ಬೂತ್ ಮಟ್ಟದ ಕಾರ್ಯಕರ್ತರು ತಲಾ 10 ಕುಟುಂಬ  ಸಂಪರ್ಕಿಸಿ, ಬಿಜೆಪಿ ಬೆಂಬಲಿಸಲು ಮನವೊಲಿಸಿ
ಮೈಸೂರು

ಬೂತ್ ಮಟ್ಟದ ಕಾರ್ಯಕರ್ತರು ತಲಾ 10 ಕುಟುಂಬ ಸಂಪರ್ಕಿಸಿ, ಬಿಜೆಪಿ ಬೆಂಬಲಿಸಲು ಮನವೊಲಿಸಿ

March 1, 2019

ಮೈಸೂರು: ಮುಂಬರುವ ಲೋಕ ಸಭಾ ಚುನಾವಣೆ ಬಿಜೆಪಿ ಕಾರ್ಯಕರ್ತರಿಗೆ ಅಗ್ನಿ ಪರೀಕ್ಷೆಯಂತಿದ್ದು, ಇಂದಿನಿಂದಲೇ ಬೂತ್‍ಮಟ್ಟದ ಕಾರ್ಯಕರ್ತರು ತಲಾ 10 ಕುಟುಂಬಗಳನ್ನು ಸಂಪರ್ಕಿಸಿ, ಮತದಾರರ ಮನ ಗೆಲ್ಲುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶದ 543 ಲೋಕಸಭಾ ಕ್ಷೇತ್ರ ವ್ಯಾಪ್ತಿಯ 4200 ವಿಧಾನ ಸಭಾ ಕ್ಷೇತ್ರದಲ್ಲಿ ಬೂತ್‍ಮಟ್ಟದಲ್ಲಿ ಕಾರ್ಯನಿರ್ವ ಹಿಸುತ್ತಿರುವ ಪಕ್ಷದ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಂವಾದ `ಮೇರಾ ಬೂತ್ ಸಬ್ ಸೇ ಮಜ ಬೂತ್’ದಲ್ಲಿ ಮಾತನಾಡಿದ ಅವರು, ಮುಂದಿನ 60 ದಿನದಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಇದು ಪಕ್ಷದ ಬೂತ್‍ಮಟ್ಟದ ಕಾರ್ಯಕರ್ತರಿಗೆ ಸವಾ ಲಿನ ಸಮಯವಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಎದು ರಾಗುವಂತೆ ಪಕ್ಷದ ಕಾರ್ಯಕರ್ತರು ಚುನಾವಣೆ ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ತರಗತಿಯಲ್ಲಿ ವರ್ಷವಿಡೀ ಅಧ್ಯಯನ ಮಾಡಿದರೂ ಪರೀಕ್ಷೆಯ ಕೊನೆ ದಿನಗಳಲ್ಲಿ ಹೆಚ್ಚಿನ ಶ್ರಮ ಹಾಕುವಂತೆ ಬೂತ್ ಮಟ್ಟದ ಕಾರ್ಯಕರ್ತರು ಇಂದಿನಿಂದಲೇ ಕಣಕ್ಕಿಳಿ ಯಬೇಕು. ಒಬ್ಬೊಬ್ಬ ಕಾರ್ಯಕರ್ತ ತಲಾ 10 ಮನೆಗಳೊಂದಿಗೆ ಸಂಪರ್ಕ ಸಾಧಿಸಬೇಕು. ಆ ಮೂಲಕ ಅವರ ಹೃದಯವನ್ನು ಗೆಲ್ಲಬೇಕು. ಆಗ ಮಾತ್ರ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದರೊಂದಿಗೆ ಪಕ್ಷ ಸಂಘಟನೆಗೆ ಸಾಧ್ಯವಾಗುತ್ತದೆ ಎಂದರು.

ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಕಾರ್ಯಕರ್ತರದ್ದಾಗಿದೆ. `ಮೇರಾ ಪರಿವಾರ್, ಭಾಜಪ ಪರಿವಾರ್’ ಕಾರ್ಯ ಕ್ರಮವನ್ನು ದೇಶದೆಲ್ಲೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ತಂಡ ಹಮ್ಮಿಕೊಂಡಿದೆ. ಈಗಾ ಗಲೇ ಲಕ್ಷಾಂತರ ಮಂದಿ ಭಾಜಪ ಬಾವುಟವನ್ನು ಮನೆಯ ಮೇಲೆ ಹಾರಿಸಿದ್ದಾರೆ. ಈ ಕಾರ್ಯಕ್ರಮ ಮುಂದುವರೆಯಲಿದೆ. ನಿಮ್ಮ ಮನೆ ಮೇಲೆ, ನಿಮ್ಮ ಬಳಿ ಆಟೋರಿಕ್ಷಾ, ಬೈಕ್ ಇದ್ದರೂ ಅದರ ಮೇಲೆ ಧ್ವಜ ಹಾರಿಸುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

