Tag: Mysuru

ಹನ್ನೊಂದು ತಿಂಗಳಿಂದ ಸಂಬಳವಿಲ್ಲದೆ  ಶಿಕ್ಷಕರ ಪರಿತಾಪ
ಮೈಸೂರು

ಹನ್ನೊಂದು ತಿಂಗಳಿಂದ ಸಂಬಳವಿಲ್ಲದೆ ಶಿಕ್ಷಕರ ಪರಿತಾಪ

February 22, 2019

ಮೈಸೂರು: ಸಾರ್ವ ಜನಿಕ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತು ಶಿಕ್ಷಕರ ಶೋಷಣೆ ನಡೆಯುತ್ತಿದೆ ಎಂದು ಆರೋಪಿಸಿ ಮೈಸೂರು ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಆಶ್ರಯ ದಲ್ಲಿ ವಿವಿಧ ಸಂಘಟನೆಗಳ ಕಾರ್ಯ ಕರ್ತರು ಗುರುವಾರ ಮೈಸೂರಿನ ಸಾರ್ವ ಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇ ಶಕ (ಡಿಡಿಪಿಐ)ರ ಕಚೇರಿ ಎದುರು ಪ್ರತಿ ಭಟನೆ ನಡೆಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಿಡಿಪಿಐ ಮತ್ತು ಅವರ ಕಚೇರಿಯ ಅಧೀಕ್ಷಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು….

ಪೌರ ಕಾರ್ಮಿಕರ ಸುರಕ್ಷತೆ ಕಡ್ಡಾಯ
ಮೈಸೂರು

ಪೌರ ಕಾರ್ಮಿಕರ ಸುರಕ್ಷತೆ ಕಡ್ಡಾಯ

February 22, 2019

ಮೈಸೂರು: ಜಿಲ್ಲೆ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಸುರಕ್ಷತೆಗಾಗಿ ಹೆಲ್ಮೆಟ್, ಕೈ ಗಳಿಗೆ ಗ್ಲೌಸ್ ಮತ್ತು ಶೂ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಧಿಕಾರಿಗಳು ಮಾಡ ಬೇಕು ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಉಪಾಧ್ಯಕ್ಷ ಎಲ್.ಮುರು ಗನ್ ಇಂದಿಲ್ಲಿ ತಾಕೀತು ಮಾಡಿದರು. ಮೈಸೂರು ಜಿಲ್ಲಾ ಪಂಚಾಯತಿ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಗುರುವಾರ ಮೈಸೂರು ವಿಭಾಗ ಮಟ್ಟದ ಉನ್ನತಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜಾತಿ ನಿಂದನೆ ಪ್ರಕರಣಗಳು ದಾಖಲಾಗಿರುವ ಬಗ್ಗೆ ಹಾಗೂ ಆಯ…

ಅರಮನೆ ಪಂಚಗವಿ ಮಠ ಉಳಿಸಲು ಆಗ್ರಹಿಸಿ ಕರವೇ ಪ್ರತಿಭಟನೆ
ಮೈಸೂರು

ಅರಮನೆ ಪಂಚಗವಿ ಮಠ ಉಳಿಸಲು ಆಗ್ರಹಿಸಿ ಕರವೇ ಪ್ರತಿಭಟನೆ

February 22, 2019

ಮೈಸೂರು: ಅರಮನೆ ಪಂಚಗವಿ ಮಠ ಉಳಿಸಲು ಆಗ್ರಹಿಸಿ ಕರ್ನಾ ಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಗುರುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ನಂಜನಗೂಡು ರಸ್ತೆಯ ಗೌರಿಶಂಕರ ಬಡಾ ವಣೆಯಲ್ಲಿರುವ ನೂರಾರು ಕೋಟಿ ರೂ. ಬೆಲೆ ಬಾಳುವ ಜಮೀನನ್ನು ಕೆಲವರು 5 ರೂ. ಛಾಪಾ ಕಾಗದದಲ್ಲಿ ಹಳೆಯ ದಿನಾಂಕ ನಮೂದಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದಿನ ಮಹಾರಾಜರು ಸರ್ವೆ ನಂ. 160, 161, 162, 163 ಸರ್ಕಾರದ ಆಸ್ತಿಯನ್ನು ಮಠಕ್ಕೆ ದಾನವಾಗಿ ನೀಡಿದ್ದರು….

