ಅಲ್ಪ ಅವಧಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ದಾಖಲೆ ಅಭಿವೃದ್ಧಿ
ಮೈಸೂರು

ಅಲ್ಪ ಅವಧಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ದಾಖಲೆ ಅಭಿವೃದ್ಧಿ

March 1, 2019

ಮೈಸೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಕೇವಲ 9 ತಿಂಗಳಾ ಗಿದೆ. ಈ ಅಲ್ಪ ಅವಧಿಯಲ್ಲೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭಾರೀ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತು ವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನಾಳೆ ಸಂಜೆ ಮೈಸೂರು ಮಹಾ ರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸ ಲಾಗಿರುವ ನಾಗರಿಕ ಸನ್ಮಾನ ಸಮಾರಂಭಕ್ಕೆ ನಿರ್ಮಾಣ ಮಾಡಲಾಗುತ್ತಿರುವ ವೇದಿಕೆ ಹಾಗೂ ಆಸನ ವ್ಯವಸ್ಥೆಗಳ ಪರಿಶೀಲನೆ ನಡೆ ಸಿದ ನಂತರ ಮಾಧ್ಯಮದವರೊಂದಿಗೆ ಮಾತ ನಾಡಿದರು. ಮುಖ್ಯಮಂತ್ರಿಯಾಗಿ ಅಧಿ ಕಾರ ಸ್ವೀಕರಿಸಿದ ದಿನದಿಂದಲೇ ರೈತರ ಬದುಕು ಹಸನಾಗಿಸಲು ಪಣ ತೊಟ್ಟ ಕುಮಾರ ಸ್ವಾಮಿ ಅವರು, ಕೃಷಿಗೆ ಹೆಚ್ಚು ಒತ್ತು ನೀಡಿ ದ್ದಾರೆ. ಎರಡೂ ಬಜೆಟ್‍ನಲ್ಲೂ ಕೃಷಿಗೆ ಸಿಂಹಪಾಲು ಸಂಪನ್ಮೂಲ ಕಾಯ್ದಿರಿಸಿ ದ್ದಾರೆ. ಕೃಷಿ ಮಾರುಕಟ್ಟೆಗಳ ಸಬಲೀಕರಣ, ನೀರಾವರಿಗೆ ಆದ್ಯತೆ ನೀಡಿದ್ದಾರೆ. ಏತ ನೀರಾವರಿ ಮೂಲಕ ಕೆರೆ-ಕಟ್ಟೆ ತುಂಬಿ ಸಲು ಶಪಥವನ್ನೇ ಮಾಡಿದ್ದಾರೆ ಎಂದರು.

