ಮೈಸೂರು: ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಇಂದು ಬೆಳಿಗ್ಗೆ ಪಡುವಾರಹಳ್ಳಿಯಲ್ಲಿ ಪಾದಯಾತ್ರೆ ನಡೆಸಿ ಸಾರ್ವ ಜನಿಕರ ಕುಂದುಕೊರತೆಗಳನ್ನು ಆಲಿಸಿದರು.
ಮಾರ್ಚ್ 10 ಮತ್ತು 11ರಂದು ಜೋಡಿ ಮಾರಮ್ಮ ಗ್ರಾಮದೇವತೆ ಹಬ್ಬ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಶಾಸಕರು, ಮೀಟರ್ ಅಳವಡಿಸಿ, ಪಡೆದಿರುವ ಹಣಕ್ಕೆ ರಶೀದಿ ನೀಡುವಂತೆ ವಾಲ್ವ್‍ಮನ್‍ಗೆ ತಾಕೀತು ಮಾಡಿದರು. ಶಿಥಿಲಗೊಂಡು ನೆಲಕ್ಕುರುಳುವ ಸ್ಥಿತಿ ಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಹೊಸ ಕಂಬಗಳನ್ನು ಅಳವಡಿಸಬೇಕು. ತೊಂದರೆ ಯಾಗಿರುವ ಕಡೆ ಹೊಸ ಒಳಚರಂಡಿ ಕೊಳವೆ ಅಳವಡಿಸಲು ಕ್ರಿಯಾ ಯೋಜನೆ ತಯಾರಿಸಿದಲ್ಲಿ ಅನುದಾನ ಕೊಡುತ್ತೇನೆ ಎಂದು ಶಾಸಕ ನಾಗೇಂದ್ರ ಅಧಿಕಾರಿಗಳಿಗೆ ತಿಳಿಸಿದರು.
ಮಳೆ ನೀರಿನ ಚರಂಡಿಗಳನ್ನು ಸ್ವಚ್ಛಗೊಳಿಸಿ ಡಿಡಿಟಿ, ಬ್ಲೀಚಿಂಗ್ ಪೌಡರ್ ಹಾಗೂ ಸೊಳ್ಳೆ ನಿಯಂತ್ರಣ ಔಷಧ ಸಿಂಪಡಿಸುವಂತೆ ಸ್ಥಳದಲ್ಲಿದ್ದ ಪಾಲಿಕೆ ಹೆಲ್ತ್ ಇನ್‍ಸ್ಪೆಕ್ಟರ್ ಮುರುಗೇಶ್ ಅವರಿಗೆ ನಿರ್ದೇಶನ ನೀಡಿದರು.
ಶ್ರೀ ಮಹದೇಶ್ವರ ದೇವಸ್ಥಾನ, 6ನೇ ಮೇನ್, 1ನೇ ಕ್ರಾಸ್ ಬಳಿ ಕೆಲ ಪುಂಡ ಹುಡುಗರು ಅಡ್ಡಾ ಡುತ್ತಿರುವುದರಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ ಹಿನ್ನೆಲೆಯಲ್ಲಿ ಬಡಾವಣೆ ಯಲ್ಲಿ ಗಸ್ತು ಹೆಚ್ಚಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳು ವಂತೆ ಜಯಲಕ್ಷ್ಮಿಪುರಂ ಠಾಣೆ ಪೊಲೀಸರಿಗೆ ನಾಗೇಂದ್ರ ಸಲಹೆ ನೀಡಿದರು. ನಗರಪಾಲಿಕೆ ವಲಯ ಆಯುಕ್ತೆ ಪ್ರಿಯದರ್ಶಿನಿ, ಅಭಿವೃದ್ಧಿ ಅಧಿಕಾರಿ ನಳಿನಿ, ವಾಣಿವಿಲಾಸ ವಾಟರ್ ವಕ್ರ್ಸ್ ಎಕ್ಸಿಕ್ಯೂಟಿವ್ ಇಂಜಿ ನಿಯರ್ ಹರೀಶ್, ಇಂಜಿನಿಯರ್‍ಗಳಾದ ಮುದ್ದು ಮಲ್ಲೇಗೌಡ, ಹರ್ಷಿತಾ, ಕಾರ್ಪೊರೇಟರ್ ನಮ್ರತಾ ರಮೇಶ್, ಬಿಜೆಪಿ ಮುಖಂಡರಾದ ಶ್ರೀರಾಮ್, ಮಂಜು, ಚಿಕ್ಕವೆಂಕಟು, ಉದಯ್, ಬಸವರಾಜು, ಪ್ರಕಾಶ್ ಅವರು ಪಾದಯಾತ್ರೆ ವೇಳೆ ಹಾಜರಿದ್ದರು.