ಮೈಸೂರು: ಮೈಸೂ ರಿನ ಕೆ.ಆರ್.ಆಸ್ಪತ್ರೆಯ ಸೂಪರ್ ಸ್ಪೆಷಾ ಲಿಟಿ ವಿಭಾಗಗಳ ಹೊರ ರೋಗಿಗಳ (ಓಪಿಡಿ) ಚಿಕಿತ್ಸಾ ಸೌಲಭ್ಯಗಳನ್ನು ಆಸ್ಪತ್ರೆ ಆವರಣದ ಶ್ರೀ ಜಯದೇವ ಹೃದ್ರೋಗ ಘಟಕದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಮತ್ತು ಡೈರ ಕ್ಟರ್ ಡಾ.ಪಿ.ಸಿ.ನಂಜರಾಜ್ ಅವರು ಸ್ಥಳಾಂ ತರಗೊಂಡಿರುವ ಹೊಸ ಘಟಕವನ್ನು ಭಾನುವಾರ ಉದ್ಘಾಟಿಸಿದರು. ಕೆ.ಆರ್. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎಂ. ಶ್ರೀನಿವಾಸ, ಸ್ಥಾನಿಕ ವೈದ್ಯಾಧಿಕಾರಿ ಡಾ. ರಾಜೇಶ, ವಿವಿಧ ವಿಭಾಗಗಳ ಮುಖ್ಯಸ್ಥ ರಾದ ಡಾ. ಎಸ್.ಚಂದ್ರಶೇಖರ್, ಡಾ. ದಿನೇಶ, ಡಾ. ಪ್ರಕಾಶ, ಡಾ. ನಿರಂಜನ್, ಡಾ.ರಾಜೇಶ, ಸೆಕ್ಯೂರಿಟಿ ಸೂಪರ್‍ವೈಸರ್ ಮಹದೇವು ಅವರು ಹೊಸ ಓಪಿಡಿ ಘಟ ಕದ ಉದ್ಘಾಟನೆ ವೇಳೆ ಉಪಸ್ಥಿತರಿದ್ದರು.
ಕಾರ್ಡಿಯಾಲಜಿ, ನೆಫ್ರಾಲಜಿ, ಯೂರಾ ಲಜಿ, ಪ್ಲಾಸ್ಟಿಕ್ ಸರ್ಜರಿ, ಎಂಡೋಕ್ರೈನಾ ಲಜಿ ವಿಭಾಗದ ಹೊರ ರೋಗಿಗಳ ಸೌಲಭ್ಯ ಗಳನ್ನು ಸ್ಥಳಾಂತರಿಸಲಾಗಿದೆ. ಕೆ.ಆರ್. ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿದ್ದ ಜಯ ದೇವ ಹೃದ್ರೋಗ ಘಟಕವನ್ನು ಕೆಆರ್‍ಎಸ್ ರಸ್ತೆಯ ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ಸಂಸ್ಥೆಯ ಸುಸಜ್ಜಿತ ಕಟ್ಟ ಡಕ್ಕೆ ಸ್ಥಳಾಂತರಿಸಿದ ನಂತರ ಈ ಕಟ್ಟಡ ಖಾಲಿ ಉಳಿದಿತ್ತು. ನೆಲ ಮಹಡಿಯಲ್ಲಿ ಓಪಿಡಿ, ಮೊದಲ ಮಹಡಿಯಲ್ಲಿ ಶಸ್ತ್ರ ಚಿಕಿತ್ಸಾ ಕೊಠಡಿ, ಉಳಿದ ಮಹಡಿಗಳಲ್ಲಿ ಐಸಿಯು, ತುರ್ತು ಚಿಕಿತ್ಸಾ ಘಟಕಗಳು ಕಾರ್ಯನಿರ್ವ ಹಿಸಲಿವೆ ಎಂದು ಡಾ. ಎಂ.ಶ್ರೀನಿವಾಸ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.