Tag: Srirangapatna

ಇಬ್ಬರು ಟಿಪ್ಪರ್ ಕಳ್ಳರ ಬಂಧನ
ಮಂಡ್ಯ

ಇಬ್ಬರು ಟಿಪ್ಪರ್ ಕಳ್ಳರ ಬಂಧನ

July 18, 2018

ಶ್ರೀರಂಗಪಟ್ಟಣ: ಟಿಪ್ಪರ್‍ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಟಿಪ್ಪರ್ ಕಳ್ಳರನ್ನು ಬಂಧಿಸುವಲ್ಲಿ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ಪೆರಂಬೂರು ಜಿಲ್ಲೆಯ ಕುಣ್ಣಮ್ ತಾಲೂಕಿನ ಸಿರುವಲಯಲರೂ ಗ್ರಾಮದ ನಿವಾಸಿ ವಿಮಲ್ ಬಿನ್ ಗುಣಶೇಖರನ್, ದಾವಣಗೆರೆ ಟೌನ್‍ನ ಇಮ್ರಾನ್ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 27 ಲಕ್ಷ ರೂ. ಮೌಲ್ಯದ ಟಿಪ್ಪರ್ ಲಾರಿ, ಮಿನಿ ಟಿಪ್ಪರ್ ಲಾರಿ, ಮಹೀಂದ್ರಾ ಬೋಲೆರೋ ಹಾಗೂ ನೋಂದಣಿ ಸಂಖ್ಯೆ ಇಲ್ಲದ ಅಶೋಕ್ ಲೈಲ್ಯಾಂಡ್ ದೋಸ್ತ್ ಮಿನಿಗೂಡ್ಸ್ ವಾಹನವನ್ನು ವಶಪಡಿಸಿ ಕೊಳ್ಳಲಾಗಿದೆ….

ರಂಗನತಿಟ್ಟು ಜಲಮಯ: ಸಂಕಷ್ಟದಲ್ಲಿ ಪಕ್ಷಿ ಸಂಕುಲ
ಮಂಡ್ಯ

ರಂಗನತಿಟ್ಟು ಜಲಮಯ: ಸಂಕಷ್ಟದಲ್ಲಿ ಪಕ್ಷಿ ಸಂಕುಲ

July 17, 2018

ಶ್ರೀರಂಗಪಟ್ಟಣ: ಪಕ್ಷಿ ಸಂಕುಲದ ಸುರಕ್ಷಿತ ತಾಣ, ವಿದೇಶಿ ಪಕ್ಷಿಗಳ ಸಂತಾನೋತ್ಪತ್ತಿ ದ್ವೀಪ ರಂಗನತಿಟ್ಟು, ಉಕ್ಕಿ ಹರಿಯುತ್ತಿರುವ ಕಾವೇರಿ ನೀರಿನಿಂದ ಮುಳುಗಡೆಯಾಗಿದ್ದು, ಅಪಾರ ಸಂಖ್ಯೆಯ ಪಕ್ಷಿಗಳು ಕೊಚ್ಚಿ ಹೋಗಿರುವ ಆತಂಕ ವ್ಯಕ್ತವಾಗಿದೆ. ಕೆಆರ್‌ಎಸ್‌ ಜಲಾಶಯದಿಂದ ಕಳೆದ ಮೂರ್ನಾಲ್ಕು ದಿನಗಳಿಂದ ಹೆಚ್ಚಿನ ಪ್ರಮಾಣ ದಲ್ಲಿ ನೀರನ್ನು ಕಾವೇರಿ ನದಿಗೆ ಬಿಡ ಲಾಗುತ್ತಿತ್ತಾದರೂ ರಂಗನತಿಟ್ಟು ಪಕ್ಷಿ ಧಾಮದ ಪಕ್ಷಿ ಸಂಕುಲಕ್ಕೆ ಯಾವುದೇ ಅಪಾಯವಾಗಿರಲಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಬೋಟಿಂಗ್ ವ್ಯವಸ್ಥೆ ನಿಷೇಧಿಸಲಾಗಿತ್ತು. ಆದರೆ ಕಳೆದ ರಾತ್ರಿಯಿಂದ ಅಣೆಕಟ್ಟೆಯಿಂದ ನದಿಗೆ ಹೆಚ್ಚಿನ ಪ್ರಮಾಣ ದಲ್ಲಿ…

ಪ್ರವಾಹ: ನದಿಪಾತ್ರದ ಧಾರ್ಮಿಕ ಶ್ರದ್ಧಾ, ಪ್ರವಾಸಿ ತಾಣಗಳು ಜಲಾವೃತ
ಮಂಡ್ಯ

ಪ್ರವಾಹ: ನದಿಪಾತ್ರದ ಧಾರ್ಮಿಕ ಶ್ರದ್ಧಾ, ಪ್ರವಾಸಿ ತಾಣಗಳು ಜಲಾವೃತ

July 17, 2018

ಶ್ರೀರಂಗಪಟ್ಟಣ:  ಕೃಷ್ಣರಾಜ ಸಾಗರ ಅಣೆಕಟ್ಟೆ ಸಂಪೂರ್ಣ ಭರ್ತಿ ಯಾದ ಹಿನ್ನೆಲೆಯಲ್ಲಿ ಜಲಾಶಯದಿಂದ ಸುಮಾರು 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಪಟ್ಟಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಟ್ಟಣದ ಪಶ್ಚಿಮ ವಾಹಿನಿಯಲ್ಲಿರುವ ಪುರಾತನ ಮಂಟಪ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಜಲಾವೃತವಾಗಿವೆ. ಚೆಕ್‍ಪೋಸ್ಟ್ ಬಳಿಯ ಸಾಯಿ ಮಂದಿರಕ್ಕೆ ನೀರು ನುಗ್ಗಿದ್ದು, ಜನರು ಹಾಗೂ ಪ್ರವಾಸಿಗರು ತಂಡೋಪತಂಡ ವಾಗಿ ವೆಲೆಸ್ಲಿ ಸೇತುವೆ ಬಳಿ ಜಮಾವಣೆ ಗೊಂಡು ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿಳುತ್ತಿದ್ದಾರೆ. ಅಲ್ಲದೇ ಪ್ರಸಿದ್ಧ…

ಶ್ರೀರಂಗಪಟ್ಟಣದ  ಗೌತಮ ಕ್ಷೇತ್ರ ಜಲಾವೃತ
ಮಂಡ್ಯ

ಶ್ರೀರಂಗಪಟ್ಟಣದ  ಗೌತಮ ಕ್ಷೇತ್ರ ಜಲಾವೃತ

July 16, 2018

ಮಂಡ್ಯ:  ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಶ್ರೀರಂಗಟಪ್ಟಣ ತಾಲೂಕಿನ ದೊಡ್ಡೇ ಗೌಡನ ಕೊಪ್ಪಲು ಬಳಿಯ ಪುರಾತನ ಪ್ರಸಿದ್ಧ ಕ್ಷೇತ್ರ ಗೌತಮ ಕ್ಷೇತ್ರ ಜಲಾವೃತ ಗೊಂಡಿದೆ. ಕಾವೇರಿ ನದಿ ತೀರದಲ್ಲಿರುವ ಗೌತಮ ಕ್ಷೇತ್ರದ ಮಠ ಜಲಾವೃತ ಗೊಂಡಿದ್ದರೂ, ಇಲ್ಲಿನ ಶ್ರೀಗಜಾನನ ಸ್ವಾಮೀಜಿ ಗಳು ತಮ್ಮ ಮೂವರು ಭಕ್ತರೊಂದಿಗೆ ಮಠದಲ್ಲೇ ಇರುವುದು ಆತಂಕ ಸೃಷ್ಟಿಸಿದೆ. ಇಂದು ಅಥವಾ ನಾಳೆ ಜಲಾಶಯದಿಂದ ನದಿಗೆ ಮತ್ತಷ್ಟು ಪ್ರಮಾಣದಲ್ಲಿ ನೀರು ಹರಿದು ಬಿಡಲಾಗುತ್ತಿರುವ ಹಿನ್ನೆಲೆಯಲ್ಲಿ ಮಠದಿಂದ ಸ್ವಾಮೀಜಿ ಅವರನ್ನು ಹೊರತರಲು ಜಿಲ್ಲಾಡಳಿತ ಪ್ರಯತ್ನ…

