Tag: Mysuru

ಮೈಸೂರು-ನರಸೀಪುರ ರಸ್ತೆ ಚತುಷ್ಪಥ-ಮುಂದಿನ ಗುರಿ: ಸಂಸದ ಧ್ರುವನಾರಾಯಣ
ಮೈಸೂರು

ಮೈಸೂರು-ನರಸೀಪುರ ರಸ್ತೆ ಚತುಷ್ಪಥ-ಮುಂದಿನ ಗುರಿ: ಸಂಸದ ಧ್ರುವನಾರಾಯಣ

February 22, 2019

ತಿ.ನರಸೀಪುರ: ಮೈಸೂರು-ನರಸೀಪುರ ದ್ವಿಪಥ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ, ಕೇಂದ್ರದಿಂದ ಅನುದಾನ ತರುವುದು ಹಾಗೂ ವಿದ್ಯಾವಂತ ಯುವ ಸಮೂಹಕ್ಕೆ ಉದ್ಯೋಗಕ್ಕೆ ಸಹಕಾರಿಯಾಗುವಂತಹ ಕೌಶಲ ತರಬೇತಿ ಕಲ್ಪಿಸಿಕೊಡಲು ಕಾರ್ಯಕ್ರಮಗಳನ್ನು ರೂಪಿಸುವುದು ನನ್ನ ಮುಂದಿನ ಗುರಿಯಾಗಿದೆ ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು. ತಾಲ್ಲೂಕಿನ ಸೋಸಲೆ ಗ್ರಾಮದಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 45 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ 419 ಕೋಟಿ ರೂ. ಯೋಜನೆಯಡಿ…

ಲೋಕಸಭಾ ಚುನಾವಣೆ ಹಿನ್ನೆಲೆ: ಐಎಎಸ್, ಐಪಿಎಸ್ ಸೇರಿದಂತೆ ಅಧಿಕಾರಿಗಳ ಭಾರೀ ವರ್ಗಾವರ್ಗಿ
ಮೈಸೂರು

ಲೋಕಸಭಾ ಚುನಾವಣೆ ಹಿನ್ನೆಲೆ: ಐಎಎಸ್, ಐಪಿಎಸ್ ಸೇರಿದಂತೆ ಅಧಿಕಾರಿಗಳ ಭಾರೀ ವರ್ಗಾವರ್ಗಿ

February 22, 2019

ಬೆಂಗಳೂರು: ಮುಂಬರುವ ಲೋಕ ಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಐಎಎಸ್, ಐಪಿಎಸ್ ಹಾಗೂ ಕೆಳವರ್ಗದ ಅಧಿಕಾರಿಗಳನ್ನು ವರ್ಗಾವರ್ಗಿ ಮಾಡಿದೆ. ಕೇಂದ್ರ ಚುನಾವಣಾ ಆಯೋಗ ನೀಡಿರುವ ಗಡುವು ಮತ್ತು ಮಾರ್ಗಸೂಚಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಗಿರುವ ಅಧಿಕಾರ ಬಳಸಿಕೊಂಡು, ಕಳೆದ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ವರ್ಗಾವರ್ಗಿಗೆ ಚಾಲನೆ ನೀಡಿದೆ. ನಿನ್ನೆಯಷ್ಟೇ ಸಚಿವಾಲಯ ಹಾಗೂ ಜಿಲ್ಲಾ ಮಟ್ಟದಲ್ಲಿ ಐಎಎಸ್ ಅಧಿಕಾರಿಗಳನ್ನು ವರ್ಗಾ ವಣೆ ಮಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ತಡರಾತ್ರಿ ಹಿರಿಯ ಐಪಿಎಸ್…