10 ಕುಟುಂಬವನ್ನು ಸಂಪರ್ಕಿಸಿ: ಮಧ್ಯಾಹ್ನ 12.48ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ಆರಂ ಭಿಸಿದ ಪ್ರಧಾನಿ ನರೇಂದ್ರ ಮೋದಿ ಮೊದಲು ಅಗರ್ತ ಲಾದ ಸಂಪರ್ಕ ಪಡೆದರು. ಈ ವೇಳೆ ಅಲ್ಲಿನ ರಜನಿ ಎಂಬುವರು ಮೋದಿ ಅವರನ್ನುದ್ದೇಶಿಸಿ, ಲೋಕಸಭಾ ಚುನಾವಣೆಗೆ ಕೇವಲ ಎರಡು ತಿಂಗಳಿದೆ. ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಬೂತ್ ಮಟ್ಟದ ಕಾರ್ಯಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿ ಯಿದೆ. ಇಂದಿನಿಂದಲೇ ಪಕ್ಷ ಬಲ ಪಡಿಸುವ ಕೆಲಸ ದಲ್ಲಿ ತೊಡಗಿಸಿಕೊಳ್ಳಬೇಕು. ಬೈಕ್ ರ್ಯಾಲಿಯಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಒಬ್ಬೊಬ್ಬರು 10 ಕುಟುಂಬದೊಂದಿಗೆ ಸಂಪರ್ಕ ಸಾಧಿಸಬೇಕು. ಮತದಾರರ ಮನವೊಲಿಸಬೇಕು. ನಮಗೆ ಕಿಚಡಿ ಸರ್ಕಾರದ ಅಗತ್ಯವಿಲ್ಲ. ಬಹುಮತ ಹೊಂದಿರುವ ಸರ್ಕಾರ ಬೇಕು ಎಂಬುದನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಬಳಿಕ ಉತ್ತರ ಪ್ರದೇಶಕ್ಕೆ ಸಂಪರ್ಕ ಪಡೆದ ಮೋದಿ ಅವರು, ಅಲ್ಲಿ ಮುಖಂಡರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಮುಂದೆ ಅನೇಕ ಸವಾಲುಗಳಿವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಹಲವು ಸಮಸ್ಯೆ ಗಳು ಕಾಡುತ್ತಿದ್ದವು. ಅವುಗಳನ್ನು ತೊಡೆದು ಹಾಕಿ ಹೊಸ ವ್ಯವಸ್ಥೆಯೊಂದಿಗೆ ದೇಶ ಕಟ್ಟುವ ಕೆಲಸ ಆರಂ ಭಿಸಿದ್ದೇವೆ. ಮೊದಲು 5 ವರ್ಷ ದೇಶದ ನಿವಾಸಿ ಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಹಾಗೂ ದೇಶದ ಪ್ರಗತಿಗೆ ಆದ್ಯತೆ ನೀಡಲಾಗಿದೆ. ಇನ್ನಷ್ಟು ಅಭಿ ವೃದ್ಧಿ ಸಾಧಿಸಲು ಮತ್ತೊಂದು ಅವಧಿ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಬಾರಿಗೆ ಭಾಜಪ ಸರ್ಕಾರ ದೇಶಕ್ಕೆ ಅವಶ್ಯವಿದೆ ಎಂದು ತಿಳಿಸಿದರು.

ನೀವು ಲಕ್ಷ್ಮೀ ತರ….: ಸಂವಾದದ ಮೂರನೇ ಪ್ರಶ್ನೆ ಯನ್ನು ಜಾರ್ಖಂಡ್ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿರುವ ಜೈಲಕ್ಷ್ಮೀ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ `ನೀವು ಲಕ್ಷ್ಮೀ ತರನೇ’ ಎಂದು ಮುಗುಳ್ನಕ್ಕರು. ಅಲ್ಲದೆ ನಿಮ್ಮ ಹೆಸರಿನಲ್ಲೇ ಲಕ್ಷ್ಮೀ ಇದೆ. ಲಕ್ಷ್ಮೀಗೆ ಕಮಲ ಪ್ರಿಯ ಎಂದರು. ಪ್ರಧಾನಿಯವರ ಈ ಹಾಸ್ಯ ಚಟಾಕಿಗೆ ದೇಶದ ವಿವಿಧೆಡೆ ವಿಡಿಯೋ ಕಾನ್ಫರೆನ್ಸ್‍ಗೆ ಆಗಮಿಸಿದ್ದವರು ನಗೆಗಡಲಲ್ಲಿ ತೇಲಿದರು. ನಂತರ ದೇಶದ ವಿವಿಧ ರಾಜ್ಯಗಳಲ್ಲಿ ಆಯೋಜಿಸಿದ್ದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

Translate »