ಭಾರತದ ಚರಿತ್ರೆಯನ್ನು ವಿಕೃತಗೊಳಿಸಲಾಗುತ್ತಿದೆ
ಮೈಸೂರು

ಭಾರತದ ಚರಿತ್ರೆಯನ್ನು ವಿಕೃತಗೊಳಿಸಲಾಗುತ್ತಿದೆ

February 22, 2019

ಮೈಸೂರು: ಜಗತ್ತು ಹಿಂಸೆ ಯತ್ತ ಸಾಗುತ್ತಿದ್ದು, ಭಾರತದ ಚರಿತ್ರೆಯನ್ನೇ ವಿಕೃತಗೊಳಿಸಲಾಗುತ್ತಿದೆ. ಮಹಾಕಾವ್ಯಗಳನ್ನು ಚರಿತ್ರೆಗಳನ್ನಾಗಿ ನೋಡುವ ಪ್ರಸಂಗ ಬಂದಿದೆ ಎಂದು ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕ ಸಿ.ಬಸವಲಿಂಗಯ್ಯ ವಿಷಾದಿಸಿದರು.

ಕಲಾಮಂದಿರದಲ್ಲಿ ಅಭಿಯಂತರರು ತಂಡ ಅಯೋಜಿಸಿರುವ ‘ರಾಷ್ಟ್ರೀಯ ರಂಗ ಉತ್ಸವ’ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕರು ಇತಿಹಾಸವನ್ನು ತಿಳಿಯದೆ ಕೇವಲ ಗಾಳಿ ಸುದ್ದಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡು ತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತ ಬಹುತ್ವದಿಂದ ಕೂಡಿದ ಏಕತೆಯ ರಾಷ್ಟ್ರವಾಗಿದ್ದು, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ವಿಚಾರಗಳು ವಿನಿಮಯವಾಗು ತ್ತಿವೆ. ರಂಗಭೂಮಿ ವಿಚಾರ ವಿನಿಮಯದ ಬಹುಮುಖ್ಯ ಭಾಗವಾಗಿದ್ದು, ಸಮಾಜದ ಆಗು-ಹೋಗುಗಳಿಗೆ ದರ್ಪಣವಾಗಿ ಕೆಲಸ ಮಾಡುತ್ತಿದೆ. ಕಲೆಯ ಬಗ್ಗೆ ಕ್ಷ-ಕಿರಣವನ್ನು ರಂಗ ಉತ್ಸವಗಳು ಬೀರಲಿವೆ ಎಂದರು.
ಬೆಂಗಳೂರಿನಲ್ಲಿ ಬಹು ಭಾಷಿಗರೇ ಹೆಚ್ಚಾ ಗಿದ್ದು, ರಾಷ್ಟ್ರಮಟ್ಟದ ನಾಟಕ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ. ಹಾಗೆಯೇ ದೆಹಲಿ ಯಲ್ಲಿಯೂ ಅಂತರರಾಷ್ಟ್ರೀಯ ಮಟ್ಟ ದಲ್ಲಿ ನಾಟಕೋತ್ಸವಗಳನ್ನು ನಡೆಸಲಾಗುತ್ತಿದೆ. ಮೈಸೂರು ಸಾಂಸ್ಕøತಿಕ ನಗರವಾಗಿದ್ದು, ಇಲ್ಲಿ ಸದಾ ರಂಗ ಪ್ರಯೋಗಗಳು ನಡೆಯುತ್ತಲೆ ಇರು ತ್ತವೆ. ಮೈಸೂರಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ರಂಗಾಯಣ ಹಲವಾರು ರಂಗ ಉತ್ಸವಗಳನ್ನು ನಿರಂತರವಾಗಿ ನಡೆಸಿ ಕೊಂಡು ಬರುತ್ತಿವೆ. ಕಳೆದ ತಿಂಗಳು ನಡೆದ ಬಹುರೂಪಿ, ರಾಷ್ಟ್ರೀಯ ನಾಟಕೋತ್ಸವಗಳು ಯಶಸ್ವಿಯಾಗಿವೆ ಎಂದು ತಿಳಿಸಿದರು.

ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ಸದಸ್ಯ ತೊ.ನಂಜುಂಡಸ್ವಾಮಿ ಮಾತನಾಡಿ, ನಮ್ಮ ಕೇಂದ್ರದ ವತಿಯಿಂದ ರಾಜ್ಯದ ಹಳ್ಳಿ ಹಳ್ಳಿ ಗಳಲ್ಲಿ ನಾಟಕ ಪ್ರದರ್ಶನಗಳನ್ನು ಆಯೋ ಜಿಸಲಾಗುತ್ತಿದೆ. ಇದರಿಂದಾಗಿ ಟಿವಿಯನ್ನು ಬಿಟ್ಟು ಮತ್ತೆ ರಂಗಾಸಕ್ತರು ನಾಟಕಗಳನ್ನು ನೋಡಲು ಬರುತ್ತಿದ್ದಾರೆ ಎಂದರು.

ಕಳೆದ 2 ವರ್ಷಗಳಿಂದ ನಾಶವಾಗುತ್ತಿರುವ ಕಲೆಗಳನ್ನು ಉಳಿಸುವ ದೃಷ್ಟಿಯಿಂದ ಹಾಗೂ ರಂಗಭೂಮಿಯನ್ನು ವಿಸ್ತರಿಸುವ ಸಲುವಾಗಿ ಹಲವಾರು ಕಾರ್ಯಚಟುವಟಿಕೆಗಳನ್ನು ಹಮ್ಮಿ ಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಮಲೆಮಹದೇ ಶ್ವರ ಬೆಟ್ಟದಲ್ಲಿ ಜನಪದ ಗೀತೆಗಳ ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸೇರಿದಂತೆ ಇತರೆ ಇಲಾಖೆಗಳು ಇದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಸರ್ಕಾರ ಕಲೆ, ಸಾಹಿತ್ಯಕ್ಕಾಗಿ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡುತ್ತಿದ್ದು, ಈ ಹಣ ಮುಖ್ಯವಾಗಿ ಗ್ರಾಮೀಣ ಪ್ರತಿಭೆಗಳಿಗೆ ತಲು ಪಬೇಕಾಗಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ರುವ ಕಲಾವಿದರನ್ನು ಹೆಚ್ಚೆಚ್ಚು ಪ್ರೋತ್ಸಾಹಿ ಸಬೇಕಾಗಿದೆ ಎಂದರು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇ ಶಕ ಹನೂರು ಚನ್ನಪ್ಪ, ಅಭಿಯಂತರರು ತಂಡದ ಅಧ್ಯಕ್ಷ ಹೆಚ್.ಎಸ್.ಸುರೇಶ್‍ಬಾಬು, ಕಾರ್ಯ ದರ್ಶಿ ಬಿ.ಎಸ್.ತಾಂಡವಮೂರ್ತಿ ಇದ್ದರು.

Translate »