ರಸ್ತೆಬದಿ ಶೌಚಾಲಯಕ್ಕೆ ಕಾರು ಡಿಕ್ಕಿ:ನಾಲ್ವರು ಸಾವು
ಮೈಸೂರು

ರಸ್ತೆಬದಿ ಶೌಚಾಲಯಕ್ಕೆ ಕಾರು ಡಿಕ್ಕಿ:ನಾಲ್ವರು ಸಾವು

February 22, 2019

ಹಾಸನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅತೀ ವೇಗವಾಗಿ ಚಲಿಸಿದ ಕಾರು ರಸ್ತೆ ಬದಿಯ ಸೇಫ್ಟಿ ಗಾರ್ಡ್ ಮತ್ತು ತಾತ್ಕಾಲಿಕ ಶೌಚಾಲಯಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಮಕ್ಕಳು ಸೇರಿ ಕುಟುಂಬದ ನಾಲ್ವರು ಸಜೀವ ದಹನವಾದ ಹೃದಯವಿದ್ರಾವಕ ಘಟನೆ ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಬೆಂಗಳೂರು ಮೂಲದ ಖಾಸಗಿ ಕಂಪನಿಯೊಂದರ ಉದ್ಯೋಗಿ, ವಿವೇಕ್ ನಾಯಕ್ (45) ಅವರ ಪತ್ನಿ ರೇಷ್ಮಾ(38), ಪುತ್ರಿ ವಿನಂತಿ ನಾಯಕ್(10), ಪುತ್ರ ವಿಘ್ನೇಶ್ ನಾಯಕ್(4) ಅಪಘಾತದಲ್ಲಿ ಮೃತಪಟ್ಟವರು. ವಿವರ:…

ಆರೋಪಿ ಗಣೇಶ್ ಜೈಲುಪಾಲು
ಮೈಸೂರು

ಆರೋಪಿ ಗಣೇಶ್ ಜೈಲುಪಾಲು

February 22, 2019

ಬೆಂಗಳೂರು: ಮಾಜಿ ಸಚಿವ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮಾಜಿ ರೌಡಿ, ಅದೇ ಪಕ್ಷದ ಶಾಸಕ ಕಂಪ್ಲಿ ಗಣೇಶ್‍ಗೆ ಜೈಲೇ ಗತಿಯಾ ಗಿದೆ. ಆನಂದ್‍ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ, ಸರಿಸುಮಾರು ಒಂದು ತಿಂಗಳಿ ನಿಂದ ತಲೆಮರೆಸಿಕೊಂಡಿದ್ದ ಗಣೇಶ್ ಅವರನ್ನು ಬಿಡದಿ ಪೊಲೀಸರು ನಿನ್ನೆ ಗುಜರಾತ್‍ನ ಅಹಮದಾಬಾದ್‍ನ ಹೊರ ವಲಯದಲ್ಲಿ ಬಂಧಿಸಿ, ಇಂದು ಮುಂಜಾನೆ ಬೆಂಗಳೂರಿಗೆ ಕರೆ ತಂದಿದ್ದರು. ವಿಚಾ ರಣೆ ನಡೆಸಿದ ನಂತರ ಅವರ ಆರೋಗ್ಯ ತಪಾಸಣೆ ಮಾಡಿ, ಹೆಚ್ಚಿನ…

ಸಿದ್ಧಗಂಗಾ ಶ್ರೀಗಳು ಧಾರ್ಮಿಕ ನೆಲೆಗಟ್ಟಿನಲ್ಲಿ ಶಿಕ್ಷಣ ನೀಡಿದರು
ಮೈಸೂರು

ಸಿದ್ಧಗಂಗಾ ಶ್ರೀಗಳು ಧಾರ್ಮಿಕ ನೆಲೆಗಟ್ಟಿನಲ್ಲಿ ಶಿಕ್ಷಣ ನೀಡಿದರು

February 22, 2019

ಮೈಸೂರು: ಸಿದ್ದ ಗಂಗಾ ಶ್ರೀಗಳು ಪವಾಡ ಪುರುಷ ರಾಗಿದ್ದು, ಧಾರ್ಮಿಕ ನೆಲೆಗಟ್ಟಿನ ಮೇಲೆ ಶಿಕ್ಷಣ ನೀಡಿದರು. ಸಿದ್ಧಗಂಗಾ ಶ್ರೀಕ್ಷೇತ್ರ ದಲ್ಲಿ ಶಿಕ್ಷಣ ಪಡೆದ ಬಹಳಷ್ಟು ಮಂದಿ ಅಧಿಕಾರಿ, ರಾಜಕಾರಣಿ ಹಾಗೂ ಸಂತ ರಾಗಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ಜೆ.ಕೆ.ಮೈದಾನದ ಅಮೃತ ಮಹೋ ತ್ಸವ ಭವನದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಸಮಿತಿ ಟ್ರಸ್ಟ್ ಹಾಗೂ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಯುವಕ ಮಂಡಲ್ ವತಿಯಿಂದ ಗುರು ವಾರ ಆಯೋಜಿಸಿದ್ದ ತ್ರಿವಿಧ ದಾಸೋಹಿ, ಕಾಯಕ…

