ಮಾ.21ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ
ಮೈಸೂರು

ಮಾ.21ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ

February 21, 2019

ಮೈಸೂರು: ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ 2018-19ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ.

ಮೈಸೂರು ಜಿಲ್ಲೆಯ ಒಟ್ಟು 138 ಕೇಂದ್ರ ಗಳಲ್ಲಿ ನಡೆಯುವ ಪರೀ ಕ್ಷೆಗೆ 37,903 ವಿದ್ಯಾರ್ಥಿ ಗಳು ಹಾಜರಾಗುತ್ತಿದ್ದಾರೆ. 257 ಸರ್ಕಾರಿ, 126 ಅನುದಾನಿತ ಹಾಗೂ 264 ಅನು ದಾನರಹಿತ ಪ್ರೌಢಶಾಲೆಗಳ 18,955 ವಿದ್ಯಾರ್ಥಿಗಳು ಹಾಗೂ 18,948 ವಿದ್ಯಾರ್ಥಿನಿಯರು 2019ರ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

138 ಮುಖ್ಯ ಅಧೀಕ್ಷಕರು, 27 ಹೆಚ್ಚು ವರಿ ಮುಖ್ಯ ಅಧೀಕ್ಷಕರನ್ನು ನೇಮಕ ಮಾಡಲಾಗಿದ್ದು, ತಾಲೂಕು ಮಟ್ಟದ 3, ಜಿಲ್ಲಾಮಟ್ಟದ 3 ಹಾಗೂ ಪ್ರತೀ ಕೇಂದ್ರಕ್ಕೆ ಒಬ್ಬರಂತೆ ಅಬ್ಸರ್ವರ್‍ಗಳನ್ನು ನಿಯೋಜಿ ಸಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರದಲ್ಲೂ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಪರೀಕ್ಷಾ ಅಕ್ರಮಗಳು ನಡೆಯದಂತೆ ಕ್ರಮ ವಹಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇ ಶಕಿ ಮಮತಾ ಅವರು ಫಲಿತಾಂಶ ಉತ್ತಮಪಡಿಸಲು ವಿಶೇಷ ತರಗತಿ, ಹೆಚ್ಚುವರಿ ಕ್ಲಾಸ್ ತೆಗೆದುಕೊಂಡು ವಿದ್ಯಾರ್ಥಿಗಳ ಸಾಮಥ್ರ್ಯ ಹೆಚ್ಚಿಸಲು ಪ್ರಯತ್ನಿಸಿದ್ದಾರೆ. ಕಳೆದ 2017-18ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗಿದ್ದ 34,873 ವಿದ್ಯಾರ್ಥಿಗಳ ಪೈಕಿ 29,048 ಮಂದಿ ಉತ್ತೀರ್ಣರಾಗಿ ಮೈಸೂರು ಜಿಲ್ಲೆಯು ಶೇ.83.30 ಫಲಿ ತಾಂಶದೊಂದಿಗೆ ರಾಜ್ಯದಲ್ಲಿ 11ನೇ ಸ್ಥಾನ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »