`ಅಮ್ಮ’ನ ಆಶೀರ್ವಾದ ಪಡೆದ ಸಾವಿರಾರು ಮಂದಿ
ಮೈಸೂರು

`ಅಮ್ಮ’ನ ಆಶೀರ್ವಾದ ಪಡೆದ ಸಾವಿರಾರು ಮಂದಿ

February 21, 2019

ಮೈಸೂರು: ಅತೀವ ಪ್ರೇಮ, ಕರುಣೆ ಮತ್ತು ನಿರಂತರ ಸೇವೆಯ ಉಜ್ವಲ ಪ್ರತೀಕವಾಗಿರುವ, ಜಗತ್ತಿನಾ ದ್ಯಂತ `ಅಮ್ಮ’ ಎಂದು ಅತ್ಯಂತ ಭಕ್ತಿ ಯಿಂದ ಕರೆಯಲ್ಪಡುವ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಅಮ್ಮ ನವರ ದರ್ಶನ ಮತ್ತು ಆಶೀರ್ವಾದವನ್ನು ಬುಧವಾರವೂ ಸಾವಿರಾರು ಮಂದಿ ಪಡೆದುಕೊಂಡರು.

ನಿನ್ನೆ(ಫೆ.19) ಮೈಸೂರಿಗೆ ಆಗಮಿಸಿದ ಅಮ್ಮ, ನಗರದ ಬೋಗಾದಿಯ 2ನೇ ಹಂತದಲ್ಲಿರುವ ಮಾತಾ ಅಮೃತಾನಂದ ಮಯಿ ಮಠದ ಆವರಣದಲ್ಲಿ ಮಠದ ಬ್ರಹ್ಮಸ್ಥಾನ ದೇವಸ್ಥಾನದ 19ನೇ ವಾರ್ಷಿ ಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಪ್ರವಚನ, ಭಜನೆ, ಧ್ಯಾನ, ಅಮ್ಮನ ದರ್ಶನ ಕಾರ್ಯಕ್ರಮದಲ್ಲಿ ವಿಜ್ಞಾನ-ತಂತ್ರಜ್ಞಾನ ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಜತೆಗೆ ಪ್ರಕೃತಿ, ಸಂಸ್ಕøತಿ ಹಾಗೂ ಸಹಜ ಜೀವಿ ಗಳಿಗೂ ಸಮಾನ ಮಹತ್ವ ನೀಡುವಂತೆ ಕರೆ ನೀಡಿದ್ದರಲ್ಲದೆ, ಪ್ರವಚನ ನೀಡಿದ್ದರು.

ಇಂದೂ ಬೆಳಿಗ್ಗೆ 7 ಗಂಟೆಗೆ ಅಮ್ಮನ ದಿವ್ಯ ಸಾನಿಧ್ಯದಲ್ಲಿ ಸಾಮೂಹಿಕ ಶನಿ ದೋಷ ನಿವಾರಣಾ ಪೂಜೆ ನೆರವೇರಿಸಿದ ನಂತರ ಪ್ರವಚನ, ಭಜನೆ ಮತ್ತು ಧ್ಯಾನ ವನ್ನು ಭಕ್ತರಿಗೆ ಧಾರೆಯೆರೆದು ವೈಯಕ್ತಿಕ ದರ್ಶನ ನೀಡುವ ಮೂಲಕ ಭಕ್ತರನ್ನು ಸಂತೃಪ್ತಿಗೊಳಿಸಿದರು.

ಸಾವಿರಾರು ಮಂದಿ ಭಕ್ತರು: ಆಂಧ್ರ್ರ ಪ್ರದೇಶ, ತೆಲಂಗಾಣ, ಕೇರಳ, ತಮಿಳು ನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಅಮ್ಮನ ದರ್ಶನ ಪಡೆದರು.

ಸಿಸಿ ಕ್ಯಾಮರಾ ಕಣ್ಗಾವಲು: ಅಮ್ಮ ಮೈಸೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯ ದಂತೆ ಮುಂಜಾಗೃತಾ ಕ್ರಮವಾಗಿ ನೂರಾರು ಮಂದಿ ಪೊಲೀಸರು, ಸಭಾಂಗಣದ ಸುತ್ತ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.
ಪಾರ್ಕಿಂಗ್ ವ್ಯವಸ್ಥೆ: ಬೋಗಾದಿ ರಸ್ತೆ ಯಿಂದ ಮಾತಾ ಅಮೃತಾನಂದಮಯಿ ಮಠದ ಕಡೆಗೆ ಬರುವ ರಸ್ತೆಯ 2 ಬದಿ ಮತ್ತು ಅಕ್ಕಪಕ್ಕದ ರಸ್ತೆಗಳ ಬದಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.

Translate »