ಮೈಸೂರು: ಭಾರತೀಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತ ಮಾನ್ ಅವರಿಗೆ ಸಂಬಂಧಪಟ್ಟಂತೆ ಪಾಕಿಸ್ತಾನದಿಂದ ವೈರಲ್ ಮಾಡ ಲ್ಪಟ್ಟ 11 ವೀಡಿಯೋ ತುಣುಕುಗಳನ್ನು ಅಳಿಸಿಹಾಕುವಂತೆ ಯೂ-ಟ್ಯೂಬ್‍ಗೆ ಕೇಂದ್ರದ ಮಾಹಿತಿ ತಂತ್ರಜ್ಞಾನ (ಐಟಿ) ಇಲಾಖೆ ಸೂಚಿಸಿದೆ. ವಶಕ್ಕೆ ಪಡೆದ ಸೇನಾ ಯೋಧನ ಮೇಲೆ ಹಲ್ಲೆ ನಡೆಸುವುದು ಹಾಗೂ ಅವರನ್ನು ವಿಚಾರಣೆ ನಡೆಸುವುದು ಜಿನೀವಾ ಒಪ್ಪಂದಕ್ಕೆ ವಿರುದ್ಧ ವಾಗಿರುವ ಕಾರಣ ವೀಡಿಯೋ ತುಣುಕುಗಳನ್ನು ಅಳಿಸಿಹಾಕಬೇ ಕೆಂದು ಸೂಚಿಸಲಾಗಿದೆ. ಬುಧವಾರ ಭಾರತದ ಮಿಗ್-21 ಜೆಟ್ ವಿಮಾನ ಪತನಗೊಂಡ ನಂತರ ಅದರ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಅವರ ಮೇಲೆ ಹಲ್ಲೆ ನಡೆಸುತ್ತಿರುವುದು, ರಕ್ತಸಿಕ್ತವಾದ ಮುಖದೊಂದಿಗಿರುವ ಅವರನ್ನು ಕರೆದೊಯ್ಯುತ್ತಿರುವುದು ಹಾಗೂ ಅವರನ್ನು ಪಾಕ್ ಅಧಿಕಾರಿ ವಿಚಾರಣೆ ನಡೆಸುತ್ತಿರು ವುದು ಸೇರಿದಂತೆ 11 ವೀಡಿಯೋ ತುಣುಕುಗಳನ್ನು ಪಾಕಿಸ್ತಾನ ವೈರಲ್ ಮಾಡಿದ್ದು, ಅವು ಯೂ-ಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಆಗಿರುವ ಈ ವೀಡಿಯೋ ತುಣುಕುಗಳನ್ನು ಈಗಾಗಲೇ ಅಳಿಸಿ ಹಾಕಲಾಗಿದೆ.