ಸ್ಕೂಟರ್ ಕಳವಾಗಿರುವ ಬಗ್ಗೆ ಫೈನಾನ್ಸ್‍ಗೆ  ವಂಚನೆ ಯತ್ನ: ಆರೋಪಿ ಬಂಧನ
ಮೈಸೂರು

ಸ್ಕೂಟರ್ ಕಳವಾಗಿರುವ ಬಗ್ಗೆ ಫೈನಾನ್ಸ್‍ಗೆ ವಂಚನೆ ಯತ್ನ: ಆರೋಪಿ ಬಂಧನ

February 22, 2019

ಮೈಸೂರು: ಸ್ಕೂಟರ್ ಕಳವಾಗಿದೆ ಎಂದು ಸುಳ್ಳು ದೂರು ನೀಡಿ ಫೈನಾನ್ಸ್ ಕಂಪನಿಗೆ ಮೋಸ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಲಷ್ಕರ್ ಪೊಲೀಸರು ಬಂಧಿಸಿ, 53 ಸಾವಿರ ರೂ. ಮೌಲ್ಯದ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ.ಮಂಡಿಮೊಹಲ್ಲಾದ ಪುಲಕೇಶಿ ರಸ್ತೆಯ ಎರೆಕಟ್ಟೆ ಸ್ಟ್ರೀಟ್ ನಿವಾಸಿ ಕೈಸರ್ ಪಾಶ@ಕೈಸರ್(19) ಬಂಧಿತ ಆರೋಪಿ. ಈತ ಫೆ.18ರಂದು ತನ್ನ ಸ್ಕೂಟರ್ ಸುಜುಕಿ ಆಕ್ಸಿಸ್ 125 (ಕೆಎ55 ವೈ3756) ಕಳ್ಳತನವಾಗಿದೆ ಎಂದು ಲಷ್ಕರ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ಸ್ಕೂಟರ್‍ಗೆ ಫೈನಾನ್ಸ್ ನೀಡಿದ್ದ ಶ್ರೀರಾಮ ಫೈನಾನ್ಸ್‍ಗೆ ಭೇಟಿ…

ಭಾರತದ ಚರಿತ್ರೆಯನ್ನು ವಿಕೃತಗೊಳಿಸಲಾಗುತ್ತಿದೆ
ಮೈಸೂರು

ಭಾರತದ ಚರಿತ್ರೆಯನ್ನು ವಿಕೃತಗೊಳಿಸಲಾಗುತ್ತಿದೆ

February 22, 2019

ಮೈಸೂರು: ಜಗತ್ತು ಹಿಂಸೆ ಯತ್ತ ಸಾಗುತ್ತಿದ್ದು, ಭಾರತದ ಚರಿತ್ರೆಯನ್ನೇ ವಿಕೃತಗೊಳಿಸಲಾಗುತ್ತಿದೆ. ಮಹಾಕಾವ್ಯಗಳನ್ನು ಚರಿತ್ರೆಗಳನ್ನಾಗಿ ನೋಡುವ ಪ್ರಸಂಗ ಬಂದಿದೆ ಎಂದು ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕ ಸಿ.ಬಸವಲಿಂಗಯ್ಯ ವಿಷಾದಿಸಿದರು. ಕಲಾಮಂದಿರದಲ್ಲಿ ಅಭಿಯಂತರರು ತಂಡ ಅಯೋಜಿಸಿರುವ ‘ರಾಷ್ಟ್ರೀಯ ರಂಗ ಉತ್ಸವ’ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕರು ಇತಿಹಾಸವನ್ನು ತಿಳಿಯದೆ ಕೇವಲ ಗಾಳಿ ಸುದ್ದಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡು ತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಭಾರತ ಬಹುತ್ವದಿಂದ ಕೂಡಿದ ಏಕತೆಯ ರಾಷ್ಟ್ರವಾಗಿದ್ದು, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ವಿಚಾರಗಳು…

ಕೆ.ಸಾಲುಂಡಿಯಲ್ಲಿ ಜಿಟಿಡಿ-ಸಿದ್ದು ಬೆಂಬಲಿಗರ ಮಾತಿನ ಚಕಮಕಿ
ಮೈಸೂರು

ಕೆ.ಸಾಲುಂಡಿಯಲ್ಲಿ ಜಿಟಿಡಿ-ಸಿದ್ದು ಬೆಂಬಲಿಗರ ಮಾತಿನ ಚಕಮಕಿ

February 22, 2019

ಮೈಸೂರು: ಮೈಸೂರು ತಾಲೂಕು, ಚಾಮುಂ ಡೇಶ್ವರಿ ಕ್ಷೇತ್ರದ ಕೆ.ಸಾಲುಂಡಿ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದ ರಾಮಯ್ಯ ಬೆಂಬಲಿಗರ ನಡುವೆ ವಾಗ್ವಾದ ನಡೆದ ಪ್ರಸಂಗ ಇಂದು ಮಧ್ಯಾಹ್ನ ನಡೆಯಿತು. ಗ್ರಾಮದಲ್ಲಿ ಕೈಗೊಂಡಿದ್ದ ಮುಖ್ಯ ರಸ್ತೆಯ 8 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡರು ಆಗಮಿಸಿದ್ದರು. ಸಚಿವರು ಆಗಮಿಸುತ್ತಿದ್ದರಿಂದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಆ ವೇಳೆ ಸಿದ್ದರಾಮಯ್ಯ ಬೆಂಬಲಿಗರೆನ್ನಲಾದ ಕೆಲವರು,…