ನೀರಲ್ಲಿ ಕೊಚ್ಚಿ ಹೋದ ವ್ಯಕ್ತಿ, ನಡುಗಡ್ಡೆಯಲ್ಲಿ ಸಿಲುಕಿದ್ದ ಮತ್ತೊಬ್ಬನ ರಕ್ಷಣೆ
ಮಂಡ್ಯ

ನೀರಲ್ಲಿ ಕೊಚ್ಚಿ ಹೋದ ವ್ಯಕ್ತಿ, ನಡುಗಡ್ಡೆಯಲ್ಲಿ ಸಿಲುಕಿದ್ದ ಮತ್ತೊಬ್ಬನ ರಕ್ಷಣೆ

July 15, 2018

ಮಂಡ್ಯ:  ಕೆಆರ್‌ಎಸ್‌ನಿಂದ ಹೆಚ್ಚು ವರಿ ನೀರು ಬಿಟ್ಟ ಬೆನ್ನಲ್ಲೇ ಅಪಾಯಮಟ್ಟ ಮೀರಿ ಹರಿಯುತ್ತಿರುವ ಕಾವೇರಿ ನದಿಯ ಪ್ರವಾಹದಲ್ಲಿ ಸಿಲುಕಿದ್ದ ಯುವಕರಿಬ್ಬರ ಪೈಕಿ ಓರ್ವ ರಕ್ಷಿಸಲ್ಪಟ್ಟು, ಮತ್ತೊಬ್ಬ ಕೊಚ್ಚಿ ಹೋಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಚಂದ್ರವನ ಆಶ್ರಮ ಸಮೀಪದ ಗೂಳಿತಿಟ್ಟು ಬಳಿ ಇಂದು ಸಂಜೆ 5 ಗಂಟೆ ಯಲ್ಲಿ ನಡೆದಿದೆ. ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಮಹಾದೇವ ಬಿನ್ ವೆಂಕಟಯ್ಯ (28) ಎಂಬ ಯುವಕನನ್ನೇ ರಕ್ಷಿಸಲಾಗಿದ್ದು ಮತ್ತೊಬ್ಬನ ಮಾಹಿತಿ ತಿಳಿದು ಬಂದಿಲ್ಲ. ಕಾವೇರಿ ನದಿಯಲ್ಲಿ ನೀರು ಹೆಚ್ಚಳವಾದ ಪರಿಣಾಮ…

ಶ್ರೀರಂಗಪಟ್ಟಣದಲ್ಲಿ ಹಾಡಹಗಲೇ ಪುಡಿರೌಡಿಗಳ ಹಟ್ಟಹಾಸ
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಹಾಡಹಗಲೇ ಪುಡಿರೌಡಿಗಳ ಹಟ್ಟಹಾಸ

July 15, 2018

ಮಂಡ್ಯ:  ಹಾಡಹಗಲೇ ಪುಡಿರೌಡಿಗಳ ತಂಡವೊಂದು ರಾಡು, ಲಾಂಗ್, ಬಾಟಲಿಗಳನ್ನಿಡಿದು ದಾಳಿ ಮಾಡಿ ಮೂವರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಭರತ್, ಚಂದ್ರು, ಸತ್ಯನಾರಾಯಣ ಎಂಬುವವರೇ ತೀವ್ರ ಗಾಯಗೊಂಡವರು. ಹಿನ್ನೆಲೆ: ಪಟ್ಟಣದ ಮುಖ್ಯರಸ್ತೆಯ ಕೋಟೆದ್ವಾರದ ಎದುರಿನ ಮೀನಿನ ಅಂಗಡಿ ಯಲ್ಲಿ ಕೆಲಸ ಮಾಡುತ್ತಿದ್ದ ಮೂವರ ಮೇಲೆ ದುಷ್ಕರ್ಮಿಗಳು ದಿಢೀರ್ ದಾಳಿ ನಡೆಸಿ ಮೀನಿನ ಅಂಗಡಿಯೊಳಗಿದ್ದ ರವಿ ಅವರ ಮಗ ಭರತ್‍ನಿಗೆ ರಾಡಿನಿಂದ ಹೊಡೆದು ಬಾಟಲಿಯಿಂದ ಚುಚ್ಚಿದ್ದಾರೆ. ತಪ್ಪಿಸಿಕೊಳ್ಳಲು ಓಡುತ್ತಿದ್ದ ಮತ್ತೊಬ್ಬ ರಾಮಚಂದ್ರ ಅವರ…