ಕೆಲವು ಜಿಲ್ಲೆಗಳಲ್ಲಿ ದಲಿತರ  ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಳ
ಮೈಸೂರು

ಕೆಲವು ಜಿಲ್ಲೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಳ

February 22, 2019

ಮೈಸೂರು: ಕೆಲವು ಜಿಲ್ಲೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಿದ್ದು, ್ಲ ಇದನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಉಪಾಧ್ಯಕ್ಷ ಎಲ್.ಮುರುಗನ್ ತಿಳಿಸಿದರು. ಮೈಸೂರು ಜಿಪಂ ಸಭಾಂ ಗಣದಲ್ಲಿ ಗುರುವಾರ ಮೈಸೂರು, ಮಂಡ್ಯ, ಕೊಡಗು, ಚಾಮರಾಜ ನಗರ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವು ದಾಗಿ ತಿಳಿಸಿದರು. ಮೈಸೂರು, ಚಾಮರಾಜನಗರ, ಮಂಡ್ಯ,…

60 ದಿನದಲ್ಲೇ ಭೂಪರಿವರ್ತನೆ
ಮೈಸೂರು

60 ದಿನದಲ್ಲೇ ಭೂಪರಿವರ್ತನೆ

February 21, 2019

ಮನೆಯಲ್ಲೇ ಕುಳಿತು ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿದರೆ ಸಾಕು 200 ರೂ. ಅಫಿಡವಿಟ್, ಮ್ಯುಟೇಶನ್, ಹಲವು ಮಾಲೀಕರಿದ್ದರೆ 11-ಇ ಆನ್‍ಲೈನ್‍ನಲ್ಲಿ ಸಲ್ಲಿಸಿದರೆ ಮುಗಿಯಿತು; ಅಲೆಯಬೇಕಾದ ಅಗತ್ಯವಿಲ್ಲ 60 ದಿನದಲ್ಲಿ ಮನೆ ಬಾಗಿಲಿಗೆ ಆದೇಶ ಬರದಿದ್ದರೂ ಪರಿವರ್ತನೆ ಆಗಿದೆ ಎಂದೇ ಮುಂದಿನ ಪ್ರಕ್ರಿಯೆ ಆರಂಭಿಸಬಹುದು ಬೆಂಗಳೂರು: ಕೃಷಿ ಭೂಮಿ ಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿ ಸಲು ಇನ್ನು ಮುಂದೆ ಅಧಿಕಾರಿಗಳಿಗೆ ಲಂಚ ನೀಡುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಸರ್ಕಾರ ಕೇಳಿದ ಸೂಕ್ತ ದಾಖಲೆಗಳನ್ನು ಆನ್‍ಲೈನ್ ಮೂಲಕ ಸಂಬಂಧಪಟ್ಟ ಇಲಾಖೆಗೆ…