ಸರ್ಕಾರಗಳ ಸೌಲಭ್ಯ ಸದ್ಬಳಕೆ ಮೂಲಕ ಸ್ವಂತ ಕೈಗಾರಿಕೆ ಆರಂಭಿಸಲು ಯುವ ಉದ್ಯಮಿಗಳಿಗೆ ಶಾಸಕರ ಕಿವಿಮಾತು
ಮೈಸೂರು

ಸರ್ಕಾರಗಳ ಸೌಲಭ್ಯ ಸದ್ಬಳಕೆ ಮೂಲಕ ಸ್ವಂತ ಕೈಗಾರಿಕೆ ಆರಂಭಿಸಲು ಯುವ ಉದ್ಯಮಿಗಳಿಗೆ ಶಾಸಕರ ಕಿವಿಮಾತು

February 22, 2019

ಮೈಸೂರು: ಸ್ವಂತ ಉದ್ಯಮ ಆರಂಭಿಸಲು ಸರ್ಕಾರಗಳು ನೀಡು ತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿ ಕೊಳ್ಳುವ ಮೂಲಕ ಯುವ ಸಮುದಾಯ ನಿರುದ್ಯೋಗ ಸಮಸ್ಯೆ ನಿವಾರಿಸಲು ಮುಂದಾಗಬೇಕು ಎಂದು ಶಾಸಕ ಎಲ್.ನಾಗೇಂದ್ರ ಸಲಹೆ ನೀಡಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾ ಟಕ ಸಣ್ಣ ಕೈಗಾರಿಕೆಗಳ ಉದ್ಯಮಿದಾರರ ಸಂಘ (ಕಾಸಿಯಾ), ಮೈಸೂರು ಜಿಲ್ಲಾ ಪರಿ ಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿ ದಾರರ ಸಂಘದ ಸಂಯುಕ್ತಾಶ್ರಯದಲ್ಲಿ 2018-19ರ ನೂತನ ಜವಳಿ…

ವೈಫೈ ಸೌಲಭ್ಯದೊಂದಿಗೆ ಮೈಸೂರಲ್ಲಿ ಶೀಘ್ರ  ಹೈಟೆಕ್ ಸಾರ್ವಜನಿಕ ಶೌಚಾಲಯ ವ್ಯವಸ್ಥೆ
ಮೈಸೂರು

ವೈಫೈ ಸೌಲಭ್ಯದೊಂದಿಗೆ ಮೈಸೂರಲ್ಲಿ ಶೀಘ್ರ ಹೈಟೆಕ್ ಸಾರ್ವಜನಿಕ ಶೌಚಾಲಯ ವ್ಯವಸ್ಥೆ

February 22, 2019

ಮೈಸೂರು: ಸ್ವಚ್ಛ ನಗರಿ ಖ್ಯಾತಿ ಪಡೆದಿರುವ ಮೈಸೂರು ನಗರದಲ್ಲಿ ಹೈಟೆಕ್ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಇಂಟರ್‍ನೆಟ್ ಸಂಪರ್ಕ ಹೊಂದಿರುವ ವೈಫೈ ಸೌಲಭ್ಯ ದೊಂದಿಗೆ ನಿರ್ಮಿಸಲುದ್ದೇಶಿಸಿರುವ ಶೌಚಾಲಯಗಳಲ್ಲಿ ರೆಸ್ಟ್ ರೂಂ, ಮಹಿಳೆಯರಿಗಾಗಿ ಮಗುವಿಗೆ ಹಾಲು ಕುಡಿಸುವ ಕೊಠಡಿ (ಬ್ರೆಸ್ಟ್ ಫೀಡಿಂಗ್ ರೂಂ), ಕೈತೊಳೆಯುವ ಸೌಲಭ್ಯ ಕಲ್ಪಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಡಿ.ಜಿ. ನಾಗರಾಜು ತಿಳಿಸಿದರು. ಮಳೆ ನೀರು ಶೇಖರಣೆ ಮತ್ತು ಮರು ಬಳಕೆ ವ್ಯವಸ್ಥೆ ಮೂಲಕ ನೀರಿನ ಸಂರಕ್ಷ ಣೆಗೆ…

1 79 80 81 82 83 194
Translate »