ಅರಮನೆ ಪಂಚಗವಿ ಮಠ ಉಳಿಸಲು ಆಗ್ರಹಿಸಿ ಕರವೇ ಪ್ರತಿಭಟನೆ
ಮೈಸೂರು

ಅರಮನೆ ಪಂಚಗವಿ ಮಠ ಉಳಿಸಲು ಆಗ್ರಹಿಸಿ ಕರವೇ ಪ್ರತಿಭಟನೆ

February 22, 2019

ಮೈಸೂರು: ಅರಮನೆ ಪಂಚಗವಿ ಮಠ ಉಳಿಸಲು ಆಗ್ರಹಿಸಿ ಕರ್ನಾ ಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಗುರುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು. ನಂಜನಗೂಡು ರಸ್ತೆಯ ಗೌರಿಶಂಕರ ಬಡಾ ವಣೆಯಲ್ಲಿರುವ ನೂರಾರು ಕೋಟಿ ರೂ. ಬೆಲೆ ಬಾಳುವ ಜಮೀನನ್ನು ಕೆಲವರು 5 ರೂ. ಛಾಪಾ ಕಾಗದದಲ್ಲಿ ಹಳೆಯ ದಿನಾಂಕ ನಮೂದಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದಿನ ಮಹಾರಾಜರು ಸರ್ವೆ ನಂ. 160, 161, 162, 163 ಸರ್ಕಾರದ ಆಸ್ತಿಯನ್ನು ಮಠಕ್ಕೆ ದಾನವಾಗಿ ನೀಡಿದ್ದರು. ಆದರೆ ಇದನ್ನು ಭೂಗಳ್ಳರು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದರು.

ಹಿಂದಿನ ಜಿಲ್ಲಾಧಿಕಾರಿಯವರು 21-1-2018ರಲ್ಲಿ ಇನ್ನು ಮುಂದೆ ಉಳಿದ 17 ಎಕರೆ ಜಾಗದಲ್ಲಿ ಭೂ ಪರಿವರ್ತನೆ ಮಾಡದೇ ಯಾವುದೇ ಕಟ್ಟಡಗಳನ್ನು ಕಟ್ಟುವಂತಿಲ್ಲ ಎಂದು ಆದೇಶ ನೀಡಿದ್ದರು. ಈ ಸಂಬಂಧ ಕ್ರಮ ವಹಿಸಲು ಎಸಿ ಅವರು ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದ್ದಾರೆ. ಆದರೆ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುವ ಮೂಲಕ ಈ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ಈ ಜಮೀನನ್ನು ಕೂಡಲೇ ತನ್ನ ಸುಪರ್ದಿಗೆ ತೆಗೆದು ಕೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಅನಾಥಾಶ್ರಮಕ್ಕೋ, ಆಸ್ಪತ್ರೆ, ಶಾಲಾ ಕಾಲೇಜುಗಳಿಗೆ ಬಳಸಿಕೊಳ್ಳುವಂತಾಗಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ಯಲ್ಲಿ ಕರವೇ ಜಿಲ್ಲಾಧ್ಯಕ್ಷ ಕೆ.ಮಾದೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »