ಓಲಾ, ರ್ಯಾಪಿಡೋ ಬಾಡಿಗೆ ಬೈಕ್‍ಗಳಿಗೆ ಆರ್‍ಟಿಓ ಕಡಿವಾಣ
ಮೈಸೂರು

ಓಲಾ, ರ್ಯಾಪಿಡೋ ಬಾಡಿಗೆ ಬೈಕ್‍ಗಳಿಗೆ ಆರ್‍ಟಿಓ ಕಡಿವಾಣ

March 1, 2019

ಮೈಸೂರು: ಸಾರಿಗೆ ಇಲಾಖೆ ಅಧಿಕಾರಿಗಳು ಓಲಾ ಮತ್ತು ರ್ಯಾಪಿಡೋ ಹೆಸರಿನಲ್ಲಿ ಬಾಡಿಗೆಗೆ ಓಡಿಸಲಾಗುತ್ತಿದ್ದ ಬಿಳಿ ಬಣ್ಣದ ಸಂಖ್ಯಾ ಫಲಕ ಹೊಂದಿದ್ದ ಬೈಕ್‍ಗಳ ವಿರುದ್ಧ ಕಾರ್ಯಾ ಚರಣೆ ನಡೆಸಿ, ವಶಪಡಿಸಿಕೊಂಡಿದ್ದಾರೆ.

ಅವರಿಗೆ 2 ಸಾವಿರ ರೂ.ವರೆಗೂ ದಂಡ ವಿಧಿಸಿದ್ದಾರೆ. ರಾಜ್ಯ ಸಾರಿಗೆ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಇಂತಹ ಬೈಕ್ ಟ್ಯಾಕ್ಸಿಗಳ ವಿರುದ್ಧ ಮೈಸೂರು ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಉಪ ಸಾರಿಗೆ ಆಯುಕ್ತ (ಪಶ್ಚಿಮ)ರು ಪತ್ರಿಕಾ ಪ್ರಕಟಣೆ ನೀಡಿ, ಓಲಾ ಮತ್ತು ರ್ಯಾಪಿಡೋ ಕಂಪನಿಗಳು ನಡೆಸು ತ್ತಿರುವ ಬಿಳಿ ಬಣ್ಣದ ಸಂಖ್ಯಾ ಫಲಕ ಹೊಂದಿರುವ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ಓಡಿಸಲಾಗುತ್ತಿದೆ. ಇದು ಅಕ್ರಮ ಹಾಗೂ ಮೋಟಾರು ಕಾಯಿದೆ ಪ್ರಕಾರ ಅನುಮತಿ ಇರುವುದಿಲ್ಲ. ಅಂತಹ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಲಾಗುತ್ತಿದೆ. ಇದುವರೆಗೆ ಸಾಕಷ್ಟು ಎಚ್ಚರಿಕೆ ನೀಡಿ, ಬಳಿಕ ಬೈಕ್ ಟ್ಯಾಕ್ಸಿಗಳನ್ನು ವಶ ಪಡಿಸಿಕೊಳ್ಳಲಾಗುತ್ತಿದೆ ಎಂದರು.

`ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಆರ್‍ಟಿಓ (ಪಶ್ಚಿಮ) ಅಧಿಕಾರಿ ಪ್ರಭು ಸ್ವಾಮಿ, ಬೈಕ್ ಟ್ಯಾಕ್ಸಿ ಚಾಲಕರು ಯಾವುದೇ ಅಧಿಕೃತ ಅನುಮತಿ ಪಡೆ ದಿಲ್ಲ. ಬೈಕ್ ಸೇವೆಗಳ ಬಗ್ಗೆ ಆರ್‍ಟಿಓನಲ್ಲಿ ನೋಂದಾ ವಣಿ ಮಾಡಿಸಿಲ್ಲ. ಅವರ ಸೇವಾ ಪ್ರೊವೈಡರ್ ಗಳೊಂದಿಗೆ ಮಾತ್ರ ನೋಂದಾಯಿಸಿ ಕೊಂಡಿದ್ದಾರೆ. ಇದು ಅಕ್ರಮ ಸೇವೆ ಆಗ ಲಿದೆ. ಅಲ್ಲದೆ ಪ್ರಯಾಣಿಕರ ಸುರಕ್ಷತೆ ದೃಷ್ಟಿ ಯಿಂದಲೂ ಇದು ಸರಿಯಲ್ಲ. ಹಾಗಾಗಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

Translate »