ಮೈಸೂರು: ಸ್ಕೂಟರ್ ಕಳವಾಗಿದೆ ಎಂದು ಸುಳ್ಳು ದೂರು ನೀಡಿ ಫೈನಾನ್ಸ್ ಕಂಪನಿಗೆ ಮೋಸ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಲಷ್ಕರ್ ಪೊಲೀಸರು ಬಂಧಿಸಿ, 53 ಸಾವಿರ ರೂ. ಮೌಲ್ಯದ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ.ಮಂಡಿಮೊಹಲ್ಲಾದ ಪುಲಕೇಶಿ ರಸ್ತೆಯ ಎರೆಕಟ್ಟೆ ಸ್ಟ್ರೀಟ್ ನಿವಾಸಿ ಕೈಸರ್ ಪಾಶ@ಕೈಸರ್(19) ಬಂಧಿತ ಆರೋಪಿ.
ಈತ ಫೆ.18ರಂದು ತನ್ನ ಸ್ಕೂಟರ್ ಸುಜುಕಿ ಆಕ್ಸಿಸ್ 125 (ಕೆಎ55 ವೈ3756) ಕಳ್ಳತನವಾಗಿದೆ ಎಂದು ಲಷ್ಕರ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ಸ್ಕೂಟರ್‍ಗೆ ಫೈನಾನ್ಸ್ ನೀಡಿದ್ದ ಶ್ರೀರಾಮ ಫೈನಾನ್ಸ್‍ಗೆ ಭೇಟಿ ನೀಡಿ ವಿಚಾರಣೆ ನಡೆ ಸಿದ್ದರು. ಈ ವೇಳೆ ಕೈಸರ್, ಇದುವರೆವಿಗೂ ಒಂದೇ ಒಂದು ವಾಹನ ಸಾಲದ ಕಂತು ಕಟ್ಟದಿರುವುದು ಗೊತ್ತಾಗಿದೆ. ನಂತರದಲ್ಲಿ ಕೈಸರ್ ನಂಬರ್‍ಪ್ಲೇಟ್ ಇಲ್ಲದ ಸ್ಕೂಟರ್ ಓಡಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬುಧವಾರ ಗುಡ್‍ಶೆಫರ್ಡ್ ಕಾನ್ವೆಂಟ್ ಬಳಿ ಕೈಸರ್‍ನನ್ನು ಬಂಧಿಸಿದ್ದಾರೆ. ನಂತರ ವಿಚಾರಣೆಗೊಳ ಪಡಿಸಿದಾಗ ಫೈನಾನ್ಸ್‍ನಿಂದ ಸಾಲದ ಮೂಲಕ ಖರೀದಿಸಿದ ನಂತರ ಕಂತು ಹಣ ಕಟ್ಟಿಲ್ಲ. ಸ್ಕೂಟರ್ ಅನ್ನು ಇಮ್ರಾನ್ ಎಂಬು ವರಿಗೆ ಅಡವಿಟ್ಟು, ಒಂದು ಕೀ ನೀಡಿದ್ದೆ. ನನ್ನ ಬಳಿ ಯಿದ್ದ ಇನ್ನೊಂದು ಕೀ ಬಳಸಿ ಸ್ಕೂಟರ್ ಕಳವು ಮಾಡಿ, ನಂಬರ್ ಪ್ಲೇಟ್ ತೆಗೆದು ಓಡಿಸುತ್ತಿದ್ದೆ ಎಂದು ಒಪ್ಪಿಕೊಂಡಿ ದ್ದಾನೆ. ಅಷ್ಟೇ ಅಲ್ಲದೆ, ಫೈನಾನ್ಸ್, ಇನ್ಷೂರೆನ್ಸ್ ಕಂಪನಿ ಮತ್ತು ಅಡಮಾನವಿಟ್ಟ ವ್ಯಕ್ತಿಗೆ ಮೋಸ ಮಾಡುವ ಉದ್ದೇಶದಿಂದ ತಂದೆ ಕೀಸರ್ ಪಾಷ ಮತ್ತು ತಾಯಿ ಫರ್ವಿನ್ ತಾಜ್ ಸೇರಿ ಸಂಚು ರೂಪಿಸಿದ್ದಾಗಿಯೂ ತಿಳಿಸಿದ್ದಾನೆ.
ಈ ಸಂಬಂಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.