ವೈಫೈ ಸೌಲಭ್ಯದೊಂದಿಗೆ ಮೈಸೂರಲ್ಲಿ ಶೀಘ್ರ  ಹೈಟೆಕ್ ಸಾರ್ವಜನಿಕ ಶೌಚಾಲಯ ವ್ಯವಸ್ಥೆ
ಮೈಸೂರು

ವೈಫೈ ಸೌಲಭ್ಯದೊಂದಿಗೆ ಮೈಸೂರಲ್ಲಿ ಶೀಘ್ರ ಹೈಟೆಕ್ ಸಾರ್ವಜನಿಕ ಶೌಚಾಲಯ ವ್ಯವಸ್ಥೆ

February 22, 2019

ಮೈಸೂರು: ಸ್ವಚ್ಛ ನಗರಿ ಖ್ಯಾತಿ ಪಡೆದಿರುವ ಮೈಸೂರು ನಗರದಲ್ಲಿ ಹೈಟೆಕ್ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಇಂಟರ್‍ನೆಟ್ ಸಂಪರ್ಕ ಹೊಂದಿರುವ ವೈಫೈ ಸೌಲಭ್ಯ ದೊಂದಿಗೆ ನಿರ್ಮಿಸಲುದ್ದೇಶಿಸಿರುವ ಶೌಚಾಲಯಗಳಲ್ಲಿ ರೆಸ್ಟ್ ರೂಂ, ಮಹಿಳೆಯರಿಗಾಗಿ ಮಗುವಿಗೆ ಹಾಲು ಕುಡಿಸುವ ಕೊಠಡಿ (ಬ್ರೆಸ್ಟ್ ಫೀಡಿಂಗ್ ರೂಂ), ಕೈತೊಳೆಯುವ ಸೌಲಭ್ಯ ಕಲ್ಪಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಡಿ.ಜಿ. ನಾಗರಾಜು ತಿಳಿಸಿದರು.

ಮಳೆ ನೀರು ಶೇಖರಣೆ ಮತ್ತು ಮರು ಬಳಕೆ ವ್ಯವಸ್ಥೆ ಮೂಲಕ ನೀರಿನ ಸಂರಕ್ಷ ಣೆಗೆ ಆದ್ಯತೆಯೊಂದಿಗೆ ಮೈಸೂರಿನ ಪುರ ಭವನದ ಆವರಣ (ಗಾಂಧಿ ಸ್ಕ್ವೇರ್ ಭಾಗಕ್ಕೆ) ಹಾಗೂ ಗ್ರಾಮಾಂತರ ಬಸ್ ನಿಲ್ದಾಣದ ಎದುರಿನ ಟ್ಯಾಕ್ಸಿ ಸ್ಟ್ಯಾಂಡ್‍ನಲ್ಲಿ ವೈಫೈ ಸಮೇತ ಮೊದಲ ಹಂತದಲ್ಲಿ ಪ್ರಾಯೋಗಿಕ ವಾಗಿ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಹೌಸಿಂಗ್ ಅಂಡ್ ಅರ್ಬನ್ ಅಫೇರ್ (MOHUA) ಸಚಿವಾ ಲಯ ಹಾಗೂ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ (NIUA) ವತಿ ಯಿಂದ ರಾಜಸ್ಥಾನದ ಉದಯಪುರ್, ಹರಿಯಾಣದ ಫರಿದಾಬಾದ್ ಹಾಗೂ ಕರ್ನಾಟಕದ ಮೈಸೂರು ನಗರದಲ್ಲಿ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಗೆ ಅನುಮೋದನೆ ದೊರೆತಿದೆ.

ಈಗಾಗಲೇ ಪ್ಲಾನ್ ಮತ್ತು ಎಸ್ಟಿಮೇಟ್ ಅಂತಿಮಗೊಂಡಿದ್ದು, ಇಷ್ಟರಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು. ಡಿಸೆಂಬರ್ ವೇಳೆಗೆ ಶೌಚಾಲಯ ನಿರ್ಮಾಣ ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಪೂರ್ಣಗೊಳಿ ಸಲುದ್ದೇಶಿಸಲಾಗಿದೆ.