ಗ್ರಾಮ ಲೆಕ್ಕಿಗನ ವರ್ಗಾವಣೆಗೆ ಒತ್ತಾಯಿಸಿ ಧರಣಿ
ಮಂಡ್ಯ

ಗ್ರಾಮ ಲೆಕ್ಕಿಗನ ವರ್ಗಾವಣೆಗೆ ಒತ್ತಾಯಿಸಿ ಧರಣಿ

July 12, 2018

ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಅರಕೆರೆ ಹೋಬಳಿ ಪೀಹಳ್ಳಿ ಮತ್ತು ಬನ್ನಹಳ್ಳಿ ವೃತ್ತದ ಗ್ರಾಮಲೆಕ್ಕಿ ಗರ (ವಿಎ) ವರ್ಗಾವಣೆಗೆ ಒತ್ತಾಯಿಸಿ ನಗರದ ವಿಶ್ವೇಶ್ವ ರಯ್ಯ ಪ್ರತಿಮೆ ಎದುರು ಬುಧ ವಾರ ವೃತ್ತಗಳ ವ್ಯಾಪ್ತಿಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ವೇಳೆ ಜಿಲ್ಲಾಧಿ ಕಾರಿ ಅವರಿಗೆ ಮನವಿ ಸಲ್ಲಿ ಸಿದ ಪ್ರತಿಭಟನಾಕಾರರು, ಪೀಹಳ್ಳಿ ಮತ್ತು ಬನ್ನಹಳ್ಳಿ ವೃತ್ತದಲ್ಲಿ ಕಳೆದ 4 ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ಗ್ರಾಮಲೆಕ್ಕಾಧಿಕಾರಿ ನಿಂಗಪ್ಪಾಜಿ ಲಂಚಕೋರರಾಗಿದ್ದಾರೆಂದು ಆರೋಪಿಸಿದರು. ಲಂಚ ನೀಡದಿದ್ದರೆ ಸಬೂಬು ಹೇಳುತ್ತಾರೆ. ಪ್ರಶ್ನಿಸಿದರೆ ಕ್ರಿಮಿನಲ್ ಮೊಕದ್ದಮೆ…

