತ್ತಿರುವ ಪಕ್ಷದ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಂವಾದ `ಮೇರಾ ಬೂತ್ ಸಬ್ ಸೇ ಮಜ ಬೂತ್’ದಲ್ಲಿ ಮಾತನಾಡಿದ ಅವರು, ಮುಂದಿನ 60 ದಿನದಲ್ಲಿ…

ಜಯದೇವ ಹೃದ್ರೋಗ ಘಟಕಕ್ಕೆ ಕೆ.ಆರ್.ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಓಪಿಡಿ ಸ್ಥಳಾಂತರ
ಮೈಸೂರು

ಜಯದೇವ ಹೃದ್ರೋಗ ಘಟಕಕ್ಕೆ ಕೆ.ಆರ್.ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಓಪಿಡಿ ಸ್ಥಳಾಂತರ

March 1, 2019

ಮೈಸೂರು: ಮೈಸೂ ರಿನ ಕೆ.ಆರ್.ಆಸ್ಪತ್ರೆಯ ಸೂಪರ್ ಸ್ಪೆಷಾ ಲಿಟಿ ವಿಭಾಗಗಳ ಹೊರ ರೋಗಿಗಳ (ಓಪಿಡಿ) ಚಿಕಿತ್ಸಾ ಸೌಲಭ್ಯಗಳನ್ನು ಆಸ್ಪತ್ರೆ ಆವರಣದ ಶ್ರೀ ಜಯದೇವ ಹೃದ್ರೋಗ ಘಟಕದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಮತ್ತು ಡೈರ ಕ್ಟರ್ ಡಾ.ಪಿ.ಸಿ.ನಂಜರಾಜ್ ಅವರು ಸ್ಥಳಾಂ ತರಗೊಂಡಿರುವ ಹೊಸ ಘಟಕವನ್ನು ಭಾನುವಾರ ಉದ್ಘಾಟಿಸಿದರು. ಕೆ.ಆರ್. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎಂ. ಶ್ರೀನಿವಾಸ, ಸ್ಥಾನಿಕ ವೈದ್ಯಾಧಿಕಾರಿ ಡಾ. ರಾಜೇಶ, ವಿವಿಧ ವಿಭಾಗಗಳ ಮುಖ್ಯಸ್ಥ ರಾದ ಡಾ….

ಪಡುವಾರಹಳ್ಳಿಯಲ್ಲಿ ಶಾಸಕ ನಾಗೇಂದ್ರ ಪಾದಯಾತ್ರೆ
ಮೈಸೂರು

ಪಡುವಾರಹಳ್ಳಿಯಲ್ಲಿ ಶಾಸಕ ನಾಗೇಂದ್ರ ಪಾದಯಾತ್ರೆ

March 1, 2019

ಮೈಸೂರು: ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಇಂದು ಬೆಳಿಗ್ಗೆ ಪಡುವಾರಹಳ್ಳಿಯಲ್ಲಿ ಪಾದಯಾತ್ರೆ ನಡೆಸಿ ಸಾರ್ವ ಜನಿಕರ ಕುಂದುಕೊರತೆಗಳನ್ನು ಆಲಿಸಿದರು. ಮಾರ್ಚ್ 10 ಮತ್ತು 11ರಂದು ಜೋಡಿ ಮಾರಮ್ಮ ಗ್ರಾಮದೇವತೆ ಹಬ್ಬ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಶಾಸಕರು, ಮೀಟರ್ ಅಳವಡಿಸಿ, ಪಡೆದಿರುವ ಹಣಕ್ಕೆ ರಶೀದಿ ನೀಡುವಂತೆ ವಾಲ್ವ್‍ಮನ್‍ಗೆ ತಾಕೀತು ಮಾಡಿದರು. ಶಿಥಿಲಗೊಂಡು ನೆಲಕ್ಕುರುಳುವ ಸ್ಥಿತಿ ಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಹೊಸ ಕಂಬಗಳನ್ನು ಅಳವಡಿಸಬೇಕು. ತೊಂದರೆ…

1 71 72 73 74 75 194
Translate »