ಪೇ ಅಂಡ್ ಯೂಸ್: ನೀರಿನ ಸಂರಕ್ಷಣೆ, ನೀರಿನ ಮಿತ ಬಳಕೆ, ತ್ಯಾಜ್ಯ ನೀರಿನ ಮರು ಬಳಕೆ ಸೌಲಭ್ಯದೊಂದಿಗೆ ಅಂತಾರಾಷ್ಟ್ರೀಯ ಸ್ಟ್ಯಾಂಡರ್ಡ್‍ನಲ್ಲಿ ನಿರ್ಮಿಸುವ ಈ ಸಾರ್ವಜನಿಕ ಶೌಚಾಲಯಗಳನ್ನು ಬಳಸು ವವರಿಗೆ ಕೈಗೆಟಕುವ ಶುಲ್ಕ ನಿಗದಿ ಮಾಡಲಾಗುವುದು. ಸ್ಯಾನಿಟರಿ ನ್ಯಾಪ್‍ಕಿನ್ ವೆಂಡಿಂಗ್ ಮೆಷಿನ್ ಹೊಂದಿರುವ ಇಲ್ಲಿ ಸ್ವಚ್ಛತೆ, ನೈರ್ಮಲ್ಯವನ್ನು ನಿರ್ವಹಣೆ ಮಾಡುವ ಮೂಲಕ ಆಧುನಿಕ ತಂತ್ರ ಜ್ಞಾನ ಅಳವಡಿಸಿ ಯಾವುದೇ ಕಾರ್ಪೊ ರೇಟ್ ಕಂಪನಿಗಳಿಗೂ ಕಮ್ಮಿ ಇಲ್ಲದಂತೆ ಮೈಸೂರು ಮಹಾನಗರ ಪಾಲಿಕೆಯು ಮೇಲ್ವಿಚಾರಣೆ ನಡೆಸಲಿದೆ.

ಸೆನ್ಸಾರ್ ಅಳವಡಿಸಿ ಸ್ವಯಂ ಚಾಲಿತ ಉಪಕರಣಗಳು, ಮಹಿಳೆಯರು, ಪುರುಷ ರಿಗೆ ಪ್ರತ್ಯೇಕ ರೆಸ್ಟ್ ರೂಂಗಳು, ತಾಯಂ ದಿರು ಮಕ್ಕಳಿಗೆ ಹಾಲುಣಿಸಲು ವ್ಯವಸ್ಥೆ ಮಾಡಲಾಗುವುದು.

ಸ್ಮಾರ್ಟ್ ಫೀಚರ್ಸ್: ಕಂಟ್ರೋಲ್ಡ್ ಆಟೋ ಮ್ಯಾಟಿಕ್ ಫ್ಲಷಿಂಗ್ ಆಪರೇಷನ್ಸ್, ಇಂಧನ ಉಳಿತಾಯ, ಸೋಲಾರ್ ಪ್ಯಾನಲ್‍ಗಳು, ಎಲ್‍ಇಡಿ ದೀಪಗಳು, ಮಹಿಳೆಯರು, ಮಕ್ಕಳು, ಅಂಗವಿಕಲರಿಗೆ ಹೊಂದು ವಂತಹ ಸೌಲಭ್ಯ ಹಾಗೂ ಸಿಸಿ ಕ್ಯಾಮರಾ ಗಳನ್ನು ಸಾರ್ವಜನಿಕ ಹೈಟೆಕ್ ಶೌಚಾ ಲಯಗಳಲ್ಲಿ ಒದಗಿಸಲಾಗುವುದು.

ಎನ್‍ಐಇ ತಂತ್ರಜ್ಞಾನ: ಮೈಸೂರಿನ ಎನ್‍ಐಇ ಸಂಸ್ಥೆಯು ಅಭಿವೃದ್ಧಿಪಡಿಸಿ ರುವ ತಂತ್ರಜ್ಞಾನ ಇದಾಗಿದ್ದು, ನಗರ ಪಾಲಿಕೆಯು ಯೋಜನೆಯನ್ನು ಅನುಷ್ಠಾನ ಗೊಳಿಸುತ್ತಿದೆ. ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ನ್ಯಾಷನಲ್ ಡೆವೆಲಪ್‍ಮೆಂಟ್ (USAID) ಈ ವಿನೂತನ ಯೋಜನೆಗೆ ಅನುದಾನ ನೀಡಲಿದೆ.

Translate »