ಮನೆಗಳ್ಳರ ಬಂಧನ: 18.56 ಲಕ್ಷ ಮೌಲ್ಯದ ವಸ್ತುಗಳ ವಶ
ಮಂಡ್ಯ

ಮನೆಗಳ್ಳರ ಬಂಧನ: 18.56 ಲಕ್ಷ ಮೌಲ್ಯದ ವಸ್ತುಗಳ ವಶ

July 12, 2018

ಶ್ರೀರಂಗಪಟ್ಟಣ:  ಹಗಲು ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ, ಅವರಿಂದ 18,56,800ರೂ. ಮೌಲ್ಯದ ಚಿನ್ನ, ಬೆಳ್ಳಿ, ಟಿವಿ, ಸೀರೆಯನ್ನು ಕೆಆರ್‌ಎಸ್‌ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಾಲರಾಜ್(62), ಸೋಮಶೇಖರ್ ಅಲಿಯಾಸ್ ಸೋಮ(32), ಶ್ರೀಕಂಠ ಅಲಿಯಾಸ್ ಕಂಠ (32), ರಾಜು ಬಿನ್ ನಾಗರಾಜ(19) ಬಂಧಿತರಾಗಿದ್ದು, ಇವರೆಲ್ಲರು ಮೈಸೂರು ಜಿಲ್ಲೆ ಕೆ.ಆರ್.ನಗರದ ಪಟ್ಟಣದ ಬೋವಿ ಜನಾಂಗದ ಶ್ರೀರಾಮ ಬ್ಲಾಕ್‍ನ ನಿವಾಸಿ ಗಳಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. ಈ ನಾಲ್ವರು ಟಾಟಾ ಏಸ್ ವಾಹನವನ್ನು ಬಳಸಿಕೊಂಡು ಹಾಡುಹಗಲೇ ಮನೆಗಳ ಕಳ್ಳತನ ಮಾಡುತ್ತಿರುವ ಬಗ್ಗೆ…

ತ್ರಿವೇಣಿ ಸಂಗಮದಲ್ಲಿ ಶೆಡ್‍ಗಳ ತೆರವು ಖಂಡಿಸಿ ಪ್ರತಿಭಟನೆ
ಮಂಡ್ಯ

ತ್ರಿವೇಣಿ ಸಂಗಮದಲ್ಲಿ ಶೆಡ್‍ಗಳ ತೆರವು ಖಂಡಿಸಿ ಪ್ರತಿಭಟನೆ

July 10, 2018

ಶ್ರೀರಂಗಪಟ್ಟಣ:  ಪಟ್ಟಣದ ಹೊರವಲಯದ ತ್ರಿವೇಣಿ ಸಂಗಮದಲ್ಲಿ ರೈತರು ತಮ್ಮ ಜಮೀನುಗಳಲ್ಲಿ ನಿರ್ಮಿಸಿ ಕೊಂಡಿದ್ದ ಶೆಡ್‍ಗಳನ್ನು ತಾಲೂಕು ಆಡಳಿತ ತೆರವು ಮಾಡಿರುವ ಕ್ರಮ ಖಂಡಿಸಿ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ರೈತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪಟ್ಟಣದ ಮಿನಿವಿಧಾನಸೌಧದ ಎದುರು ಸೋಮವಾರ ಜಮಾಯಿಸಿದ ಗಂಜಾಂನ ಹಾಗೂ ಸಂಗಮ್‍ನ ರೈತರು ಹಾಗೂ ಸ್ಥಳೀಯ ವ್ಯಾಪಾರಿಗಳು ಆರ್‍ಐ ದೊಡ್ಡಯ್ಯ ಹಾಗೂ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ರಮೇಶ ಬಾಬು ಬಂಡಿಸಿದ್ದೇಗೌಡ ಮಾತನಾಡಿ, ಹಾಲಿ…

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಮಂಡ್ಯ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

July 8, 2018

ಮದ್ದೂರು/ ಶ್ರೀರಂಗಪಟ್ಟಣ:  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯ ಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ಶನಿವಾರ ಮದ್ದೂರು ಮತ್ತು ಶ್ರೀರಂಗಪಟ್ಟಣದಲ್ಲಿ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿದರು. ಮದ್ದೂರು: ಪಟ್ಟಣದ ಪ್ರವಾಸಿ ಮಂದಿರ ದಿಂದ ಮೆರವಣಿಗೆಯಲ್ಲಿ ಆಗಮಿಸಿದ ಅಂಗನವಾಡಿ ನೌಕರರು, ದಾರಿಯುದ್ದಕ್ಕೂ ಸರ್ಕಾರದ ಅವೈಜ್ಞಾನಿಕ ತೀರ್ಮಾನಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ತಾಲೂಕು ಕಚೇರಿಗೆ ಆಗಮಿಸಿ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ಸಂಘದ ಅಧ್ಯಕ್ಷೆ ಎಚ್.ವಿಜಯಲಕ್ಷ್ಮಿ ಮಾತನಾಡಿ, ಕೇಂದ್ರ ಸರ್ಕಾರವು…

1 2 3 4 5
Translate »