ಬತ್ತಿದ ಕಾರಂಜಿಕೆರೆಗೆ ಶುದ್ಧೀಕರಿಸಿದ ಒಳಚರಂಡಿ ನೀರು
ಮೈಸೂರು

ಬತ್ತಿದ ಕಾರಂಜಿಕೆರೆಗೆ ಶುದ್ಧೀಕರಿಸಿದ ಒಳಚರಂಡಿ ನೀರು

February 21, 2019

ಮೈಸೂರು: ಮೈಸೂರಿನ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕಾರಂಜಿಕೆರೆ ಮಳೆ ಕೊರತೆ ಹಾಗೂ ಬೇಸಿಗೆಯಿಂದ ಬತ್ತಿ ಹೋಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಮುಂದಾಗಿರುವ ಮೃಗಾಲಯ ಪ್ರಾಧಿಕಾರ, ವಿದ್ಯಾರಣ್ಯ ಪುರಂನಲ್ಲಿರುವ ಒಳಚರಂಡಿ ನೀರು ಶುದ್ಧೀಕರಣ ಘಟಕದಿಂದ ಶುದ್ಧೀಕರಿಸಿದ ನೀರನ್ನು ಕೆರೆಗೆ ತುಂಬಿ ಸುವ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಕಳೆದ ಸಾಲಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಕಾರಂಜಿಕೆರೆಯಲ್ಲಿ ಕಡಿಮೆ ನೀರು ಸಂಗ್ರಹ ವಾಗಿತ್ತು. ಬಿಸಿಲ ಬೇಗೆ ಹೆಚ್ಚಾಗಿರುವುದರಿಂದ ಜನವರಿ ಯಿಂದಲೇ ಕಾರಂಜಿಕೆರೆಯಲ್ಲಿ ನೀರಿನ ಪ್ರಮಾಣ ಕುಸಿಯಲಾರಂಭಿಸಿತ್ತು. ಕೆರೆಯಲ್ಲಿ…

ಶಾಸಕ ಆನಂದ ಸಿಂಗ್ ಹಲ್ಲೆ ಆರೋಪಿ ಕಂಪ್ಲಿ ಶಾಸಕ ಗಣೇಶ್ ಬಂಧನ
ಮೈಸೂರು

ಶಾಸಕ ಆನಂದ ಸಿಂಗ್ ಹಲ್ಲೆ ಆರೋಪಿ ಕಂಪ್ಲಿ ಶಾಸಕ ಗಣೇಶ್ ಬಂಧನ

February 21, 2019

ಬೆಂಗಳೂರು: ಮಾಜಿ ಸಚಿವ, ಹಾಲಿ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಬಿಜೆಪಿ ಆಡಳಿತವಿರುವ ಮಹಾ ರಾಷ್ಟ್ರ, ಗುಜರಾತ್ ರಾಜ್ಯಗಳಲ್ಲೇ ತಲೆ ಮರೆಸಿಕೊಂಡಿದ್ದ ಗಣೇಶ್ ಅವರನ್ನು ನಿನ್ನೆ ಬಿಡದಿ ಪೊಲೀಸರು ಅಹಮದಾ ಬಾದ್ ಹೊರವಲಯದಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಬಹುತೇಕ ಬುಧ ವಾರ ತಡರಾತ್ರಿ ಇಲ್ಲ ಗುರುವಾರ ಮುಂಜಾನೆ ವಿಶೇಷ ವಿಮಾನದಲ್ಲಿ ನಗರಕ್ಕೆ ಕರೆತರುತ್ತಿದ್ದು, ನಾಳೆ ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ ಹಾಜರುಪಡಿಸಿ, ನಂತರ ತಮ್ಮ…

ಚಾಮುಂಡೇಶ್ವರಿ ಕ್ಷೇತ್ರದ ಕೆರೆಕಟ್ಟೆಗಳಿಗೆ  ಮುಂದಿನ ವರ್ಷ ನೀರು : ಜಿಟಿಡಿ ಭರವಸೆ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದ ಕೆರೆಕಟ್ಟೆಗಳಿಗೆ ಮುಂದಿನ ವರ್ಷ ನೀರು : ಜಿಟಿಡಿ ಭರವಸೆ