ಹೈನುಗಾರಿಕೆಯಲ್ಲಿ ರೈತರು ಸ್ವಾವ ಲಂಬನೆ ಸಾಧಿಸಲಿ ಎಂಬ ಉದ್ದೇಶದಿಂದ ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು 6 ರೂ.ಗೆ ಹೆಚ್ಚಿಸಿದ್ದಾರೆ. ಈಗ ಮೈಸೂರಿನಲ್ಲಿ ಮೆಗಾ ಡೈರಿ ಸ್ಥಾಪಿಸಿದ್ದು, ಅದಕ್ಕೆ ನಾಳೆ ಚಾಲನೆ ಕೂಡ ನೀಡಲಿದ್ದಾರೆ.
ಮಹಿಳೆಯರಿಗೆ ಸಾಲ ಸೌಲಭ್ಯ ನೀಡುವು ದರೊಂದಿಗೆ ಸಾಕಷ್ಟು ಸಹಾಯ ಧನ ವನ್ನು ನೀಡಿ ಮಹಿಳಾ ಸಬಲತೆಗೆ ಕ್ರಮ ಕೈಗೊಂಡಿದ್ದಾರೆ. ವೃದ್ಧಾಪ್ಯವೇತನವನ್ನು ಸಾವಿರ ರೂ.ಗೆ ಏರಿಕೆ ಮಾಡಿ ಇಳಿ ವಯ ಸ್ಸಿನಲ್ಲಿರುವ ಜೀವಗಳಿಗೆ ನೆಮ್ಮದಿ ನೀಡಿ ದ್ದಾರೆ. ಗರ್ಭಿಣಿಯರಿಗೆ 6 ತಿಂಗಳ ಕಾಲ 12 ಸಾವಿರ ರೂ.ಗಳನ್ನು ನೀಡುವುದರೊಂ ದಿಗೆ ಅವರ ಆರೋಗ್ಯ ಮತ್ತು ಪೌಷ್ಠಿಕತೆ ಕಾಪಾಡಿಕೊಳ್ಳಲು ನೆರವಾಗಿದ್ದಾರೆ. ಹೆಣ್ಣು ಮಕ್ಕಳಿಗೆ ಪದವಿಯವರೆಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ನಿರುದ್ಯೋಗ ನಿವಾ ರಣೆಗೆ ಆದ್ಯತೆ ನೀಡಿದ್ದಾರೆ ಎಂದು ಜಿಟಿಡಿ ತಿಳಿಸಿದರು. ಬೀದಿ ಬದಿ ವ್ಯಾಪಾರಿಗಳಿಗೆ ಲೇವಾದೇವಿದಾರರ ಮುಷ್ಟಿಯಿಂದ ಮುಕ್ತಿ ಗೊಳಿಸಲು ಬಡವರ ಬಂಧು ಯೋಜನೆ ಮೂಲಕ ಪ್ರತಿ ನಿತ್ಯ ಸಾಲ ಸೌಲಭ್ಯ ಕಲ್ಪಿಸಿದ್ದಾರೆ. ಜೊತೆಗೆ ಬಡವರಿಗೆ ಕಾಯಕ ಯೋಗಿ ಯೋಜನೆ ಮೂಲಕ ಉದ್ಯೋಗ ಅವಕಾಶ ಕಲ್ಪಿಸಿದ್ದಾರೆ. ನದಿ ಮೂಲಗಳಿಂದ ಪ್ರತೀ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಂಡಿದ್ದಾರೆ. ಇದೊಂದು ಐತಿಹಾಸಿಕ ನಿರ್ಧಾರವೇ ಆಗಿದೆ. ಈ ನಿಟ್ಟಿನಲ್ಲಿ ಕೆಆರ್‍ಎಸ್ ಹಿನ್ನೀರಿನಿಂದ ಹಳೇ ಉಂಡವಾಡಿ ಕುಡಿಯುವ ನೀರಿನ 545 ಕೋಟಿ ರೂ. ವೆಚ್ಚದ ಯೋಜನೆಗೆ ಅನು ಮೋದನೆ ನೀಡಿದ್ದಾರೆ. ನಗರೋತ್ಥಾನ ಯೋಜನೆಯಡಿ ಮೈಸೂರು ಮೂಲ ಸೌಕರ್ಯ ಹಾಗೂ ಅಭಿವೃದ್ಧಿಗೆ 150 ಕೋಟಿ ರೂ. ಹಣ ನೀಡಿದ್ದಾರೆ. ಬಡ ವರು ಮತ್ತು ಮಧ್ಯಮ ವರ್ಗದವರ ಆರೋಗ್ಯ ಸೇವೆಗಾಗಿ ಉಚಿತ ಯೋಜನೆ ಯನ್ನು ಪ್ರಕಟಿಸಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಿಂದೆಂದೂ ನೀಡದಿರು ವಷ್ಟು ಅನುದಾನವನ್ನು ಕಲ್ಪಿಸಿದ್ದಾರೆ. ಮೈಸೂರು, ಬಾದಾಮಿ, ಐಹೊಳೆ, ಪಟ್ಟದ ಕಲ್ಲು ಹೀಗೆ ಹಲವು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಬೇಲೂರು ಸೇರಿದಂತೆ ರಾಜ್ಯದ 7 ಪ್ರವಾಸಿ ತಾಣಗಳಲ್ಲಿ ಸ್ಟಾರ್ ಹೋಟೆಲ್‍ಗಳ ನಿರ್ಮಾ ಣಕ್ಕೆ ಅನುಮತಿ ನೀಡಿದ್ದಾರೆ. ಮೈಸೂರಲ್ಲಿ ರೇಷ್ಮೆ ಮಾರುಕಟ್ಟೆ ಆರಂಭಿಸಿ ರೇಷ್ಮೆ ಬೆಳೆಗಾರ ರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.

ಸಣ್ಣ ನೀರಾವರಿ ಮೂಲಕ ರಾಜ್ಯದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ಅಂತ ರ್ಜಲ ಮಟ್ಟವನ್ನು ಸುಧಾರಿಸಲು ಭಾರೀ ಯೋಜನೆಯನ್ನೇ ಪ್ರಕಟಿಸಿದ್ದಾರೆ. ಇಸ್ರೇಲ್ ಮಾದರಿ ಕೃಷಿಗೆ ಪ್ರೋತ್ಸಾಹ ನೀಡಿದ್ದು, ಆ ಮೂಲಕ ರೈತರ ಕೃಷಿ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸುವ ನಿರ್ಧಾರ ವನ್ನು ಕೈಗೊಂಡಿದ್ದಾರೆ. ಬ್ರಾಹ್ಮಣ ಅಭಿ ವೃದ್ಧಿ ಮಂಡಳಿಯನ್ನು ಸ್ಥಾಪಿಸಿ, ಅದಕ್ಕೆ ಈಗಾಗಲೇ 25 ಕೋಟಿ ರೂ. ಒದಗಿಸಿ ದ್ದಾರೆ. ಹೀಗೆ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ವನ್ನೇ ಮುಖ್ಯಮಂತ್ರಿ ಕುಮಾರಸ್ವಾಮಿ ಆರಂಭಿಸಿದ್ದಾರೆ ಎಂದು ಜಿಟಿಡಿ ತಿಳಿಸಿದ್ದಾರೆ.

Translate »