February 21, 2019

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಕೆರೆಕಟ್ಟೆಗಳಿಗೆ ಕೆಆರ್‍ಎಸ್ ಜಲಾಶಯದಿಂದ ನೀರು ಹರಿಸುವ ಉದ್ದೇಶಿತ ಯೋಜನೆ ಮುಂದಿನ ವರ್ಷ ಈಡೇರುವ ಮೂಲಕ ಕ್ಷೇತ್ರದ ಗ್ರಾಮಗಳ ನೀರಿನ ಸಮಸ್ಯೆ ಪರಿಹಾರವಾಗ ಲಿದೆ ಎಂದು ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಲು ವಾಗಿ ಬುಧವಾರ ಪ್ರವಾಸ ಕೈಗೊಂಡಿದ್ದ ಅವರು, ನಾಗವಾಲದಲ್ಲಿ ಪ್ರವಾಸೋದ್ಯಮ ಇಲಾಖೆಯ 50 ಲಕ್ಷ ರೂ. ಅನುದಾನದಲ್ಲಿ ಕೈಗೆತ್ತಿಕೊಳ್ಳುತ್ತಿರುವ ಶ್ರೀ…

ಕಬಿನಿ, ಕಾವೇರಿ ನಾಲೆಗಳಿಗೆ ನೀರು ಹರಿಸಲು ಆಗ್ರಹಿಸಿ ರೈತರ ಪ್ರತಿಭಟನೆ
ಮೈಸೂರು

ಕಬಿನಿ, ಕಾವೇರಿ ನಾಲೆಗಳಿಗೆ ನೀರು ಹರಿಸಲು ಆಗ್ರಹಿಸಿ ರೈತರ ಪ್ರತಿಭಟನೆ

February 21, 2019

ಮೈಸೂರು: ಕೃಷಿ ಚಟುವಟಿಕೆ ನಡೆಸಲು ಕಬಿನಿ, ಕಾವೇರಿ ಅಚ್ಚುಕಟ್ಟು ನಾಲೆಗಳಿಗೆ ನೀರು ಬಿಡುಗಡೆಗೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಕಾಡಾ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ರೈತ ಸಮುದಾಯ ಹಲವು ಸಮಸ್ಯೆ ಗಳಿಗೆ ತುತ್ತಾಗಿದೆ. ಬೆಳೆ ನಷ್ಟ, ಬೆಂಬಲ ಬೆಲೆ ಸಿಗದೇ ಇರುವುದು ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಮತ್ತು ಕಬಿನಿ ಅಚ್ಚುಕಟ್ಟು ನಾಲೆ ಗಳಿಗೆ ಕೂಡಲೇ ನೀರು ಬಿಡಬೇಕು. ಆ ಮೂಲಕ ರೈತರು ಹಾಗೂ ಜಾನುವಾರು ಗಳಿಗೆ ನೆರವಾಗಬೇಕೆಂದು…

ಮಾ.21ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ
ಮೈಸೂರು

ಮಾ.21ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ

February 21, 2019

ಮೈಸೂರು: ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ 2018-19ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಮೈಸೂರು ಜಿಲ್ಲೆಯ ಒಟ್ಟು 138 ಕೇಂದ್ರ ಗಳಲ್ಲಿ ನಡೆಯುವ ಪರೀ ಕ್ಷೆಗೆ 37,903 ವಿದ್ಯಾರ್ಥಿ ಗಳು ಹಾಜರಾಗುತ್ತಿದ್ದಾರೆ. 257 ಸರ್ಕಾರಿ, 126 ಅನುದಾನಿತ ಹಾಗೂ 264 ಅನು ದಾನರಹಿತ ಪ್ರೌಢಶಾಲೆಗಳ 18,955 ವಿದ್ಯಾರ್ಥಿಗಳು ಹಾಗೂ 18,948 ವಿದ್ಯಾರ್ಥಿನಿಯರು 2019ರ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. 138 ಮುಖ್ಯ ಅಧೀಕ್ಷಕರು, 27 ಹೆಚ್ಚು ವರಿ ಮುಖ್ಯ ಅಧೀಕ್ಷಕರನ್ನು ನೇಮಕ ಮಾಡಲಾಗಿದ್ದು, ತಾಲೂಕು ಮಟ್ಟದ 3, ಜಿಲ್ಲಾಮಟ್ಟದ…

1 80 81 82 83 84 194
Translate »